ಉಜಿರೆ ಅಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

 

 

ಬೆಳ್ತಂಗಡಿ:ಬಾವಿಯ ಕಟ್ಟೆಯ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉಜಿರೆ ಬಳಿ ನಡೆದಿದೆ.
ಉಜಿರೆ ಸಮೀಪದ ರಬ್ಬರ್ ಅಂಗಡಿಯಲ್ಲಿ ರಬ್ಬರ್ ಪ್ಯಾಕಿಂಗ್ ಕೆಲಸಕ್ಕಿದ್ದ ಬಿಹಾರ ಮೂಲದ ಬಟುಸಿಂಗ್ (39) ಎಂಬಾತನು  ಮೇ 04 ರಂದು  ಅಂಗಡಿಯ ಹಿಂಬದಿಯಲ್ಲಿರುವ ರೂಮಿನಲ್ಲಿ ವಾಸವಾಗಿದ್ದು ಈತ ರೂಮಿನ ಬಳಿ ಇದ್ದ ಬಾವಿ ಕಟ್ಟೆಯಲ್ಲಿ ಕುಳಿತಿದ್ದಾಗ ಅಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ವಿಪರೀತ ಮದ್ಯ ಸೇವನೆ ಮಾಡಿದ್ದರಿಂದ ಬಾವಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂಬ ಅನುಮಾನವಿದ್ದು.ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!