ಓದುವ ಮಕ್ಕಳಿಗೆ ಬಡತನ ಅಡ್ಡಿಯಾಗಬಾರದು: ರಕ್ಷಿತ್ ಶಿವರಾಂ: ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ: ಬೆಸ್ಟ್ ಪೌಂಡೇಷನ್ ಬೆಳ್ತಂಗಡಿ ಟೈಲರ್ಸ್ ಅಸೋಷಿಯೇಷನ್ ಸಹಯೋಗ:

 

 

ಬೆಳ್ತಂಗಡಿ: ಓದುವ ಮಕ್ಕಳಿಗೆ ಬಡತನ ಅನ್ನೋದು ಅಡ್ಡಿಯಾಗಬಾರದು.ಎಷ್ಟೇ ಕಷ್ಟವಾದರೂ ಪ್ರತಿಯೊಂದು ಮನೆಯ ಮಕ್ಕಳೂ ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಉದ್ಯೋಗವನ್ನು ಪಡೆಯುವುದರ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬೆಸ್ಟ್ ಪೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು ಅವರು ಜು 10 ರಂದು ಬೆಳ್ತಂಗಡಿ ಜೇಸಿ ಭವನದಲ್ಲಿ ನಡೆದ ಟೈಲರ್ಸ್ ಅಸೋಸಿಯೇಷನ್ ರಿ ವಲಯ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬೆಸ್ಟ್ ಪೌಂಡೇಷನ್ ಬೆಳ್ತಂಗಡಿ ಸಹಯೋಗದಲ್ಲಿ ಟೈಲರ್ಸ್ ವೃತ್ತಿ ಬಾಂಧವರ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬೆಳ್ತಂಗಡಿ ವಲಯ ಸಮಿತಿಯ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಟೈಲರ್ಸ್ ವೃತ್ತಿ ಭಾಂದವರು ಸಂಘಟನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಸರಕಾರದ ಸೌಲಭ್ಯ ಪಡೆಯಲು ನೆರವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಮಿತಿಯ ಅಧ್ಯಕ್ಷ ಜಯಂತ್ ಉರ್ಲಂಡಿ ಗುರುತಿನ ಚೀಟಿ ಬಿಡುಗಡೆ ಮಾಡಿದರು.55 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಿದ ರಕ್ಷಿತ್ ಶಿವರಾಂ ಅವರನ್ನು ಟೈಲರ್ಸ್ ವಲಯ ಸಮಿತಿಯಿಂದ ಅಭಿನಂದಿಸಲಾಯಿತು.ಟೈಲರ್ಸ್ ಗಳ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರಕಾರದ ಗಮನ ಸೆಳೆಯಲು ಜುಲೈ 26ರಂದು ರಾಜ್ಯಾದ್ಯಂತ ನಡೆಯುವ ಪ್ರತಿಭಟನೆಯ ಮನವಿ ಪತ್ರವನ್ನು ರಕ್ಷಿತ್ ಶಿವರಾಂ ಬಿಡುಗಡೆ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಗೊಧರ್ ಕೆ.,ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕುಮಾರ್, ಮಾಜಿ ಅಧ್ಯಕ್ಷ ಶಾಂಭವಿ .ಪಿ.ಬಂಗೇರ, ಜಿಲ್ಲಾ ಸಮಿತಿಯ ಸದಸ್ಯ ಕುಶಾಲಪ್ಪ ಗೌಡ,ವಲಯ ಕಾರ್ಯದರ್ಶಿ ಶಶಿಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹಿರಿಯರಾದ ವಸಂತ ಟೈಲರ್ ವಿಶ್ವಾಸ್,ನವೀನ್ ಟೈಲರ್,ವಸಂತ ಟೈಲರ್ ಸ್ವಾತಿ,ಪ್ರಶಾಂತ್ ಟೈಲರ್ ಕೊಕ್ಕಡ ಮುಂತಾದ ಗಣ್ಯರು ಮಹಿಳಾ ಟೈಲರ್ಸ್ ವೃತ್ತಿ ಭಾಂದವರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಹರಿಣಿ ಪ್ರಾರ್ಥಿಸಿದರು. ಸುರೇಖಾ ಸ್ವಾಗತಿಸಿದರು. ಕ್ಷೇತ್ರ ಸಮಿತಿಯ ಮಾಜಿ ಕಾರ್ಯದರ್ಶಿ ಸದಾನಂದ ಸಾಲಿಯಾನ್ ಬಳಂಜ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು. ಹರೀಶ್.ಜಿ.ವಿ.ಸವಣಾಲು ಸಹಕರಿಸಿದರು.

error: Content is protected !!