ಬಂಟರ ಸಂಘದ ವತಿಯಿಂದ ಚಂದ್ರಮೋಹನ್ ರೈ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಉದ್ಘಾಟನೆ.

 

 

ಉಜಿರೆ:ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ತಾಲೂಕು, ಯುವ ಬಂಟರ ವಿಭಾಗ, ಬಂಟರ ಸಂಘ ಉಜಿರೆ, ಗ್ರಾಮ ಸಮಿತಿ ಲಾಯಿಲ ಸಹಯೋಗದಲ್ಲಿ ಚಂದ್ರಮೋಹನ್ ರೈ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉಜಿರೆ ಬೆಳಾಲ್ ರಸ್ತೆಯ ಅಜ್ಜರಕಲ್ಲು ಕ್ರೀಡಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ  ಉದ್ಯಮಿ ಹಾಗೂ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಯುವಕರು ಒಟ್ಟಾಗಿ ಸೇರಿಕೊಂಡು ನಡೆಸುತ್ತಿರುವ ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

 

 

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಿಭಾಗದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಯರಾಮ ಶೆಟ್ಟಿ ಪಡಂಗಡಿ ಅಧ್ಯಕ್ಷರು ವಿಜಯ ಕ್ರೆಡಿಟ್ ಕೋ ಆ ಸೊಸೈಟಿ ಜಿ.ಕೆರೆ ,ರಾಜು ಶೆಟ್ಟಿ ಬೆಂಗೆತ್ಯಾರ್  ಸಿ ಇ ಒ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಸಹಕಾರಿ ಸಂಘ, ಜಯರಾಮ ಶೆಟ್ಟಿ ಮುಂಡಾಡಿಗುತ್ತು ಎಂ.ಡಿ. ಮಾಸ್ಟರ್ ಗ್ರಾಫಿಕ್ಸ್ ಮಂಗಳೂರು , ಶ್ರೀಮತಿ ಪುಷ್ಪಾವತಿ ಆರ್. ಶೆಟ್ಟಿ‌ ಅಧ್ಯಕ್ಷರು ಗ್ರಾಮ ಪಂಚಾಯತ್ ಉಜಿರೆ, ಜಯಂತ ಶೆಟ್ಟಿ ಮಾಲಕರು ಪ್ರಗತಿ ಎಂಟರ್ ಪ್ರೈಸಸ್ ಮಡಂತ್ಯಾರ್, ರಾಧಕೃಷ್ಣ ಶೆಟ್ಟಿ ಅಂಬೆಟ್ಟು ಪ್ರಾಂಶುಪಾಲರು ಮಹಾವೀರ ಕಾಲೇಜು ಮೂಡಬಿದ್ರೆ, ಸತೀಶ್ ರೈ ಪುಂಡಿಕ್ಕು ಉದ್ಯಮಿಗಳು ಬೆಳ್ತಂಗಡಿ, ಶ್ರೀಮತಿ ಸಾರೀಕ ಡಿ. ಶೆಟ್ಟಿ , ಅಧ್ಯಕ್ಷರು ಮಹಿಳಾ ಬಂಟರ ವಿಭಾಗ ಬೆಳ್ತಂಗಡಿ,ವೆಂಕಟ್ರಮಣ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಉಜಿರೆ ವಲಯ  ಉಪಸ್ಥಿತರಿದ್ದರು.

 

 

ಯುವ ವಿಭಾಗದ ನಿರ್ದೇಶಕ ಪ್ರಶಾಂತ್ ಶೆಟ್ಟಿ ಸ್ವಾಗತಿಸಿ ಕಾರ್ಯದರ್ಶಿ  ಸುಜಯ್ ಶೆಟ್ಟಿ ವಂದಿಸಿದರು ವಸಂತ ಶೆಟ್ಟಿ ಶ್ರದ್ಧಾ ಕಾರ್ಯಕ್ರಮ  ನಿರೂಪಿಸಿದರು.

error: Content is protected !!