ಕೊನೆಗೂ ನೀರಿನ ಸಮಸ್ಯೆ ಸರಿಪಡಿಸಿದ ನಿಡ್ಲೆ ಗ್ರಾಮ ಪಂಚಾಯತ್: ‘ಪ್ರಜಾಪ್ರಕಾಶ ನ್ಯೂಸ್’ ವರದಿಗೆ ಸ್ಪಂದನೆ

 

 

ಬೆಳ್ತಂಗಡಿ: ನಿಡ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಪಲಾಜೆ ನಿಡ್ಲೆ, ಹಿರ್ತಡ್ಕ, ಪರಿಸರದ ಹಲವು ಮನೆಗಳಿಗೆ ಕಳೆದ ಕೆಲವು ದಿನಗಳಿಂದ ನೀರಿಲ್ಲದೆ ಜನ ಪರದಾಡುವಂತಾಗಿತ್ತು ಅದಲ್ಲದೇ ಮಳೆ ನೀರನ್ನು ಉಪಯೋಗಿಸುವಂತಾಗಿತ್ತು. ಈ ಬಗ್ಗೆ ಪಂಚಾಯತ್ ಗೆ ದೂರು ನೀಡಿದರೂ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳದೇ ಇದ್ದಾಗ ಅಸಮಾಧಾನಗೊಂಡ ಸ್ಥಳೀಯರು ‘ಪ್ರಜಾಪ್ರಕಾಶ ನ್ಯೂಸ್’ ಗೆ ಮಾಹಿತಿ ನೀಡಿದ್ದರು.‌ ಸಮಸ್ಯೆಯ ಬಗ್ಗೆ  ಜುಲೈ 19ರಂದು  ‘ಪ್ರಜಾಪ್ರಕಾಶ ನ್ಯೂಸ್’ ವರದಿ ಪ್ರಕಟಿಸಿತ್ತು. ಬಳಿಕ ಎಚ್ಚೆತ್ತುಕೊಂಡ ಪಂಚಾಯತ್ ದುರಸ್ತಿ ನಡೆಸಿ ನೀರು ಹರಿಯುವಂತೆ ಮಾಡಿದ್ದಾರೆ.
ವರದಿ ಪ್ರಕಟಿಸಿದ ಪ್ರಜಾಪ್ರಕಾಶ ನ್ಯೂಸ್ ತಂಡಕ್ಕೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

 

ಇದನ್ನೂ ಓದಿ:

 

ನಿಡ್ಲೆ: ನೀರಿನ ಸಮಸ್ಯೆಗೆ ಸ್ಪಂದಿಸದ ಗ್ರಾಮ ಪಂಚಾಯತ್ :ಕುಡಿಯಲು‌ ಮಳೆ ನೀರೇ ಗತಿ:  ಅಧಿಕಾರಿಗಳ ನಿರ್ಲಕ್ಷ್ಯ ದ ಬಗ್ಗೆ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು: ಪ್ರಜಾಪ್ರಕಾಶ ನ್ಯೂಸ್ ಗೆ ಮಾಹಿತಿ ನೀಡಿ ಅಳಲು ತೋಡಿಕೊಂಡ ಸ್ಥಳೀಯರು:

error: Content is protected !!