ಪೂಜ್ಯ ಖಾವಂದರ ಸಮಾಜಮುಖಿ ಕಾರ್ಯಗಳನ್ನು ಅಭಿನಂದಿಸಿದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಉಜಿರೆ : ಸೂರ್ಯ ಹುಟ್ಟಿದಾಗ ಬಹಳಷ್ಟು ಬೆಳಕು ಇರುತ್ತದೆ. ಚೈತನ್ಯ ಸೃಷ್ಟಿಯಾಗುತ್ತದೆ. ಆದರೆ ಸೂರ್ಯ ಮುಳುಗುವಾಗ ಕತ್ತಲು ಆವರಿಸುತ್ತದೆ. ಆಗ ಸಣ್ಣ ಹಣತೆಯಿಂದ ನಮ್ಮ ಸುತ್ತಲಿನ ಕತ್ತಲನ್ನು ದೂರ ಮಾಡಬೇಕು. ನಮಗೆಲ್ಲರಿಗೂ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಾಗೋದಿಕ್ಕೆ ಸಾಧ್ಯ ಇಲ್ಲ. ಆದರೆ ಅವರು ಹಚ್ಚಿರುವ ದೀಪ ನಮ್ಮ ಸುತ್ತಲಿನ ಕತ್ತಲನ್ನು ಹೋಗಲಾಡಿಸೋಕೆ ಸಾಧ್ಯ ಆಗಿದೆ ಎಂದು ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಇದು ದೀಪಾವಳಿ ಹಬ್ಬದ ಸಂಭ್ರಮ. ಈ ಹಬ್ಬವನ್ನು ಮನೆಯವರ ಜೊತೆ ಆಚರಿಸಬೇಕಿತ್ತು. ಆದರೆ ಧರ್ಮಸ್ಥಳದ ಕ್ಷೇತ್ರದಲ್ಲಿ 2 ಹಬ್ಬಗಳನ್ನು ಜೊತೆಯಾಗಿ ಆಚರಿಸೋದಿಕ್ಕೆ ಅವಕಾಶ ಸಿಕ್ಕಿದೆ. ಈ ಜೀವನದಲ್ಲಿ ಇದಕ್ಕಿಂತ ಪುಣ್ಯ ಇನ್ನೇನಿದೆ. ಊರಿನ ಜನಗಳ‌ ಜೊತೆ ಪುಣ್ಯ‌ಭಾವದಲ್ಲಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

ವಿವಿಧ ಕ್ಷೇತ್ರಗಳಿಗೆ ಧರ್ಮಾಧಿಕಾರಿ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡುತ್ತಾ, ಶ್ರೀ ಕ್ಷೇತ್ರ ಯಾವ ರೀತಿಯಾಗಿ ಪರಿವರ್ತನೆಗೆ ಕಾರಣವಾಗಿದೆ ಎಂಬುವುದು ನಾವೆಲ್ಲಾ ನೋಡಿದ್ದೇವೆ. ಅದಕ್ಕೆ ಕಾರಣ ಆಗಿರುವುದು ಧರ್ಮಾಧಿಕಾರಿಯವರು. ಈ ಅದ್ಭುತ
ಬದಲಾವಣೆಯ ಕ್ರಾಂತಿ ದೇವರ ಆಶಿರ್ವಾದದಿಂದ ಎಷ್ಟು ಸತ್ಯ ವೋ ಅಷ್ಟೇ ರತ್ನವರ್ವ ಹೆಗ್ಗಡೆಯವರ‌ ಅಪೇಕ್ಷೆಯ ಫಲ. 20 ನೇ ವರ್ಷದಲ್ಲಿ ಪಟ್ಟಾಭಿಷೇಕ ಪಡೆದ ಖಾವಂದರು ಇಲ್ಲಿಯವರೆಗೆ ಅದನ್ನು ತತ್ವ, ನಿ಼ಷ್ಠೆಯಿಂದ ನಿಭಾಯಿಸಿದ್ದಾರೆ ಎಂದರೆ ಅದು ನಮಗೆ ಸ್ಪೂರ್ತಿ ನೀಡುವಂತದ್ದು. 20 ವಯಸ್ಸಿನ ಸಹಜ ಬಯಕೆಗಳನ್ನು ಮೀರಿ ರತ್ನವರ್ಮ ಹೆಗ್ಗಡೆಯವರು‌ ಹಾಕಿದ ಚೌಕಟ್ಟಿನಲ್ಲಿ ಇವರು ಕಾರ್ಯಚಟುವಟಿಕೆ ಮಾಡಿದ್ದಾರೆ.‌ ಸಾಮಾಜಿಕ, ಧಾರ್ಮಿಕ, ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರಗಳಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡಿದ್ದಾರೆ. ಇವರ 55 ವರ್ಷದ ಅವಿರತ ತಪಸ್ಸು ಅದು ಈ ಸಮಾಜಕ್ಕೆ , ರಾಷ್ಟ್ರಕ್ಕೆ ಆದರ್ಶ ಸಂಗತಿ ಎಂದರು .

ಇದೇ ವೇಳೆ ಪೂಜ್ಯ ಖಾವಂದರ ಮುಂದೆ ಬೇಡಿಕೆಯೊಂದನ್ನಿಟ್ಟ ವಿಶ್ವೇಶ್ವರ ಹೆಗಡೆ ಕಾಗೇರಿಯವರು , ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸವಾಲಿದೆ, ಆಹಾರ ಕ್ರಮದಿಂದ ಮನುಷ್ಯ ನ‌ ಆರೋಗ್ಯ ಕೆಡುತ್ತಿದೆ. ಹೀಗಾಗಿ ಪರಿಶುದ್ಧ ಆಹಾರದ ಬಗ್ಗೆ ಪೂಜ್ಯ ಖಾವಂದರು ಜಾಗೃತಿ ಮೂಡಿಸಬೇಕು ಎಂದು ವಿನಂತಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಹೇಮಾವತಿ.ವಿ ಹೆಗ್ಗಡೆ, ಮಾಣಿಲ ಸ್ವಾಮಿಜಿ, ಸುರೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಪ್ರತಾಪ್ ಸಿಂಹ ನಾಯಕ್, ಪ್ರಭಾಕರ್ ಎಸ್ ಸೇರಿದಂತೆ ಇನ್ನು ಅನೇಕ‌ ಗಣ್ಯರು ಉಪಸ್ಥಿತರಿದ್ದರು.

error: Content is protected !!