ಬೆಳ್ತಂಗಡಿ :ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು 10ನೇ ತರಗತಿಯ ಸಮಾಜ ವಿಜ್ಞಾನದಿಂದ ತೆಗೆದು 10ನೇ ತರಗತಿಯ ಕನ್ನಡ (ಐಚ್ಚಿಕ) ವಿಷಯಕ್ಕೆ ಹಿಂಬಡ್ತಿ ನೀಡಿದ ಕ್ರಮವನ್ನು ಕೊನೆಗೂ ವಿಧಿಯಿಲ್ಲದೆ ಒಪ್ಪಿಕೊಂಡ ಸರಕಾರ ನಾರಾಯಣ ಗುರುಗಳ ಅನುಯಾಯಿಗಳು ಬೀದಿಗೆ ಬಂದು ಪ್ರತಿಭಟನೆ ನಡೆಸಿದ ತರುವಾಯ ಪ್ರತಿಭಟನೆಗೆ ಮಣಿದು ಪಠ್ಯ ಮರುಸೇರ್ಪಡೆಗೆ ಆದೇಶ ನೀಡಿರುತ್ತದೆ. ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದಾರೆ.
ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಬಿ.ಜೆ.ಪಿಯ ಮುಖಂಡರುಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಜನತೆಯ ದಾರಿ ತಪ್ಪಿಸಲು ಪ್ರಯತ್ನಿಸಿ ವಿಫಲರಾಗಿದ್ದು ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳು ಬೆಳ್ತಂಗಡಿಯಿಂದ ಮೊದಲ್ಗೊಂಡು ಪ್ರಾರಂಭಿಸಿದ ಚಳುವಳಿಗೆ ಮಂಡಿಯೂರಿ ಈಗ ಮರು ಸೇರ್ಪಡಗೆ ಆದೇಶಿಸಿದ್ದಾರೆ.
ಪಠ್ಯ ಮರು ಸೇರ್ಪಡೆ ವಿಚಾರದಲ್ಲಿ ಹೋರಾಟ ನಡೆಸಿದ ಸಮಸ್ತ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳಿಗೆ ಈ ಮೂಲಕ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.