ಗ್ರಾಮಕರಣೀಕ ರೂಪೇಶ್ ಮನೆಗೆ ಜಿಲ್ಲಾಧಿಕಾರಿ ಭೇಟಿ: ಅಧಿಕಾರಿಗಳಿಂದ ಅಂತಿಮ ನಮನ

 

 

 

ಬೆಳ್ತಂಗಡಿ : ಮೆದುಳಿನ ರಕ್ತಸ್ರಾವದಿಂದ ನಿನ್ನೆ ಮೃತ ಪಟ್ಟ ಬಜಕ್ರೆಸಾಲು ನಿವಾಸಿ ಗ್ರಾಮಕರಣೀಕ ರೂಪೇಶ್ ಮನೆಗೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಂತರ ಮನೆಯವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುವಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಲಾಯಿಲ ಗ್ರಾಮ ಪಂಚಾಯತ್ ಆದ್ಯಕ್ಷೆ ಆಶಾ ಸಲ್ದಾನ, ಉಪಾಧ್ಯಕ್ಷ ಗಣೇಶ್ ಆರ್.  ಪುತ್ತೂರು ಹಾಗೂ ಮಂಗಳೂರು ಸಹಾಯಕ ಆಯುಕ್ತರುಗಳಾದ ಗಿರೀಶ್ ನಂದನ್, ಮದನ್ ಮೋಹನ್ ತಹಶೀಲ್ದಾರ್ ಮಹೇಶ್ ಜೆ. ಬಂಟ್ವಾಳ ತಹಶೀಲ್ದಾರ್ ರಶ್ಮೀ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಸೇರಿದಂತೆ  ಕಂದಾಯ ಇಲಾಖೆಯ ಅಧಿಕಾರಿಗಳು ,ಲಾಯಿಲ  ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಬಂಧುಬಳಗದವರು  ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

error: Content is protected !!