ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಪ್ರೇರಣಾ “ಬದುಕಿಗೊಂದು ಸ್ಫೂರ್ತಿ” ಕಾರ್ಯಕ್ರಮ: ಜು 27 ರಂದು ಶಾಲಾ ಕಾಲೇಜುಗಳಲ್ಲಿ ತರಬೇತಿ ಕಾರ್ಯಕ್ರಮ:

 

 

ಬೆಳ್ತಂಗಡಿ : ‘ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ
ತಾಲ್ಲೂಕಿನ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬೆಳೆಸಬೇಕು, ಸದೃಢ ಯುವ ಸಮಾಜವನ್ನ ನೀರ್ಮಿಸಬೇಕು ಎನ್ನುವ ನೆಲೆಯಲ್ಲಿ ಒಂದೇ ದಿನ ತಾಲ್ಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ 120 ಕ್ಕೂ ಹೆಚ್ಚಿನ‌ ತರಬೇತಿಗಳನ್ನು ನೀಡುವ ‘ಪ್ರೇರಣಾ 2022 – ಬದುಕಿಗೊಂದು ಸ್ಫೂರ್ತಿ’ ಕಾರ್ಯಕ್ರಮವು ಜುಲೈ 27 ರಂದು ನಡೆಯಲಿದೆ’ ಎಂದು ಕಾರ್ಯಕ್ರಮ ಸಂಯೋಜಕ ಚಂದ್ರಹಾಸ ಬಳಂಜ ಹೇಳಿದರು.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವ್ಯಕ್ತಿತ್ವ ವಿಕಸನದ ಜೊತೆಗೆ ಹಲವಾರು ಸಮಾಜಮುಖಿ ಕೆಲಸಗಳನ್ನು ಕಳೆದ 45 ವರ್ಷಗಳಿಂದ ಮಾಡುತ್ತಾ ಬಂದಿರುವ ಬೆಳ್ತಂಗಡಿ ಜೆಸಿಐ ಮಂಜುಶ್ರೀ ಘಟಕವು ಈ ವರ್ಷ ರಾಜ್ಯಮಟ್ಟದ ಸ್ಪರ್ಧೆ, ಬೇಸಿಗೆ ಶಿಬಿರ, ರಕ್ತದಾನ ಶಿಬಿರ, ವೃದ್ಧಾಶ್ರಮ ಭೇಟಿ, ಗೋ ಗ್ರೀನ್ ಅಭಿಯಾನ ಹೀಗೆ ಉತ್ತಮವಾದ ಕೆಲಸಗಳಿಂದ ಮುನ್ನಡೆಯುತಿದ್ದು ವಲಯದಲ್ಲು ಹಲವಾರು ಮನ್ನಣೆಗೆ ಪಾತ್ರವಾಗಿದೆ.

ಸಂಸ್ಕಾರ- ಸಂಸ್ಕ್ರತಿ- ಅಧ್ಯಯನ ಎಂಬ ವಿಷಯದಡಿ ಪ್ರೇರಣಾ 2022 – ಬದುಕಿಗೊಂದು ಸ್ಫೂರ್ತಿ ತರಬೇತಿ ಕಾರ್ಯಗಾರ ನಡೆಯಲಿದ್ದು ಇದರ ಜೊತೆ, ಜೀವನ ಕೌಶಲ್ಯ, ಶಿಕ್ಷಣ, ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಿದ್ದಾರೆ.
ಬೆಳಿಗ್ಗೆ 9.45 ಕ್ಕೆ ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಲಯ 15 ರ ವಲಯಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ವಾಣಿ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ, ಶಾಲಾ ಮುಖ್ಯೋಪಾಧ್ಯಯ ಲಕ್ಮೀ ನಾರಾಯಣ, ಘಟಕಾಧ್ಯಕ್ಷ ಪ್ರಸಾದ್ ಬಿ.ಎಸ್, ವಲಯ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ, ನಿಕಟಪೂರ್ವಧ್ಯಕ್ಷ ಸ್ವರೂಪ್ ಶೇಖರ್, ವಲಯಾಧಿಕಾರಿ ಅಭಿನಂದನ್ ಹರೀಶ್ ಕುಮಾರ್, ಕಾರ್ಯದರ್ಶಿ ಶಂಕರ್ ರಾವ್ ಹಾಗೂ ಕಾರ್ಯಕ್ರಮ ಸಂಯೋಜಕ ಚಂದ್ರಹಾಸ ಬಳಂಜ ಇರಲಿದ್ದಾರೆ.

ಬೆಳಿಗ್ಗೆ 10 ಘಂಟೆಗೆ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ತರಬೇತಿ ಆರಂಭವಾಗಲಿದೆ‌.
ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಧ್ಯಾಹ್ನ 3.30 ಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜಿನಲ್ಲಿ ನಡೆಯಲಿದ್ದು, ಉಜಿರೆ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಜೇಸಿ ಪ್ರಮುಖರು ಹಾಗೂ ಎಲ್ಲಾ ತರಬೇತುದಾರರು ಭಾಗವಹಿಸಲಿದ್ದಾರೆ.

ಸುಮಾರು 10 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆಯಲಿದ್ದು, ಇದೊಂದು ಒಂದು ದಿನದ ಅತಿ ದೊಡ್ಡ ಶಾಲಾ ಕಾಲೇಜು ತರಬೇತಿ ಕಾರ್ಯಾಗಾರವಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಸಿಐ ಅಧ್ಯಕ್ಷ ಪ್ರಸಾದ್ ಬಿ.ಎಸ್, ಪೂರ್ವಾಧ್ಯಕ್ಷರಾದ ಚಿದಾನಂದ ಇಡ್ಯಾ, ನಾರಾಯಣ ಶೆಟ್ಟಿ, ಸದಸ್ಯ ರಕ್ಷಿತ್ ಅಂಡಿಂಜೆ ಇದ್ದರು.

error: Content is protected !!