ಬೆಳ್ತಂಗಡಿ: ಶಾಲೆಗೆಂದು ಹೊರಟ ಮಕ್ಕಳಿಬ್ಬರು ಶಾಲೆಗೆ ತೆರಳದೆ ನಾಪತ್ತೆಯಾದ ಘಟನೆ ಇಂದು
ಬೆಳ್ತಂಗಡಿಯ ಮೇಲಂತಬೆಟ್ಟುವಿನಲ್ಲಿ ನಡೆದಿತ್ತು. ಆದರೆ ಇದೀಗ ಮಕ್ಕಳಿಬ್ಬರು ಮನೆ ಸಮೀಪದ ಗುಡ್ಡದಲ್ಲಿ ಪತ್ತೆಯಾಗಿದ್ದಾರೆ.
ಎಂದಿನಂತೆ ಇಂದು ಬೆಳಗ್ಗೆ ಲಾಯಿಲ ಗ್ರಾಮದ ಪಡ್ಲಾಡಿ ಸ.ಕಿ.ಪ್ರಾ ಶಾಲೆಗೆ ಹೊರಟಿದ್ದ ನಾಲ್ಕನೇ ತರಗತಿಯ ಮಂಜುನಾಥ್ ಹಾಗೂ ಒಂದನೇ ತರಗತಿಯ ನೇತ್ರಾವತಿ
ಶಾಲೆಗೆ ತೆರಳದೆ ಮನೆ ಸಮೀಪದಲ್ಲಿ ಆಟವಾಡುತ್ತಿದ್ದರು. ಮಕ್ಕಳು ಶಾಲೆಗೆ ಬಾರದಿರುವ ವಿಷಯವನ್ನು ಶಾಲಾ ಮುಖ್ಯೋಪಾಧ್ಯಾಯರು 10.30ರ ಸುಮಾರಿಗೆ ಹೆತ್ತವರಿಗೆ ತಿಳಿಸಿದಾಗ, ಹೆತ್ತವರು ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡುಕಾಡಿದರೂ ಮಕ್ಕಳು ಸಿಗದಿದ್ದಾಗ ಬೆಳ್ತಂಗಡಿ ಪೊಲೀಸ್ ಠಾಣೆಗೆ 1 ಗಂಟೆ ಸುಮಾರಿಗೆ ದೂರು ನೀಡಿದ್ದಾರೆ. ಈ ವೇಳೆ ಸ್ಥಳೀಯರು ಮಕ್ಕಳು ಮನೆ ಸಮೀಪದಲ್ಲಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಮಕ್ಕಳಿಬ್ಬರು ಹೆತ್ತವರ ಬಳಿ ಸೇರಿದ್ದು ಪೋಷಕರ ಆತಂಕ ದೂರವಾಗಿದೆ.