ಬೆಳ್ತಂಗಡಿ ಕರಾಟೆ ತೀರ್ಪುಗಾರರ ತರಬೇತಿ ‌ಶಿಬಿರ ಮಾಜಿ ಶಾಸಕ ವಸಂತ ಬಂಗೇರ ಉದ್ಘಾಟನೆ

 

 

 

ಬೆಳ್ತಂಗಡಿ;ರಾಜ್ಯ ಕರಾಟೆ ಶಿಕ್ಷಕರ ಸಂಘ (ರಿ)ಕರ್ನಾಟಕ ಕರಾಟೆ ಡೊ ಸ್ಪೋರ್ಟ್ಸ್ ಅಸೋಸಿಯೇಷನ್‌ ಹಾಗೂ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಕರಾಟೆ ತೀರ್ಪುಗಾರರ ತರಬೇತಿ ಶಿಬಿರ ಮೇ 06‌ ರಂದು ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಬೆಳ್ತಂಗಡಿಯ ಮಾಜಿ ಶಾಸಕರಾದ ಶ್ರೀ ವಸಂತ ಬಂಗೇರ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಮ್ಮದ್ ನದೀಮ್ ಆಧ್ಯಕ್ಷತೆ ವಹಿಸಿದ್ದರು. ‌ ಮುಖ್ಯ ಅತಿಥಿಗಳಾಗಿ ಶ್ರೀಮತಿ ಡಾ. ಸವಿತಾ ಪ್ರಾಂಶುಪಾಲರು , ಗುರುದೇವ ಪ್ರಥಮ ದರ್ಜೆ ಕಾಲೇಜು, ಶ್ರೀ ಸುಖೇಶ್ ಕುಮಾರ್ ಕೆ, ಪ್ರಾಂಶುಪಾಲರು, ಗುರುದೇವ ಕಾಲೇಜು, ಬೆಳ್ತಂಗಡಿ, ಶ್ರೀ ಸತೀಶ್‌ ಬೆಲ್ಮನ್‌, ಕಾರ್ಯದರ್ಶಿ, ರಾಜ್ಯ ಕರಾಟೆ ಶಿಕ್ಷಕರ ಸಂಘ, ಶ್ರೀ ರವಿ ಕೋಟ್ಯಾನ್ ಕೋಶಾಧಿಕಾರಿ ರಾಜ್ಯ ಕರಾಟೆ ಶಿಕ್ಷಕರ ಸಂಘ , ಶ್ರೀ ಶಿಹಾನ್‌ ಅಬ್ದುಲ್ ರೆಹಮಾನ್ ,ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಶಿಕ್ಷಕರ ಸಂಘ, ಶ್ರೀ ಶೇಖ್‌ ರಶೀದ್‌ , ದೈಹಿಕ ಶಿಕ್ಷಕರು ,ಗುರುದೇವ ಕಾಲೇಜು, ಬೆಳ್ತಂಗಡಿ, ಶ್ರೀ ಶಿಹಾನ್ ಸರ್ಫರಾಝ್ , ಮೂಡಬಿದ್ರೆ ಉಪಸ್ಥಿತರಿದ್ದರು. ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಿ ಸಂಜೆ 5:00 ರ ವರೆಗೆ ನಡೆಯಿತು.

error: Content is protected !!