ಬೆಳ್ತಂಗಡಿ: ರಸ್ತೆ ಬದಿಯಲ್ಲಿ ದೊಡ್ಡ ಮರವೊಂದು ಅಪಾಯದ ಸ್ಥಿತಿಯಲ್ಲಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ನೋಡಿಯೂ ನೋಡದಂತೆ ಕಣ್ಣುಮುಚ್ಚಿ ಮೌನವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಕನ್ಯಾರಕೋಡಿ ಎಂಬಲ್ಲಿ ರಸ್ತೆ ಬದಿ ಅಪಾಯಕಾರಿ ಮರವೊಂದು ಇವತ್ತೋ ನಾಳೆಯೋ ಬೀಳುವ ಅಪಾಯದ ಸ್ಥಿತಿಯಲ್ಲಿದೆ. ಒಂದು ವೇಳೆ ಇದನ್ನು ತೆರವುಗೊಳಿಸದೇ ಹೋದರೆ ದೊಡ್ಡ ಅನಾಹುತ ಸಂಭವಿಸಬಹುದು ಎಂಬ ಆತಂಕದಲ್ಲಿದ್ದಾರೆ ಸ್ಥಳೀಯರು. ಈ ಬಗ್ಗೆ ಈಗಾಗಲೇ ಸ್ಥಳೀಯರು ಪಂಚಾಯತ್ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದರೂ ಮೌನವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಕ್ಷಣ ತೆಗೆಯದಿದ್ದಲ್ಲಿ ಇದೇ ಮಾರ್ಗದಲ್ಲಿ ದಿನನಿತ್ಯ ಹೋಗುವ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಮಾರ್ಗದಲ್ಲಿ ವಾಹನ ಸಂಚಾರವೂ ಇರುವುದರಿಂದ ವಾಹನದ ಮೇಲೆಯೂ ಮರ ಬೀಳುವ ಅಪಾಯ ಇದೆ ಅದಲ್ಲದೇ ಅದರ ಹತ್ತಿರವೇ ವಿದ್ಯುತ್ ತಂತಿಗಳೂ ಹಾದು ಹೋಗಿದ್ದು ಮರ ಮುರಿದು ಬಿದ್ದಲ್ಲಿ ಇನ್ನಷ್ಟು ಅನಾಹುತ ಆಗುವ ಸಂಭವ ಇದೆ ಅದ್ದರಿಂದ ತಕ್ಷಣ ಈ ಮರವನ್ನು ತೆರವುಗೊಳಿಸಿ ಸಂಭವಿಸುವ ದೊಡ್ಡ ದುರಂತವನ್ನು ತಪ್ಪಿಸಬೇಕಾಗಿದೆ. ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.