ದೇಶದ ರೈತ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ: ಹರಿದಾಸ್ ಎಸ್ ಎಂ: ಸಿಐಟಿಯು ವತಿಯಿಂದ ಮೇ ದಿನಾಚರಣೆ

 

 

 

 

ಬೆಳ್ತಂಗಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನವ ಉದಾರವಾದಿ ನೀತಿಗಳನ್ನು ಮತ್ತಷ್ಟು ತೀವ್ರವಾಗಿ ಜಾರಿಗೊಳಿಸುತ್ತಿರುವ ಪರಿಣಾಮವಾಗಿ ದೇಶದ ರೈತ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ರೈತ ಕಾರ್ಮಿಕರ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಹಿರಿಯ ರೈತ ನಾಯಕ ಹರಿದಾಸ್ ಎಸ್.ಎಂ ಹೇಳಿದರು.

ಅವರು  ಬೆಳ್ತಂಗಡಿಯಲ್ಲಿ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ನಡೆದ ಮೇ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಅನ್ನ ನೀಡುವ ರೈತ , ದೇಶದ ಸಂಪತ್ತು ಸೃಷ್ಟಿ ಮಾಡುವ ಕಾರ್ಮಿಕರು ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸುವುದನ್ನು ನೋಡಿದರೆ ಭಾರತ ವಿಶ್ವಗುರು ಎಂಬುದು ಸಾಬೀತಾಗುತ್ತದೆ ಎಂದು ವ್ಯಂಗ್ಯವಾಡಿದೆ ಹೆಚ್ಎಸ್ಎಂ ಅವರು ರೈತ ಕಾರ್ಮಿಕರ ಏಳ್ಗೆಯಾಗದೆ ದೇಶದ ಅಭಿವೃದ್ಧಿ ಶೂನ್ಯ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಶಿವಕುಮಾರ್ ಎಸ್. ಎಂ ಮಾತನಾಡಿ ಕೇಂದ್ರ , ರಾಜ್ಯ ಸರ್ಕಾರಗಳು ಮುಂದಿನ ಚುನಾವಣೆಗಾಗಿ ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆದು ಜನರ ಐಕ್ಯತೆಯನ್ನು ದಮನಿಸುತ್ತಿದೆ. ಧರ್ಮದ ಧ್ರುವೀಕರಣಕ್ಕಾಗಿ ಹಿಂದುಗಳ ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಗಳನ್ನು ಬಳಸಿಕೊಳ್ಳುವ RSS , ಸಂಘಪರಿವಾರದ ಸಂಘಟನೆಗಳು ಹಾಗೂ ಬಿಜೆಪಿ ತಮ್ಮ ರಾಜಕೀಯ ಯೋಜನೆಯಾದ ಹಿಂದುತ್ವದ ಸಿದ್ದಾಂತದ ದಾಳಿಗೆ ಒಳಗಾಗಿರುವ ಜನರ ನ್ಯಾಯಪರ ಹಕ್ಕುಗಳನ್ನು ರಕ್ಷಿಸಲು ಸಿಐಟಿಯು ಸದಾ ಸಿದ್ದವಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಗಿನ್ನಿಸ್ ದಾಖಲೆ ಮಾಡುವಂತಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ 40% ಕಮಿಷನ್ , ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಭೃಷ್ಟಾಚಾರ ಸೇರಿದಂತೆ ರಾಜ್ಯದ ಎಲ್ಲಾ ಸಚಿವರುಗಳು ಜೈಲಿಗಾಗಿ ಸಾಲು ಕಟ್ಟಿ ನಿಂತಿರುವಂತಿದೆ ಎಂದರು.

ಸಮಾವೇಶದಲ್ಲಿ ಡಿವೈಎಫ್ಐ ತಾಲೂಕು ಅಧ್ಯಕ್ಷ ಸುಜಿತ್ ರಾವ್, ಶ್ರಮಶಕ್ತಿ ಸ್ವಸಹಾಯ ಗುಂಪು ಸಂಯೋಜಕ ಸಜೀವ್ ಆರ್, ಕಾರ್ಮಿಕ ಮುಂದಾಳುಗಳಾದ ಸುಕನ್ಯಾ ಹೆಚ್, ಜಯಂತಿ ನೆಲ್ಲಿಂಗೇರಿ, ಪದ್ಮಾವತಿ ಮುಗುಳಿ, ಸುಧಾ ಕೆ ರಾವ್, ಮನೋಹರ ರಾವ್, ಕುಸುಮ ಮಾಚಾರ್, ಮುದರ ಬಾರ್ಯ, ಅಜಿ ಜೋಸ್, ಮಧು ಕಳಂಜ, ದಿನೇಶ್ ನಾಳ, ಯುವರಾಜ್, ರೈತ ಮುಖಂಡರಾದ ನೀಲೇಶ್ ಪೆರಿಂಜೆ , ದೇವಸ್ಯ ಸಮಾವೇಶದ ನೇತೃತ್ವವನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಮೇ ದಿನ ಹಾಡನ್ನು ಹೆಚ್. ಕೃಷ್ಣಯ್ಯ ಲಾಯಿಲ ಮತ್ತು ಆಶಾ ಸುಜಿತ್ ಹಾಡಿದರು. ಸುಜಿತ್ ರಾವ್ ಸ್ವಾಗತಿಸಿ , ಸಂಜೀವ ಆರ್ ವಂದಿಸಿದರು. ಕಾರ್ಮಿಕರು , ರೈತರು , ಮಹಿಳೆಯರು, ಭಾಗವಹಿಸಿದರು.

error: Content is protected !!