ಬೆಳ್ತಂಗಡಿ: ತಾಲೂಕಿನ ವಾಣಿಜ್ಯೋದ್ಯಮಿಗಳು ಒಂದಾಗಿ ಸಂಘ ರಚಿಸುವ ಮೂಲಕ ಇನ್ನಷ್ಟು ಯುವ ತರುಣರು ಕೈಗಾರಿಕೋದ್ಯಮಿಗಳಾಗಿ ವಾಣಿಜ್ಯೋದ್ಯಮಿಗಳಾಗಿ ಬೆಳೆಯಲು ಇದು ಸಹಕಾರಿಯಾಗಲಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು ಅವರು ಎ 30 ಗುರುವಾಯನಕೆರೆ ಬಂಟರ ಭವನದಲ್ಲಿ ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಇದರ ಉದ್ಘಾಟನೆ ಮತ್ತುಪ ದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿ ಕೂಡ ಮಂಗಳೂರು ಅಥವಾ ಬೆಂಗಳೂರಿಗೆ ಪೈಪೋಟಿ ಕೊಡುವಂತಹ ನಿಟ್ಟಿನಲ್ಲಿ ಯಾವುದಾದರೊಂದು ಕ್ಷೇತ್ರದಲ್ಲಿ ಕೈಗಾರಿಕಾ ವಲಯದಲ್ಲಿ ಅಭಿವೃದ್ಧಿ ಪಡಿಸುವಂತಹ ರೀತಿಯಲ್ಲಿ ಈ ಸಂಸ್ಥೆ ಬೆಳೆದು ಮುಂದೊಂದು ದಿನ ಉದ್ಯಮಿಗಳಿಗೆ ಆಶಾ ಕಿರಣವಾಗಿ ಮೂಡಿಬರಬೇಕು ಯಾವುದೇ ಒಂದು ನಗರ ಯಶಸ್ಸು ಕಾಣಬೇಕಾದರೆ ನಗರದಲ್ಲಿರುವಂತಹ ಉದ್ಯಮಿಗಳಿಂದ ಸಾಧ್ಯ ಐಟಿ ಕ್ಷೇತ್ರ ಬೆಂಗಳೂರನ್ನು ಅವಲಂಬಿತವಾಗಿದ್ದರಿಂದ ಜಗತ್ತಿನ ಭೂಪಟದಲ್ಲಿ ಬೆಂಗಳೂರು ಗುರುತಿಸಿಕೊಂಡು ಜಗತ್ತಿನ ಜನ ಬೆಂಗಳೂರಿಗೆ ಬರುವಂತಾಗಿದೆ.ತಾಲೂಕಿನ ಯುವ ಜನತೆ ಮುಂದೊಂದು ದಿನ ತಾಲೂಕಿನಲ್ಲಿಯೇ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಈ ಸಂಘ ಶಕ್ತಿಶಾಲಿಯಾಗಿ ಬೆಳೆಯಲಿ ಎಂದ ಅವರು ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಗಳಿಗಾಗಿ ಒಂದಷ್ಟು ಯೋಚನೆಗಳನ್ನು ಮಾಡಿ ತಾಲೂಕಿನಲ್ಲಿ ಈಗಾಗಲೇ ಕರಾಯ ಹಾಗೂ ಗುರುವಾಯನಕೆರೆಯಲ್ಲಿ ಎರಡು 110ಕೆ.ವಿ ಸಬ್ ಸಬ್ ಸ್ಟೇಶನ್ ಇದ್ದರೂ ಇನ್ನೆರಡು 110 ಕೆ ವಿ ಸಬ್ ಸ್ಟೆಷನ್ ಬೇಕು ಎಂಬ ಬೇಡಿಕೆ ಮೊದಲಿನಿಂದಲೂ ಇತ್ತು ಕುತ್ಲೂರಿಗೆ 110ಕೆವಿ ಮಂಜೂರುಗೊಂಡು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಿ ಕಾರ್ಯರಂಭವಾಗಲಿದೆ ಅದಲ್ಲದೇ ಕಕ್ಕಿಂಜೆಯಲ್ಲಿ ಕೂಡ ಸಬ್ ಸ್ಟೇಷನ್ ಮಂಜೂರುಗೊಳ್ಳುವ ಪ್ರಕ್ರಿಯೆಯಲ್ಲಿ ಇದೆ ಅದೂ ಕೂಡ ಶೀಘ್ರದಲ್ಲಿ ಕಾರ್ಯರಂಭಗೊಳ್ಳಲಿದೆ. ವಿದ್ಯುತ್ ಸಮಸ್ಯೆಯ ಬಗ್ಗೆ ಅತ್ಯಂತ ಹೆಚ್ಚು ಮನವಿಗಳು ಬಂದಂತಹ ನಿಟ್ಟಿನಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸುವ ಬಗ್ಗೆ ಯೋಚಿಸಿ ತಾಲೂಕಿನಾದ್ಯಂತ 32 ಕೋಟಿ ರೂಪಾಯಿಯ 560 ಟ್ರಾನ್ಸ್ ಫಾರ್ಮರ್ ಏಕ ಕಾಲದಲ್ಲಿ ಒಂದು ವಿಧಾನ ಸಭಾ ಕ್ಷೇತ್ರಕ್ಕೆ ಬಂದಿದ್ದರೆ ಅದು ಬೆಳ್ತಂಗಡಿಗೆ ಈಗಾಗಲೇ ಅದನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ ವಿದ್ಯುತ್ತನ್ನು ಇನ್ನಷ್ಟು ಸಶಕ್ತಗೊಳಿಸಬೇಕು ಮುಂದಿನ 3 ವರ್ಷಗಳಲ್ಲಿ ನಮ್ಮ ರೈತರಿಗೆ ಉದ್ಯಮಿಗಳಿಗೆ ಸಮಸ್ಯೆ ಆಗಬಾರದು ಎಂಬ ದೃಷ್ಟಿಯಲ್ಲಿ ಕಳಿಯದಲ್ಲಿ 15 ಎಕರೆ ಜಾಗವನ್ನು ಮೆಸ್ಕಾಂ ಗೆ ಮೀಸಲಿರಿಸಿ 220 ಕೆ.ವಿ.ಸಬ್ ಸ್ಟೇಶನ್ ಶೀಘ್ರದಲ್ಲಿ ಪ್ರಾರಂಭವಾಗಿ ಈ ಮೂಲಕ ಬೆಳ್ತಂಗಡಿಯಲ್ಲಿರುವ ವಿದ್ಯುತ್ ಬೇಡಿಕೆಗೆ ಪರಿಹಾರ ಸಿಗಲಿದೆ.ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಸುಮಾರು 108 ಎಕರೆಯಲ್ಲಿ ಸುಸಜ್ಜಿತ ಕೈಗಾರಿಕಾ ವಲಯ ನಿರ್ಮಾಣವಾಗಲಿದ್ದು ಇನ್ನಷ್ಟು ಉದ್ಯೋಗಗಳು ನಮ್ಮ ಜನರಿಗೆ ಸಿಗಲಿದೆ. ಮೇಲಂತ ಬೆಟ್ಟುವಿನಲ್ಲಿ ಕೈಗಾರಿಕೆಗಾಗಿ ಮೀಸಲಿರಿಸಿದ ಜಾಗದಲ್ಲಿ ಕೆ ಎಸ್ ಆರ್ ಟಿ ಸಿ ಡಿಪೋ ರಚನೆಯ ಬಗ್ಗೆ ಯೋಚಿಸಲಾಗಿದೆ ಈಗಾಗಲೇ ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ 718 ಕೋಟಿ ವೆಚ್ಚದ ಸರ್ವಋತು ರಸ್ತೆ ನವೆಂಬರ್ ನಿಂದ ಕಾಮಗಾರಿ ಪ್ರಾರಂಭವಾಗಲಿದ್ದು ವಾಹನ ದಟ್ಟನೆ ಕಡಿಮೆಯಾಗಿ ಬೆಳ್ತಂಗಡಿಯಿಂದ ಮಂಗಳೂರಿಗೆ ಒಂದು ಗಂಟೆಯಲ್ಲಿ ಸಂಚಾರ ಮಾಡುವ ರೀತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಇದರ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ನೂತನ ಕಾರ್ಯಕಾರಿಣಿ ಘೋಷಣೆ ಮತ್ತು ಐ.ಡಿ ಬಿಡುಗಡೆಗೊಳಿಸಿದರು. ವಿಧಾನ ಪರಿಷತ್ ಶಾಸಕ ರಾದ ಪ್ರತಾಪಸಿಂಹ ನಾಯಕ್ ಸದಸ್ಯರಿಗೆ ಪ್ರಮಾಣ ಪತ್ರ ಸಾಂಕೇತಿಕವಾಗಿ ವಿತರಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ
ಕೆನರಾ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಮಂಗಳೂರು ಇದರ ಅಧ್ಯಕ್ಷ ಶಶಿಧರ ಪೈ ಮಾರೂರು ಸಂಘ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಛೇಂಬರ್ ನ ಉಪಾಧ್ಯಕ್ಷ ಹ್ಯಾರೀಸ್ ಉಪಸ್ಥಿತರಿದ್ದರು.
ಕು. ತ್ರಿಷಾ ಎನ್.ರಾವ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೋನಾಲ್ಡ್ ಲೋಬೊ ಸ್ವಾಗತಿಸಿದರು. ಸುನೀಲ್ ಶೆಣೈ ಮನವಿ ಪತ್ರ ವಾಚಿಸಿದರು. ಚಿದಾನಂದ ಇಡ್ಯ ಸಂಪನ್ಮೂಲ ವ್ಯಕ್ತಿ ಯವರನ್ನು ಪರಿಚಯಿಸಿದರು. ಲ್ಯಾನ್ಸಿ ಪಿರೇರಾ ನಿರೂಪಿಸಿ ಯಶವಂತ ಪಟವರ್ಧನ್ ಧನ್ಯವಾದವಿತ್ತರು.