ಡಿ.17ರಂದು ಉಜಿರೆಯ ವೃತ್ತದ ಬಳಿ ಕ್ರಿಸ್ಮಸ್ ಸಂಭ್ರಮಾಚರಣೆ : ಅನುಗ್ರಹ ಚರ್ಚ್ ಬಳಿಯಿಂದ ಬೆಳಾಲು ರಸ್ತೆವರೆಗೆ ಮೆರವಣಿಗೆ

ಉಜಿರೆ: ತಾಲೂಕಿನ ವಿವಿಧ ಚರ್ಚ್ ಗಳ ಪಾಲನಾ ಸಮಿತಿ, ವಿದ್ಯಾರ್ಥಿಗಳು ಹಾಗೂ ಸಮಾಜ ಬಾಂಧವರ ವತಿಯಿಂದ ಡಿ.17ರಂದು ಉಜಿರೆಯ ವೃತ್ತದ ಬಳಿ ಕ್ರಿಸ್ಮಸ್ ಸಂಭ್ರಮಾಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕಪುಚಿನ್ ಕೃಷಿಕ್ ಸೇವಾಕೇಂದ್ರ ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನಸ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ 17ರಂದು ಸಂಜೆ 5.30ಗಂಟೆಗೆ ಉಜಿರೆಯ ಅನುಗ್ರಹ ಚರ್ಚ್ ಬಳಿಯಿಂದ ಬೆಳಾಲು ರಸ್ತೆ ತನಕ ಮೆರವಣಿಗೆ ನಡೆಯಲಿದೆ. ಹಬ್ಬದ ಹಿಂದಿರುವ ಸೋದರತ್ವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯಕ್ರಮ ಇದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಶಿಕ್ಷಣ ಸಂಯೋಜಕಿ ಎಮಿಲ್ಡಾ ಪಾಯಸ್, ಮುಖ್ಯ ಶಿಕ್ಷಕಿ ದಿವ್ಯಾ,ಕಾರ್ಯನಿರ್ವಾಹಕಿ ಮೆರೀನಾ ಲೆಕ್ಕಿಗರಾದ ಪೂರ್ಣಿಮಾ ಮೋನಿಸ್ ಉಪಸ್ಥಿತರಿದ್ದರು.

error: Content is protected !!