ಬೆಳ್ತಂಗಡಿ : ಚಿಕಿತ್ಸೆ ಫಲಿಸದೇ ಗ್ರಾಮಕರಣಿಕ ರೂಪೇಶ್ ನಿಧನ

 

 

ಬೆಳ್ತಂಗಡಿ : ಕಳೆದ ಕೆಲವು ‌ದಿನಗಳಿದ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿದ್ದ ಲಾಯಿಲ ಗ್ರಾಮದ ಬಜಕ್ರೆಸಾಲು ನಿವಾಸಿ ಗ್ರಾಮ ಲೆಕ್ಕಿಗ ರೂಪೇಶ್ ಇಂದು ಸಂಜೆ ಚಿಕಿತ್ಸೆ ಫಲಿಸದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ‌.

ಬೆಳ್ತಂಗಡಿ ತಾಲೂಕಿನ ಕೊಕ್ಕಡ , ಪಟ್ರಮೆ, ಶಿಶಿಲ , ಶಿಬಾಜೆ‌ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಲೆಕ್ಕಿಗರಾಗಿ  ಕರ್ತವ್ಯ ನಿರ್ವಹಿಸುತ್ತಿದ್ದ ರೂಪೇಶ್ ಮೆದುಳಿನ ರಕ್ತಸ್ರಾವದಿಂದ ಕಳೆದ ಮಾರ್ಚ್ 19 ರಿಂದ ಉಡುಪಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ಅಲ್ಲಿಂದ ಇವತ್ತು     ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಅದರೆ  ಚಿಕಿತ್ಸೆ ಫಲಿಸದೆ ಭಾನುವಾರ(ಮಾರ್ಚ್ 27 ರಂದು) ಸಂಜೆ ಸಾವನ್ನಪ್ಪಿದ್ದಾರೆ.

ರೂಪೇಶ್ ಅವರು ಪತ್ನಿ ಹಾಗೂ ಎರಡು ಮಕ್ಕಳು ಸೇರಿದಂತೆ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

ಶಾಸಕ ಹರೀಶ್ ಪೂಂಜ  ಬೆಳ್ತಂಗಡಿ  ಸರ್ಕಾರಿ ಆಸ್ಪತ್ರೆಗೆ ಭೇಟಿ  ನೀಡಿ ಮನೆಯವರಿಗೆ ಸಾಂತ್ವನ ಹೇಳಿದರಲ್ಲದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂದಿನ  ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

 

 

error: Content is protected !!