ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಧಾನಿ ಮೋದಿ ಚಿಂತನೆ:ಉಮೇಶ್ ಕತ್ತಿ : ಪ್ರತ್ಯೇಕ ರಾಜ್ಯದ ಕೂಗಿಗೆ ಮತ್ತಷ್ಟು ಪುಷ್ಠಿ ನೀಡಿದ ಅರಣ್ಯ ಸಚಿವರ ಹೇಳಿಕೆ

 

 

ಬೆಳ್ತಂಗಡಿ:ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ 2024 ನೇ ಚುನಾವಣೆಯ ನಂತರ 50 ರಾಜ್ಯಗಳನ್ನು ರಚಿಸುವ ಬಗ್ಗೆ ಯೋಚನೆ ಮಾಡಿದ್ದಾರೆ ಈ ಬಗ್ಗೆ ಚಿಂತನೆಗಳು ನಡೆಯುತ್ತಿದೆ. ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು ಅವರು ಬೆಳ್ತಂಗಡಿ ತಾಲೂಕಿನ ಬಡಕೋಡಿ ಗ್ರಾಮದ ಎರ್ಮೋಡಿ ಅರಣ್ಯ ಪ್ರದೇಶದಲ್ಲಿ  ದಶಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದ್ಯಮದೊಂದಿಗೆ ಮಾತನಾಡಿದರು.

2024ರ ಚುನಾವಣೆ ನಂತರ ಈ ದೇಶದಲ್ಲಿ 50 ರಾಜ್ಯಗಳು ಉದಯವಾಗುತ್ತದೆ
ಈ ಬಗ್ಗೆ ಮೋದಿ ಚಿಂತನೆ ನಡೆಸಿದ್ದು, ಸಿದ್ದತೆ ನಡೆಯುತ್ತಿದೆ
ಎರಡೂವರೆ ಕೋಟಿ ಇದ್ದ ಜನಸಂಖ್ಯೆ ರಾಜ್ಯದಲ್ಲಿ ಆರೂವರೆ ಕೋಟಿ ಆಗಿದೆ.ಅಂದರೆ ಇದರ ಅರ್ಥ, ಜನಸಂಖ್ಯೆ ಬೆಳೆದಂತೆ ರಾಜ್ಯವನ್ನು ಇಬ್ಭಾಗ ಮಾಡಬೇಕಿದೆ ಎಂಬುದು.ಕರ್ನಾಟಕದಲ್ಲಿ ಎರಡು, ಉತ್ತರಪ್ರದೇಶ 4 ರಾಜ್ಯ ಮತ್ತು ಮಹಾರಾಷ್ಟ್ರ 3 ರಾಜ್ಯ ಹೀಗೆ ಇಡೀ ದೇಶದಲ್ಲಿ ಒಟ್ಟು 50 ರಾಜ್ಯ ನಿರ್ಮಾಣವಾಗಲಿದೆ.
ಈ ಬಗ್ಗೆ ದೇಶದ ಪ್ರಧಾನಿಗಳು ಚಿಂತನೆ ನಡೆಸಿದ್ದಾರೆ ಎಂಬುದು ನನ್ನ ಅನಿಸಿಕೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಿದ್ದೇನೆ, ಮುಂದೆಯೂ ಎತ್ತುತ್ತೇನೆ.
ಆದರೂ ಅಖಂಡ ಕರ್ನಾಟಕದಲ್ಲಿ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಮುಖ್ಯಮಂತ್ರಿಗಳನ್ನು ಎಚ್ಚರಿಸುತ್ತೇನೆ ಅದು ಬಿಟ್ಟರೆ ನಾವು ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಧಾನಿ ಚಿಂತನೆ ಮಾಡಿದ್ದಾರೆ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ, ಅಭಿವೃದ್ಧಿ ಆಗಲಿ ಎಂದರು.ಸಚಿವರ ಈ ಹೇಳಿಕೆಯಿಂದ ಪ್ರತ್ಯೇಕ ರಾಜ್ಯದ ಕೂಗಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

error: Content is protected !!