ಶಾಲೆಗೆಂದು ಹೊರಟ ಒಂದೇ ಮನೆಯ ಮಕ್ಕಳಿಬ್ಬರು ನಾಪತ್ತೆ: ಮೇಲಂತಬೆಟ್ಟುವಿನಿಂದ ಪಡ್ಲಾಡಿ ಶಾಲೆಗೆ ಹೊರಟ ಮಕ್ಕಳು: ನಾಲ್ಕನೇ ತರಗತಿಯ ಮಂಜುನಾಥ್, ಒಂದನೇ ತರಗತಿಯ ನೇತ್ರಾವತಿ ಕಾಣೆಯಾದ ಮಕ್ಕಳು: ಹುಡುಕಾಟ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡಿದ ಪೋಷಕರು:

 

ಬೆಳ್ತಂಗಡಿ: ಶಾಲೆಗೆಂದು ಹೊರಟ ಮಕ್ಕಳಿಬ್ಬರು ನಾಪತ್ತೆಯಾದ ಘಟನೆ ಇಂದು ನಡೆದಿದೆ.
ಬೆಳ್ತಂಗಡಿ ಮೇಲಂತಬೆಟ್ಟು ಕಾಲೇಜು ಸಮೀಪ ಪೈನಾಪಲ್ ತೋಟದಲ್ಲಿ ಕೆಲಸಕ್ಕಿದ ಮಡಿಕೇರಿ ಮೂಲದ ದಂಪತಿಯ ಮಕ್ಕಳಾದ ಮಂಜುನಾಥ್ ನಾಲ್ಕನೇ ತರಗತಿ ಹಾಗೂ ನೇತ್ರಾವತಿ ಒಂದನೇ ತರಗತಿ ಇವರು ಬೆಳಗ್ಗೆ ಮನೆಯಿಂದ ಸೈಕಲಿನಲ್ಲಿ ದಿನಂಪ್ರತಿ ಶಾಲೆಗೆ ಹೋಗುವಂತೆ ಇವತ್ತು ಬೆಳಿಗ್ಗೆ 8.30 ರ ಸುಮಾರಿಗೆ ಲಾಯಿಲ ಗ್ರಾಮದ ಪಡ್ಲಾಡಿ ಸ.ಕಿ.ಪ್ರಾ ಶಾಲೆಗೆ ಹೊರಟಿದ್ದರು. ಆದರೆ ಮಕ್ಕಳಿಬ್ಬರು ಶಾಲೆಗೆ ಬಾರದೇ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳು ಬಾರದಿರುವ ಬಗ್ಗೆ ಹೆತ್ತವರಿಗೆ ಪೋನ್ ಮಾಡಿ ವಿಚಾರಿಸಿದ್ದಾರೆ .

 

 

 

 

ತಕ್ಷಣ ಅವರು ಸೈಕಲಿನಲ್ಲಿ ಶಾಲೆಗೆ ಬರುವ ಮಾರ್ಗದಲ್ಲಿ ಹುಡುಕಾಟ ನಡೆಸಲಾಗಿದೆ. ಆದರೆ ಮಕ್ಕಳ ಸುಳಿವು ಸಿಗದಿರುವ ಹಿನ್ನಲೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

 

 

 

 

 

ಯಾರಿಗಾದರೂ ಮಕ್ಕಳ ಬಗ್ಗೆ ಸುಳಿವು ಸಿಕ್ಕಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ವಿನಂತಿ.

error: Content is protected !!