ಬೆಳ್ತಂಗಡಿ: ಒಬ್ಬ ವ್ಯಕ್ತಿ ಬೆಳೆದು ದೊಡ್ಡವನಾಗಿ ಸಮಾಜದಲ್ಲಿ ಉನ್ನತ ಮಟ್ಟಕ್ಕೇರಲು ತಾಯಿ ಎಂಬ ಶಕ್ತಿಯ ನಿಸ್ವಾರ್ಥ ತ್ಯಾಗ ಇರುತ್ತದೆ ಅದ್ದರಿಂದ
ತಾಯಿಯ ಋಣವನ್ನು ಯಾರಿಂದಲೂ ತೀರಿಸಲು ಸಾಧ್ಯವಿಲ್ಲ. ತಾಯಿಯ ಹೆಸರು ಸಮಾಜದಲ್ಲಿ ಸದಾ ನೆನಪಾಗಿ ಉಳಿಯಬೇಕು ಅವರ ಹೆಸರಿನಲ್ಲಿ ಅಶಕ್ತ ಕುಟುಂಬಗಳಿಗೆ ನೆರವಾಗಬೇಕು ಎಂಬ ನಿಟ್ಟಿನಲ್ಲಿ ತಾಯಿಯ ಸ್ಮರಣಾರ್ಥ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಕಾರ್ಯ ಶ್ಲಾಘನೀಯ. ಎಂದು ಉದ್ಯಮಿ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹೇಳಿದರು. ಅವರು ಗುರುವಾಯನಕೆರೆ ನವಶಕ್ತಿ ರೆಸಿಡೆನ್ಸಿಯಲ್ಲಿ
ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಹರಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ದುಡಿದ ಒಂದು ಪಾಲನ್ನು ಸಮಾಜದ ಬಡ ಅಶಕ್ತ ಕುಟುಂಬಗಳನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ಚಾಚುವ ಕೆಲಸ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿದೆ. ಅದಕ್ಕಾಗಿ ಟ್ರಸ್ಟಿನ ಎಲ್ಲರಿಗೂ ಅಭಿನಂದನೆಗಳು ಮುಂದೆಯೂ ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡುವಂತಹ ಶಕ್ತಿಯನ್ನು ದೇವರು ಅವರಿಗೆ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.
ಬಾಲಿವುಡ್ ಚಿತ್ರ ನಿರ್ದೆಶಕ ,ನಿರ್ಮಾಪಕ ಪದ್ಮಶ್ರೀ ಡಾ.ಮಧುರ್ ಭಂಡಾರ್ಕರ್ ಮಾತನಾಡಿ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಉತ್ತಮವಾದ ಮಾದರಿ ಸಾಮಾಜಿಕ ಚಟುವಟಿಕೆಗಳನ್ನುಮಾಡುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಭಂಡಾರಿ ಮಹಾಮಂಡಲದ ಸ್ಥಾಪಕಾಧ್ಯಕ್ಷ ಶ್ರೀ ಕಡಂದಲೆ ಸುರೇಶ್ ಭಂಡಾರಿ,ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಬಿ. ಶಿರ್ಲಾಲು, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಡಾ. ಶಿವರಾಮ ಕೃಷ್ಣ ಭಂಡಾರಿ ಸಂಸ್ಥಾಪಕ, ಅಧ್ಯಕ್ಷರು ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಇವರು ಉಪಸ್ಥಿತರಿದ್ದರು. ಪತ್ರಕರ್ತ ರೋನ್ಸ್ ಬಂಟ್ವಾಳ ಸ್ವಾಗತಿಸಿ , ಆರೀಫ್ ಕಲ್ಲಕಟ್ಟ ವಂದಿಸಿದರು. ಈ ಸಂದರ್ಭದಲ್ಲಿ ಆಯ್ದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.