ಬಂಟರ ಸಂಘ ಉಜಿರೆ ವಲಯ ದ ಮಹಾಸಭೆ ಮತ್ತು ಸಮಾವೇಶ

 

 

ಬೆಳ್ತಂಗಡಿ:ಉಜಿರೆ ವಲಯ ಕಳೆದ ಇಪ್ಪತ್ತು ವರ್ಷಗಳಿಂದ ಉತ್ತಮ ಕಾರ್ಯಕ್ರಮಗಳನ್ನು ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತುಳು ಸಂಘ ಬರೋಡ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹೇಳಿದರು. ಅವರು ಮಾ 27 ಆದಿತ್ಯವಾರ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಉಜಿರೆ ವಲಯ ಬಂಟರ ಸಂಘದ ಸಮಾವೇಶದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

 

ಅರ್ಥಿಕವಾಗಿ ಬಂಟರು ಸದೃಡವಾಗಿದ್ದರೂ ಸಮಾಜದಲ್ಲಿ ಅರ್ಥಿಕವಾಗಿ  ಹಿಂದುಳಿದವರನ್ನು ಹಾಗೂ   ತಳ ಮಟ್ಟದ ಬಂಟರನ್ನು  ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಲ್ಲಿ ಸಂಘ ಇನ್ನಷ್ಟು ಸದೃಡವಾಗಿ ಬೆಳೆಯಲು ಕಾರಣವಾಗುತ್ತದೆ ಎಂದರು.

 

ತಾಲೂಕು ಬಂಟರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ  ಮಾತನಾಡಿ ಉಜಿರೆ ವಲಯ ಬಂಟರ ಸಂಘ ತಾಲೂಕಿನಲ್ಲಿಯೇ ಉತ್ತಮ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದೆ ಅದೇ ರೀತಿ  ಇನ್ನಷ್ಟು  ಉತ್ತಮ ಕಾರ್ಯಚಟುವಟಿಕೆಗಳನ್ನು ಮಾಡುವ ಶಕ್ತಿ  ಅವರಿಗೆ  ದೊರೆಯಲಿ ಎಂದರು.

 

 

ಕಾರ್ಯದರ್ಶಿ ರಾಜು ಶೆಟ್ಟಿ ಬೆಂಗೆತ್ಯಾರ್, ಮಾತೃಸಂಘದ ಸಂಚಾಲಕ ರಘುರಾಮ ಶೆಟ್ಟಿ ಶುಭ ಹಾರೈಸಿದರು.    ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರನ್ನು ಗುರುತಿಸಲಾಯಿತು  ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತಾಲೂಕು ಮಹಿಳಾ ಬಂಟರ ವಿಭಾಗದ ಸಂಚಾಲಕಿ ಪುಷ್ಪಾವತಿ .ಆರ್. ಶೆಟ್ಟಿ ಸನ್ಮಾನಿತರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು.ಉಜಿರೆ ವಲಯ ಬಂಟರ ಸಂಘದ ಅಧ್ಯಕ್ಷರಾಗಿದ್ದ ವೆಂಕಟ್ರಮಣ ಶೆಟ್ಟಿಯವರನ್ನು ವಲಯದ ಪರವಾಗಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೆಂಕಟ್ರಮಣ ಶೆಟ್ಟಿ   ಇಷ್ಟರವರೆಗೆ  ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ  ಇದೇ ರೀತಿ ಮುಂದೆಯೂ ಸಂಘಕ್ಕೆ    ಸಹಕಾರ ನೀಡಬೇಕಾಗಿ ವಿನಂತಿಸಿದರು.

 

 

 

ಕಾರ್ಯಕ್ರಮದಲ್ಲಿ  ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ಸಾರೀಕ ಡಿ. ಶೆಟ್ಟಿ ಯುವ ವಿಭಾಗದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ನಿರಂಜನ್ ಶೆಟ್ಟಿ, ಮೋಹನ್ ಶೆಟ್ಟಿ ಕಿರಿಯಾಡಿ, ಉಪಸ್ಥಿತರಿದ್ದರು ಉಜಿರೆ ವಲಯದ ಉಪಾಧ್ಯಕ್ಷ ಜಯರಾಮ ಶೆಟ್ಟಿ ಕೆಂಬರ್ಜೆ ಸ್ವಾಗತಿಸಿ ಸಂಜೀವ ಶೆಟ್ಟಿ ಕುಂಟಿನಿ, ನಿರೂಪಿಸಿ ರವೀಂದ್ರ ಶೆಟ್ಟಿ ಬಳೆಂಜ ವಂದಿಸಿದರು.

 

 

ಉಜಿರೆ ವಲಯ ಬಂಟರ ಸಂಘದ  ಮಹಾಸಭೆಯಲ್ಲಿ ಎರಡು ವರುಷದ ಅವಧಿಗೆ  ಅಧ್ಯಕ್ಷರಾಗಿ ವನಿತಾ ವಿಶ್ವನಾಥ ಶೆಟ್ಟಿಯವರು ಅಯ್ಕೆಯಾದರು. ಅವರಿಗೆ ವೆಂಕಟ್ರಮಣ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು.

 

error: Content is protected !!