
ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್ ಗ್ರಾಮ ಸಭೆಗೆ ಗ್ರಾಮಸ್ಥರು ಬಾರದೇ ಇದ್ದುದರಿಂದ ಗ್ರಾಮ ಸಭೆ ಮುಂದೂಡಲ್ಪಟ್ಟ ಘಟನೆ ನಡೆದಿದೆ. ಫೆ.5ರಂದು ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಅಧ್ಯಕ್ಷತೆಯಲ್ಲಿ ಶಾರದಾ ಮಂಟಪದಲ್ಲಿ ಬೆಳಿಗ್ಗೆ 10.30 ಪ್ರಾರಂಭವಾದಾಗ ಕೇವಲ ಬೆರಳೆಣಿಕೆಯ ಗ್ರಾಮಸ್ಥರು ಮಾತ್ರ ಉಪಸ್ಥಿತರಿದ್ದು, ಅಧ್ಯಕ್ಷರು ಸಭೆಯನ್ನು 11 ಗಂಟೆಯವರೆಗೆ ಮುಂದೂಡಿದರು ಅದರೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸದೇ ಇದ್ದುದರಿಂದ 11.05 ಕ್ಕೆ ಕೋರಂ ಕೊರತೆಯಿಂದಾಗಿ ಗ್ರಾಮ ಸಭೆ ಮುಂದೂಡಲ್ಪಟ್ಟಿದೆ. ಎಂದು ಸಭೆಯಲ್ಲಿ ತಿಳಿಸಿದರು.
ಈ ಭಾರಿಯ ಗ್ರಾಮಸಭೆಯಲ್ಲಿ ವಿನಾಃ ಕಾರಣ ಗಲಾಭೆ ಎಬ್ಬಿಸುವ ಸಂಭವ ಇದೆ ಅದ್ದರಿಂದ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು ವ್ಯಕ್ತಿಯೊಬ್ಬರು ಕೇಳಿಕೊಂಡಿದ್ದಲ್ಲದೇ , ಗ್ರಾಮ ಸಭೆಯಲ್ಲಿ ಗಲಾಟೆ ಆಗುತ್ತದೆ. ಎಂಬ ಸಂದೇಶವೂ ಎಲ್ಲೆಡೆ ಹರಿದಾಡಿದ ಪರಿಣಾಮವಾಗಿ ಗ್ರಾಮಸ್ಥರು ಗ್ರಾಮ ಸಭೆಗೆ ಬರಲು ಹಿಂಜರಿದಿದ್ದಾರೆ. ಯಾರೇ ವ್ಯಕ್ತಿಯಾಗಲಿ ಪ್ರತಿಷ್ಠೆಗಾಗಿ ಈ ರೀತಿಯ ಸಂದೇಶವನ್ನು ಗ್ರಾಮದಲ್ಲಿ ಹರಡಿ ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸುವುದು ತಪ್ಪು. ಗ್ರಾಮಸಭೆ ಮುಂದೂಡಲ್ಪಟ್ಟದ್ದು ಬೇಸರ ತರಿಸಿದೆ.ಎಂದು ಗ್ರಾಮಸ್ಥೆ ವಿನುತಾ ರಜತ್ ಅಭಿಪ್ರಾಯ ಹೊರಹಾಕಿದ್ದಾರೆ.
ಉಜಿರೆ ಜನಾರ್ದನ ದೇವಸ್ಥಾನದ ಬ್ರಹ್ಮಕಲಶ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಕಾರಣದಿಂದ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಳ್ಳಲು ಅಸಾಧ್ಯ ವಾಗಿರಬಹುದು, ಹಾಗಾಗಿ ಬ್ರಹ್ಮಕಲಶ ಕಾರ್ಯಕ್ರಮದ ಬಳಿಕ ಸಭೆ ನಡೆಸಲು ಗ್ರಾಮಸ್ಥರು ಸಲಹೆ ನೀಡಿದರು.
ಮಾರ್ಗದರ್ಶಿ ಅಧಿಕಾರಿಯಾಗಿ ನೆರಿಯ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ.ಯತೀಶ್ ಕುಮಾರ್ ಎಂ.ಎಸ್ ರವರು ಗ್ರಾಮ ಸಭೆಯಲ್ಲಿ ಭಾಗವಹಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರಮೇಲು,ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಛ, ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.