ತಂದೆ ತಾಯಿ ಇಲ್ಲದ ಬಡ ಮಕ್ಕಳಿಗೆ ಆಸರೆಯಾದ ಬದುಕು ಕಟ್ಟೋಣ ಬನ್ನಿ ತಂಡ: ವಾಸಕ್ಕೆ ಹೊಸ ಸೂರು,ಪೋಷಣೆಯ ಭರವಸೆ: ಮಾನವೀಯತೆ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ:

 

 

ಬೆಳ್ತಂಗಡಿ:ತಂದೆ ಮರಣ ಹೊಂದಿದ್ದು  ತಾಯಿ ಮನೆ ಬಿಟ್ಟು ಹೋಗಿದ್ದು ಹೆತ್ತವರು  ಇಲ್ಲದ  ಹೆಣ್ಣು ಮಕ್ಕಳ ಬಾಳಿಗೆ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಬದುಕು ಕಟ್ಟಿಕೊಡುವ ಕಾರ್ಯಕ್ಕೆ ಮುಂದಾಗಿದೆ.ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಅಕ್ಷಯ ನಗರದ ದಿವಂಗತ. ಸದಾಶಿವ ಮತ್ತು  ರೇಖಾ ದಂಪತಿಗಳ ಮಕ್ಕಳಾದ ಕಲ್ಮಂಜ ಶಾಲೆಯಲ್ಲಿ ಕಲಿಯುತ್ತಿರುವ 8 ನೇ ತರಗತಿಯ ಸ್ನೇಹ ಮತ್ತು 6 ನೇ ತರಗತಿಯಲ್ಲಿ ಓದುತ್ತಿರುವ ದೀಪಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ತಂದೆ ಮರಣ ಹೊಂದಿದ್ದು  ತಾಯಿ ಇವರೊಂದಿಗೆ  ಇಲ್ಲದೇ ಇರುವುದರಿಂದ ಮಕ್ಕಳ ಮಾವ ಆಟೋ ಚಾಲಕರಾಗಿರುವ ಪ್ರವೀಣ್ ಸಲಹುತಿದ್ದು ತುಂಬಾ ಬಡತನದಲ್ಲಿ ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿತ್ತು.

 

ಈ ಬಗ್ಗೆ ಮಾಹಿತಿ ಪಡೆದ ಮೋಹನ್ ಕುಮಾರ್ ನೇತೃತ್ವದ ಬದುಕು ಕಟ್ಟೋಣ ಬನ್ನಿ ತಂಡ ಸೆ 18 ರಂದು ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಮನೆ ಹಾಗೂ ಅವರ ಪರಿಸ್ಥಿತಿ ನೋಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ “ಶಿಕ್ಷಣ ದೀವಿಗೆ” ಹಾಗೂ ಮನೆ ನಿರ್ಮಿಸಿಕೊಡುವ “ಸೇವೆ ನಮ್ಮದು ಬದುಕು ನಿಮ್ಮದು” ಎಂಬ ಭರವಸೆಯ ಕಾರ್ಯಕ್ರಮ ಸೆ 27 ರಂದು ಅಕ್ಷಯ ನಗರದಲ್ಲಿ ನಡೆಯಿತು.

 

 

ಈ ಸಂದರ್ಭದಲ್ಲಿ ವಾಸಕ್ಕೆ ಯೋಗ್ಯವಲ್ಲದ ಹಳೆ ಮನೆ ಬದಲಿಗೆ ನೂತನ ಮನೆ ನಿರ್ಮಾಣ ಮತ್ತು ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚಗಳನ್ನು ಬದುಕು ಕಟ್ಟೋಣ ಬನ್ನಿ ತಂಡದ ನೇತೃತ್ವದಲ್ಲಿ ಗೆಳೆಯರ ಬಳಗ ಅಕ್ಷಯ ನಗರ , ಸತ್ಯನಾರಾಯಣ ಭಜನಾ ಮಂಡಳಿ ನಿಡಿಗಲ್, ಸಹಕಾರದಲ್ಲಿ ಮನೆ ನಿರ್ಮಾಣ ಮತ್ತು ಮಕ್ಕಳ ಜವಾಬ್ದಾರಿಯ ಹೊಣೆ ಹೊತ್ತು ಕೊಂಡ ಸೇವಾ ಕಾರ್ಯಕ್ಕೆ  ಊರವರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

 

 

ಅದಲ್ಲದೇ ಕಲಿಯುವುದರಲ್ಲೂ ಅತ್ಯಂತ ಕ್ರೀಯಶೀಲಾರಾಗಿರುವ ಈ ಮಕ್ಕಳು ಯೋಗದಲ್ಲಿ ವಿಭಾಗ ಮಟ್ಟಕ್ಕೆ ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಅವರನ್ನು  ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್, ರಾಜೇಶ್ ಪೈ  ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಲ್ಮಂಜ ಗ್ರಾ.ಪಂ ಅಧ್ಯಕ್ಷ ಎಂ ಶ್ರೀಧರ್, ಗೆಳೆಯರ ಬಳಗ ಅಧ್ಯಕ್ಷ ವಿಲ್ಸನ್ ಮೋನಿಸ್, ಸತ್ಯನಾರಾಯಣ ಭಜನಾ ಮಂಡಳಿ ನಿಡಿಗಲ್ ಅಧ್ಯಕ್ಷ ಬಾಲಪ್ಪ.ಟಿ. ಶಶಿಧರ್ ಕಲ್ಮಂಜ,ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರುಗಳು ಸ್ಥಳೀಯರು ಉಪಸ್ಥಿತರಿದ್ದರು. ಕೊನೆಯಲ್ಲಿ ನೆಲ್ಸನ್ ಮೋನಿಸ್ ಧನ್ಯವಾದವಿತ್ತರು.

error: Content is protected !!