ರಕ್ತದಾನದ ಮೂಲಕ ಸಮಾಜ ಕಟ್ಟುವ ಕಾರ್ಯವಾಗಬೇಕು :ಡಾ. ಪ್ರದೀಪ್ ನಾವೂರು ಮಂಜುಶ್ರೀ ಜೆಸಿಐ ಮತ್ತು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ಬೃಹತ್‌ ರಕ್ತದಾನ ಶಿಬಿರ

 

 

 

ಬೆಳ್ತಂಗಡಿ : ‘ರಕ್ತದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.. ಅಜೀವ ಪರ್ಯಂತ ನೆನಪಾಗಿ ಇಡುವ ಕಾರ್ಯ. ಇಂತಹ ದಾನದ ಮೂಲಕ ಸಮಾಜ ಕಟ್ಟುವ ಕಾರ್ಯವಾಗಬೇಕು’ ಎಂದು ನಾವೂರು ಆರೋಗ್ಯ ಕ್ಲಿನಿಕ್ ನ ವೈದ್ಯ ಡಾ. ಪ್ರದೀಪ್ ನಾವೂರು ಹೇಳಿದರು.

ಅವರು ಭಾನುವಾರ ಬೆಳ್ತಂಗಡಿ ಮಂಜುಶ್ರೀ ಜೇಸಿ ಭವನದಲ್ಲಿ ರಕ್ತನಿಧಿ ಕೇಂದ್ರ ಸರ್ಕಾರಿ ವೆನ್ ಲಾಕ್ ಆಸ್ಪತ್ರೆ ಮಂಗಳೂರು ಹಾಗೂ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ನೇತತ್ವದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ತಾಲ್ಲೂಕು ಯುವ ಬಿಲ್ಲವ ವೇದಿಕೆ, ತಾಲ್ಲೂಕು ಮಹಿಳಾ ಬಿಲ್ಲವ ವೇದಿಕೆ, ಯುವವಾಹಿನಿ ಬೆಳ್ತಂಗಡಿ ಘಟಕ ಮತ್ತು ವೇಣೂರು ಘಟಕದ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ದೇಹಕ್ಕೆ ಬಹಳ ಮುಖ್ಯವಾದ ರಕ್ತಕ್ಕೆ ಪರ್ಯಾಯವಾಗಿ ಈ ಸಮಾಜದಲ್ಲಿ ಬೇರೆ ಯಾವುದೂ ಇಲ್ಲ. ಪ್ರತಿನಿತ್ಯ ನಡೆಯುತ್ತಿರುವ ಹಲವು ರೀತಿಯ ಆಪರೇಷನ್ ಸಂದರ್ಭದಲ್ಲಿ ರಕ್ತವೂ ಅಗತ್ಯವಾಗಿದೆ. ಹಾಗಾಗಿ ರಕ್ತವನ್ನು ಮನಪೂರ್ವಕವಾಗಿ ಮಾಡಿ ಜೀವ ಉಳಿಸುವ ಪುಣ್ಯದ ಕಾರ್ಯವನ್ನು ನಾವೆಲ್ಲರೂ ಮಾಡಬೇಕು’ ಎಂದರು.

ರಕ್ತನಿಧಿ ಕೇಂದ್ರದ ಆಂಟನಿ ಮಾತನಾಡಿ, ‘ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದು ಸುವ್ಯವಸ್ತಿತವಾದ ರಕ್ತನಿಧಿ ಇದೆ. ವೆನ್ಲಾಕ್ ಆಸ್ಪತ್ರೆಗೆ ಬಡ ರೋಗಿಗಳು ಹೆಚ್ಚು ಬರುವುದು. ಹಾಗಾಗಿ ಈ ರಕ್ತ ಆ ಬಡವರ ಜೀವ ಉಳಿಸಲು ಉಪಯೋಗವಾಗುತ್ತದೆ’ ಎಂದು ಹೇಳಿ ಯಾರೆಲ್ಲ ರಕ್ತದಾನ ಮಾಡಬಹುದು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಜುಶ್ರೀ ಜೆಸಿಐ ಅಧ್ಯಕ್ಷ ಪ್ರಸಾದ್ ಬಿ.ಎಸ್.ವಹಿಸಿ ಸ್ವಾಗತಿಸಿದರು.

ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ತಾಲ್ಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ, ವೆನ್ಲಾಕ್ ಆಸ್ಪತ್ರೆ ರಕ್ತನಿಧಿ ವಿಭಾಗದ ಡಾ. ಫಲಕ್, ಬಿಲ್ಲವ ಮಹಿಳಾ ವೇದಿಕೆ ಕಾರ್ಯದರ್ಶಿ ಶಾಂಭವಿ ಬಂಗೇರ ಇದ್ದರು.

ಜೆಸಿಐ ಉಪಾಧ್ಯಕ್ಷೆ ಹೇಮಾವತಿ ಕೆ ವೇದಿಕೆಗೆ ಆಹ್ವಾನಿಸಿದರು.ರಕ್ಷಿತ್ ಅಂಡಿಂಜೆ ಜೇಸಿ ವಾಣಿ ವಾಚಿಸಿದರು. ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಹಾಗೂ ಆರೋಗ್ಯ ಸಂಚಾಲಕ
ಜಗದೀಶ್ ಡಿ ವಂದಿಸಿದರು.

error: Content is protected !!