ಬೆಳ್ತಂಗಡಿ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ಹದ್ದಿನ ಕಣ್ಣು ಸಾರ್ವಜನಿಕರಿಗೆ ಮುಜುಗರ ತಪ್ಪಿಸಲು ಸಿ ಸಿ ಕ್ಯಾಮರ ಅಳವಡಿಕೆ ಪ್ರಜಾಪ್ರಕಾಶ ನ್ಯೂಸ್ ವರದಿಗೆ ಸ್ಪಂದಿಸಿದ ಪೊಲೀಸ್ , ಅರಣ್ಯ ಇಲಾಖೆ

 

 

 

ಬೆಳ್ತಂಗಡಿ: ತಾಲೂಕಿನ ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಅರಣ್ಯ ಇಲಾಖೆ ಸಿ. ಸಿ. ಕ್ಯಾಮರಾ ಅಳವಡಿಕೆ ಮಾಡಿದ್ದು, ಸ್ಥಳೀಯ ಜನತೆಗೆ ಮುಜುಗರ ಉಂಟಾಗದಂತೆ ಅದೇ ರೀತಿ ಯಾವುದೇ‌ ಈ ಪರಿಸರ ಅನಾರೋಗ್ಯಕರ‌ ಬೆಳವಣಿಗೆಗಳಿಗೆ ಬಳಕೆಯಾಗದಂತೆ ‌ಮುನ್ನೆಚ್ಚರಿಕೆ‌ ವಹಿಸಲಾಗಿದೆ. ಈ‌ ಮೂಲಕ ಇನ್ನು ಮುಂದೆ ನೈಜ ಪರಿಸರ ಪ್ರೇಮಿಗಳು ಪಾರ್ಕ್ ಪರಿಸರ ‌ಆಸ್ವಾದಿಸಲು, ಹಿರಿಯ ನಾಗರೀಕರು, ಸ್ಥಳೀಯ ವ್ಯಕ್ತಿಗಳು ನೆಮ್ಮದಿಯಾಗಿ ವಿಹಾರ ನಡೆಸಲು ಅನುಕೂಲವಾಗುವಂತೆ ‌ಕ್ರಮ ಕೈಗೊಳ್ಳಲಾಗಿದೆ‌.

 


ಮಾ. 02ರಂದು ‘ಪ್ರಜಾಪ್ರಕಾಶ ನ್ಯೂಸ್’ ‘ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಜೋಡಿ ಹಕ್ಕಿಗಳ ಕಲರವ: ಪಾರ್ಕ್ ಮರ, ಪೊದೆಗಳ ನಡುವೆ ‘ಪೋಲಿ’ ಪ್ರೇಮಿಗಳ ಪ್ರಣಯ ಪ್ರಸಂಗ:ಅಪ್ರಾಪ್ತ ಜೋಡಿಗಳ ಕಾರುಬಾರು ಸ್ಥಳೀಯರಿಗೆ ಕಿರಿ ಕಿರಿ: ಹೆಚ್ಚಬೇಕಿದೆ ಗಸ್ತು, ನಿರ್ದಿಷ್ಟ ಸ್ಥಳಗಳಲ್ಲಿ ಅವಶ್ಯ ಸಿ.ಸಿ ಕಣ್ಗಾವಲು’: ಎಂಬ ತಲೆಬರಹದೊಂದಿಗೆ ಸ್ಥಳೀಯರು ಅನುಭವಿಸುತ್ತಿದ್ದ ಮುಜುಗರದ ಕುರಿತು, ಸಾಮಾಜಿಕ ಕಳಕಳಿಯೊಂದಿಗೆ ವಿಶೇಷ ವರದಿ ಪ್ರಕಟಿಸಿತ್ತು.

 

 

ಈ ವರದಿ ಕುರಿತು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಕಾಲಿಕವಾಗಿ ಸ್ಪಂದಿಸಿದೆ. ಪೊಲೀಸ್ ಇಲಾಖೆ ವರದಿ ಪ್ರಕಟವಾದ ದಿನದಿಂದಲೇ ಗಸ್ತು ಓಡಾಟ ಹೆಚ್ಚಿಸಿತ್ತು. ಅದೇ ರೀತಿ ಅರಣ್ಯ ಇಲಾಖೆ ಈಗಾಗಲೇ ಉದ್ಯಾನವನದ ಆಯಕಟ್ಟಿನ ಜಾಗಗಳಲ್ಲಿ ಸಿ. ಸಿ. ಕ್ಯಾಮರಾ ಅಳವಡಿಸಿದೆ.‌ ಬೆಳ್ತಂಗಡಿ ಪೊಲೀಸರೂ ಹೆಚ್ಚವರಿ ಗಸ್ತಿನ ಜೊತೆಗೆ ದಿನಕ್ಕೆರಡು ಬಾರಿ ಕಡ್ಡಾಯ ಅನಿರೀಕ್ಷಿತ ಭೇಟಿ ನೀಡಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

 


ಸಿ.ಸಿ. ಕ್ಯಾಮರಾ ಅಳವಡಿಕೆ ಕುರಿತು ಸ್ಥಳೀಯರು ಪ್ರತಿಕ್ರಿಯಿಸಿದ್ದು, ಕಳೆದ ಒಂದು ವರುಷದಿಂದ ಪಾರ್ಕ್ ವೀಕ್ಷಣೆ ನೆಪದಲ್ಲಿ ಬರುತ್ತಿರುವ ಅಪರಿಚಿತರಿಂದ ನಮಗೆ ತುಂಬಾ ತೊಂದರೆಯಾಗುತಿತ್ತಲ್ಲದೇ, ಆಸಹ್ಯ ರೀತಿಯಲ್ಲಿ ನಮಗೆ ಮುಜುಗರ ಆಗುವ ರೀತಿಯಲ್ಲಿ ಅವರು ವರ್ತಿಸುತ್ತಿದ್ದರು. ಈ ಬಗ್ಗೆ ‘ಪ್ರಜಾಪ್ರಕಾಶ ನ್ಯೂಸ್’ ವಿಶೇಷ ವರದಿ ಪ್ರಕಟ ಮಾಡಿತ್ತು ಈ ವರದಿಗೆ ತಕ್ಷಣ ಸ್ಪಂದಿಸಿದ ಪೊಲೀಸರು, ದಿನದಲ್ಲಿ ಕೆಲವು ಬಾರಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆಯಿಂದ ಅಲ್ಲಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿರುವುದು ನಮಗೆಲ್ಲ ಸಂತಸ ತಂದಿದೆ. ಇದಕ್ಕಾಗಿ ಪ್ರಜಾಪ್ರಕಾಶ ನ್ಯೂಸ್ ಹಾಗೂ ತಕ್ಷಣ ಸ್ಪಂದಿಸಿದ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಈ ಪ್ರದೇಶದ ಎಲ್ಲರ ಪರವಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.

 

 


ಈಗಾಗಲೇ ಪಟ್ಟಣ ಪಂಚಾಯತ್ ಕಸಬಾಕ್ಕೆ ನೂತನವಾಗಿ .ಪೊಲೀಸ್ ಸಿಬ್ಬಂದಿಗಳಾದ ವೃಷಭ್ ಹಾಗೂ ಚೈತ್ರಾ ಅವರು  ಬೀಟ್ ಪೊಲೀಸ್ ಆಗಿ ನಿಯುಕ್ತಿಗೊಂಡಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿಯೂ ಗಸ್ತು ನಡೆಸಲಿದ್ದಾರೆ.

 

ಅರಣ್ಯ ಇಲಾಖೆಯಿಂದ ಸಧ್ಯ ಆಯಕಟ್ಟಿನ 8 ಜಾಗಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಮುಖ್ಯವಾಗಿ ಪ್ರವೇಶ ದ್ವಾರದ ಬಳಿಯೇ ಕ್ಯಾಮರಾ ಅಳವಡಿಸಲಾಗಿದ್ದು ಒಳಗೆ ಆಗಮಿಸುವವರ ಖಚಿತ ಹಾಗೂ ಸ್ಪಷ್ಟ ಛಾಯಾಚಿತ್ರ ಲಭಿಸಲಿದೆ. ಜೊತೆಗೆ ಪಾರ್ಕ್ ಒಳಭಾಗದಲ್ಲೂ ಯಾವುದೇ ಸಮಸ್ಯೆ ಉಂಟಾಗಬಹುದಾದ ಪ್ರದೇಶ ಹಾಗೂ ಕೆಲ ನಿರ್ದಿಷ್ಟ ಸ್ಥಳದಲ್ಲಿ ಕ್ಯಾಮರಾ ಅಳವಡಿಕೆ ಮಾಡಿ ನಡೆಯಬಹುದಾದ ಹೆಚ್ಚುವರಿ ಸಮಸ್ಯೆಗಳಿಗೆ ತಡೆ ಹಾಕಲು ಇಲಾಖೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿದೆ. ಈ‌ ಮೂಲಕ ಸರಕಾರಿ ‌ಇಲಾಖೆಗಳು‌ ಜನಸ್ನೇಹಿ ಯೋಚನೆ ಹಾಗೂ ಯೋಜನೆಗಳ‌ ಮೂಲಕ‌ ಪವಿತ್ರವಾಗಿರುವ ‘ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌’ ಉತ್ತಮ ಕಾರ್ಯಗಳಿಗೆ ಸದೃಢ ಮನಸ್ಸನ್ನು ಕಟ್ಟಲು ಸಹಾಯವಾಗುವಂತೆ ‌ರೂಪಿಸಲು ಶ್ರಮಿಸುತ್ತಿರುವುದು ಸಾರ್ವಜನಿಕರ ‌ಮೆಚ್ಚುಗೆಗೆ ಪಾತ್ರವಾಗಿವೆ.‌

ಇದನ್ನೂ ಓದಿ:

ಸಾಲು ಮರದ ತಿಮ್ಮಕ್ಕ‌ ಉದ್ಯಾನವನದಲ್ಲಿ ಜೋಡಿ ಹಕ್ಕಿಗಳ‌ ಕಲರವ: ಪಾರ್ಕ್ ಮರ, ಪೊದೆಗಳ ನಡುವೆ ‘ಪೋಲಿ’ ಪ್ರೇಮಿಗಳ ಪ್ರಣಯ ಪ್ರಸಂಗ: ಅಪ್ರಾಪ್ತ ಜೋಡಿಗಳ ಕಾರುಬಾರು, ಸ್ಥಳೀಯರಿಗೆ ಕಿರಿ ಕಿರಿ: ಹೆಚ್ಚಬೇಕಿದೆ ಗಸ್ತು, ನಿರ್ದಿಷ್ಟ ಸ್ಥಳಗಳಲ್ಲಿ ಅವಶ್ಯ ಸಿ.ಸಿ. ಕಣ್ಗಾವಲು: ಉದ್ಘಾಟನೆಗೂ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ ನೈಜ ‘ಪರಿಸರ ಪ್ರೇಮಿಗಳು’

 

 

 

 

error: Content is protected !!