ರಾಷ್ಟ್ರೀಕೃತ ಬ್ಯಾಂಕ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿ: ಶಾಸಕ ಹರೀಶ್ ಪೂಂಜ: ವಿಜಯ ಕ್ರೆ.ಕೊ.ಆ.ಸೊಸೈಟಿ ನವೀಕೃತ ಗುರುವಾಯನಕೆರೆ ಶಾಖೆ ಉದ್ಘಾಟನೆ

 

 

ಬೆಳ್ತಂಗಡಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಶೀಘ್ರ ಸ್ಪಂದಿಸುವ ಮೂಲಕ ವ್ಯವಹಾರ ಕ್ಷೇತ್ರ ಬೆಳೆಯಲು ಸಹಕಾರಿ. ವಿಜಯ ಕ್ರೆಡಿಟ್ ಕೋ.ಆಪರೇಟಿವ್ ಉಭಯ ಜಿಲ್ಲೆಗಳಲ್ಲಿ ಇಂದು ಅಗ್ರ ಪಂಕ್ತಿಯಲ್ಲಿರಲು ಅದೇ ಕಾರಣವಾಗಿದ್ದು ಭವಿಷ್ಯದಲ್ಲಿ ರಾಷ್ಟ್ರೀಕೃತ ಮಾದರಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಶಾಸಕ ಹರೀಶ್ ಪೂಂಜ ಶುಭ ಹಾರೈಸಿದರು.
ಗುರುವಾಯನಕೆರೆಯ ವಿಜಯ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ನವೀಕೃತ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಡಳಿತ ಮಂಡಳಿ ಸಭಾ ಕೊಠಡಿ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಕಳೆದ 18 ವರ್ಷಗಳ ಹಿಂದೆ ಆರಂಭಗೊಂಡ ವಿಜಯ ಕ್ರೆಡಿಟ್.ಕೋ.ಆಪರೇಟಿವ್ .ಸೊಸೈಟಿಯು ಇಂದು ಉಭಯ ಜಿಲ್ಲೆಯಲ್ಲಿ 18 ಶಾಖೆಗಳಾಗಿ ಬೆಳೆಯುವಲ್ಲಿ ಅಪರಿಮಿತ ಸಾಧನೆ ತೋರಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಮಾದರಿ ಬ್ಯಾಂಕ್ ಆಗಿ ಬೆಳೆಯಲಿ ಎಂದು ಹಾರೈಸಿದರು.
ಭದ್ರತಾ ಕೊಠಡಿ ಉದ್ಘಾಟಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಸಮಾಜದ ಆರ್ಥಿಕತೆಗೆ ಪೂರಕವಾಗಿ ಸ್ಪಂದಿಸುತ್ತಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಎಲ್ಲ ತಾಲೂಕಿನ ಅಭಿವೃದ್ಧಿಗೆ ನೆರವು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಗಣಕ ಯಂತ್ರ ಉದ್ಘಾಟಿಸಿದ ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಮಾತನಾಡಿ ಶುಭ ಹಾರೈಸಿದರು.
ಸೊಸೈಟಿಯ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಬೆಳ್ತಂಗಡಿ ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ಉದ್ಯಮಿ ಅಬ್ದುಲ್ ರಶೀದ್, ಸೊಸೈಟಿ ಉಪಾಧ್ಯಕ್ಷ ಎಂ.ಜಿ.ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ಉಪಸ್ಥಿತರಿದ್ದರು.
ಜಯರಾಮ ಶೆಟ್ಟಿ ಸಾಧನ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಬಿ.ಸೀತಾರಾಮ ಶೆಟ್ಟಿ ವಂದಿಸಿದರು.

error: Content is protected !!