
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಆಯೋಜಿಸಿದ ‘ಸಾಮರಸ್ಯ ಸಂಕ್ರಾಂತಿ’ ಅಭಿಯಾನದ ಬಗ್ಗೆ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಹೇಳಿರುವ ಮಾತುಗಳು ಸರಿಯಾಗಿಲ್ಲ ಶಾಸಕರು ನಮ್ಮ ಮನೆಗೆ ಬಂದು ಊಟ ಮಾಡಿದರೆ ಅದು ಹೇಗೆ ಸಂವಿಧಾನ ವಿರೋಧಿಯಾಗುತ್ತೆ ಇದು ಸಮಾಜವನ್ನು ಕುಗ್ಗಿಸುವ ಕೆಲಸವಾಗಿದೆ ಎಂದು ಬಿಜೆಪಿ ಎಸ್.ಸಿ ಮೋರ್ಚಾ ಮುಖಂಡ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿದ್ದಾರೆ.
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ನೂರನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತಾಲೂಕಿನಾದ್ಯಂತ ‘ಸಾಮರಸ್ಯ ಸಂಕ್ರಾಂತಿ’ ಹಮ್ಮಿಕೊಂಡಿದ್ದರು. ತಾಲೂಕಿನ 129 ದಲಿತ ಕುಟುಂಬಗಳ ಮನೆಗೆ ಭೇಟಿ ನೀಡಿ, ಅವರೊಂದಿಗೆ ಕುಳಿತು ಊಟ ಮಾಡಿ, ಕಷ್ಟ-ಸುಖ ವಿಚಾರಿಸುವುದು ಈ ಅಭಿಯಾನದ ಉದ್ದೇಶವಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ಆರಂಭವಾಗುತ್ತಿದ್ದ ಈ ಕಾರ್ಯಕ್ರಮದಲ್ಲಿ ಶಾಸಕರು ದಿನಕ್ಕೆ 10 ರಿಂದ 15 ಮನೆಗಳಿಗೆ ಭೇಟಿ ನೀಡುತ್ತಿದ್ದರು.ಆದರೆ ಈ ಮಹತ್ವದ ಕಾರ್ಯಕ್ರಮದ ಬಗ್ಗೆ “ದಲಿತರ ಮನೆಗೆ ಹೋಗಿ ಊಟ ಮಾಡುವುದು ಸಂವಿಧಾನ ವಿರೋಧಿ ಮತ್ತು ಸಮುದಾಯಕ್ಕೆ ಮಾಡುವ ಅಪಮಾನ” ಎಂಬ ಅರ್ಥದಲ್ಲಿ ರಕ್ಷಿತ್ ಶಿವರಾಮ್ ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದರು. ರಾಜಕೀಯ ಮಾಡುವ ಉದ್ದೇಶದಿಂದ ಒಂದು ಮಾದರಿ ಕಾರ್ಯಕ್ರಮದಬಗ್ಗೆ ಈರೀತಿಯಾಗಿ ಹೇಳಿಕೆ ನೀಡುತ್ತಿರುವುದು ಖಂಡನೀಯ
ಇದು ಕೇವಲ ರಾಜಕೀಯವಲ್ಲ, ತುಳುನಾಡಿನ ಸಂಪ್ರದಾಯದಂತೆ ಶಾಸಕರು ನಮ್ಮ ಮನೆಗೆ ನೆಂಟರಂತೆ ಬಂದಿದ್ದಾರೆ. ಪುದುವೆಟ್ಟುವಿನಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಗ್ರಾಮ ಪಂಚಾಯತ್ ಸದಸ್ಯರ ಮನೆಯಲ್ಲಿಯೇ ಶಾಸಕರು ಊಟ ಮಾಡಿದ್ದಾರೆ. ಹಾಗಿರುವಾಗ ಇದರಲ್ಲಿ ರಾಜಕೀಯ ಎಲ್ಲಿದೆ ಶಾಸಕರು ಎಲ್ಲಿ ತಯಾರಿಸಿದ ಊಟ ಮಾಡಿದ್ದರು ಎಂದು ಅವರಲ್ಲಿ ಕೇಳಿ ತಿಳಿದುಕೊಳ್ಳಲಿ ಎಂದಿದ್ದಾರೆ.
ಶಾಸಕರು ನಮ್ಮ ಮನೆಗೆ ಬರುವುದನ್ನು ನಾವು ಹೃದಯಪೂರ್ವಕವಾಗಿ ಸ್ವಾಗತಿಸಿದ್ದೇವೆ ಅದರಿಂದ ಅವರಿಗೇನು ತೊಂದರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನ ಮುಖಂಡರಾದ ಸಿ.ಕೆ ಚಂದ್ರಕಲಾ, ಈಶ್ವರ ಭೈರ, ರಾಘವ ಕಲ್ಮಂಜ, ಸಂತೋಷ್ ಮಲೆಬೆಟ್ಟು, ವಿಶ್ವನಾಥ್ ಕಳೆಂಜ ಹಾಗೂ ಇತರರು ಇದ್ದರು.