ನಿಡ್ಲೆ: ನೀರಿನ ಸಮಸ್ಯೆಗೆ ಸ್ಪಂದಿಸದ ಗ್ರಾಮ ಪಂಚಾಯತ್ :ಕುಡಿಯಲು‌ ಮಳೆ ನೀರೇ ಗತಿ:  ಅಧಿಕಾರಿಗಳ ನಿರ್ಲಕ್ಷ್ಯ ದ ಬಗ್ಗೆ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು: ಪ್ರಜಾಪ್ರಕಾಶ ನ್ಯೂಸ್ ಗೆ ಮಾಹಿತಿ ನೀಡಿ ಅಳಲು ತೋಡಿಕೊಂಡ ಸ್ಥಳೀಯರು:

 

 

 

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ನೀರಿನ ಸಮಸ್ಯೆಯಿಂದ ತೊಂದರೆಯಾಗುತಿದ್ದರೂ ಕಣ್ಣು ಮುಚ್ಚಿ ಕುಳಿತ ಗ್ರಾಮ ಪಂಚಾಯತ್ ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.ಬೆಳ್ತಂಗಡಿ ತಾಲೂಕಿನ
ನಿಡ್ಲೆ ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಮಾಪಲಾಜೆ ನಿಡ್ಲೆ ಹಿರ್ತಡ್ಕ ಹಾಗೂ ಇತರ ಕೆಲವು   ಎಸ್ ಸಿ. ಎಸ್ ಟಿ ಎಂಡೋಸಲ್ಫಾನ್ ಪೀಡಿತ ಮನೆಗಳು ಸೇರಿದಂತೆ ಸುಮಾರು 50ಕ್ಕಿಂತಲೂ ಅಧಿಕ ಮನೆಗಳಿಗೆ ಕಳೆದ 15 ಕ್ಕಿಂತಲೂ ಹೆಚ್ಚು ದಿನಗಳಿಂದ ನೀರು ಬರುತ್ತಿಲ್ಲ.  ಪಂಚಾಯಿತಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ಗೆ ಮಾಹಿತಿ ನೀಡಿ ಅಳಲನ್ನು ತೋಡಿಕೊಂಡ ಸ್ಥಳೀಯರು ಸುಮಾರು 15 ದಿನಗಳಿಂದ ನೀರು ಬಾರದಿರುವುದರಿಂದ ಪಂಚಾಯತ್ ಪಿಡಿಒ ಅವರ ಗಮನಕ್ಕೆ ತಂದರೂ ಪೈಪ್ ಲೈನ್ ಬದಲಾಯಿಸಬೇಕು ಅನುದಾನದ ಕೊರತೆ ಇದೆ ಎಸ್ಟಿಮೇಟ್ ಸಿದ್ಧಪಡಿಸಿ ಸರಿಪಡಿಸಬೇಕು ಎಂಬ ಉತ್ತರವನ್ನು ನೀಡುತ್ತಾರೆ ಹೊರತು ಕ್ರಮ ಕೈಗೊಳ್ಳುತ್ತಿಲ್ಲ ಕಳೆದ ಕೆಲ ದಿನಗಳಿಂದ ಮಳೆ ನೀರನ್ನೇ ಉಪಯೋಗಿಸುವ ಸ್ಥಿತಿ ನಿರ್ಮಾಣವಾಗಿದೆ ಎಂಬ ನೋವನ್ನು ತೋಡಿಕೊಳ್ಳುತಿದ್ದಾರೆ.  ಪ್ರತಿಯೊಬ್ಬರಿಗೂ ನೀರು ಅತೀ ಅವಶ್ಯ ಮೂಲಭೂತ ಸೌಕರ್ಯಗಳಲ್ಲಿ ಮೊದಲನೆಯದಾಗಿ ಪ್ರತಿಯೊಬ್ಬರಿಗೂ ನೀರು ಒದಗಿಸಬೇಕಾದದ್ದು ಪಂಚಾಯತ್ ಜವಾಬ್ದಾರಿ ಅದೇ ರೀತಿ ಅಧಿಕಾರಿಗಳ ಕರ್ತವ್ಯ. ಈಗಾಗಲೇ ಕೇಂದ್ರ ಸರ್ಕಾರ ಪ್ರತಿ ಮನೆಗೆ ನೀರು ನೀಡಬೇಕು ಎಂಬ ನಿಟ್ಟಿನಲ್ಲಿ ಜಲಜೀವನ್ ಮೆಷಿನ್ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅನುದಾನಗಳನ್ನು ನೀಡುತ್ತಿದೆ.‌ ಅದ್ದರಿಂದ ತಕ್ಷಣ ಈ ಭಾಗದ ಜನರ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ ನೀರಿನ ಸಮಸ್ಯೆಯನ್ನು ನೀಗಿಸುವಲ್ಲಿ ಪಂಚಾಯತ್ ಆಡಳಿತ ಕ್ರಮ ಕೈಗೊಳ್ಳಬೇಕಾಗಿದೆ.

error: Content is protected !!