ಉಜಿರೆ: ಕಳೆದ 33 ವರುಷಗಳಿಂದ ಜನರ ವಿಶ್ವಾಸನೀಯ ಸಂಸ್ಥೆಯಾಗಿ ಮೂಡಿಬಂದಿರುವ ಉಜಿರೆ ಲಕ್ಷ್ಮೀ ಗ್ರೂಪ್ಸ್ ಇದರ ಸಹ ಸಂಸ್ಥೆ “ಕನಸಿನಮನೆ” ಶೋ ರೂಂ ಇದೇ ಬರುವ ಡಿ 26 ಆದಿತ್ಯವಾರ ಉಜಿರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ.ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಲಕ್ಷ್ಮೀ ಗ್ರೂಪ್ಸ್ ನ ಮೋಹನ್ ಕುಮಾರ್ ಉಜಿರೆ ಹೇಳಿದರು.
ಅವರು ಡಿ 23 ಗುರುವಾರ ಉಜಿರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ.ಇದರ ಉದ್ಘಾಟನೆಯನ್ನು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರುಗಳಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಉದ್ಯಮಿ ಹಾಗೂ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ , ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡ್ವೆನ್ನಾಯ ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ ಪೈ ಉಜಿರೆ ಉಪಸ್ಥಿತರಿದ್ದರು.
“ಕನಸಿನ ಮನೆ” ಕಲ್ಪನೆಯ ಮೋಹನ್ ಕುಮಾರ್ ಉಜಿರೆ
ವಿಶೇಷ ವರದಿ:ಪ್ರಸಾದ್ ಶೆಟ್ಟಿ ಎಣಿಂಜೆ
ಮೋಹನ್ ಕುಮಾರ್ ಉಜಿರೆ
33 ವರುಷಗಳ ಹಿಂದೆ ಮೋಹನ್ ಕುಮಾರ್ ತಂದೆಯಾದ ದಿ.ರಾಜು ಮೇಸ್ತ್ರೀಯವರು ಉಜಿರೆಯಲ್ಲಿ ಪ್ರಾರಂಭಿಸಿದ ಲಕ್ಷ್ಮೀ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ಸಿಮೆಂಟ್ ದಾರಂದ, ಕಿಟಕಿ, ಬಾಗಿಲುಗಳು, ಇತರ ಸಿಮೆಂಟ್ ಸಾಮಾಗ್ರಿಗಳು ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳದೆ ಅತ್ಯಂತ ಉತ್ತಮ ರೀತಿಯಲ್ಲಿ ತಯಾರಾಗುತಿತ್ತು. ಅದ್ದರಿಂದಲೇ ಇಡೀ ಕರ್ನಾಟಕದಾದ್ಯಂತ ಇಲ್ಲಿ ತಯಾರಾಗುವ ವಸ್ತುಗಳು ಬಹಳ ಬೇಡಿಕೆ ಪಡೆದಿವೆ. ತಂದೆಯ ಮರಣ ನಂತರ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಂಡು ತಂದೆ ಹಾಕಿಕೊಟ್ಟ ದಾರಿಯಲ್ಲೇ ಮನ್ನಡೆದವರು ಉಜಿರೆಯ ಲಕ್ಷ್ಮೀ ಗ್ರೂಪ್ಸ್ ನ ಮೋಹನ್ ಕುಮಾರ್ ಇವರು .ಹಲವಾರು ಜನರಿಗೆ ಉದ್ಯೋಗ ನೀಡಿ ಅವರ ಕಷ್ಟಗಳಿಗೆ ಸ್ಪಂದಿಸುತ್ತ ಅವರಿಗೆ ಅನ್ನದಾತರಾಗಿ ತನ್ನ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುವುದರಿಂದಲೇ ಈ ಸಂಸ್ಥೆಯಲ್ಲಿ ಕೆಲಸ ಸೇರಿದವರು ಬಿಟ್ಟು ಹೋಗದಿರುವುದು. ಲಾಭದ ಒಂದು ಪಾಲನ್ನು ಸಮಾಜ ಮುಖಿ ಕೆಲಸಕ್ಕೆ ವಿನಿಯೋಗಿಸುವ ಇವರ ಸೇವಾ ಮನಸ್ಸು ವಿಶಾಲವಾದದ್ದು.ಕಳೆದ ಹಲವು ವರುಷಗಳಿಂದ ಹಲವಾರು ಸೇವಾ ಯೋಜನೆಗಳ ಮೂಲಕ ಜನ ಮೆಚ್ಚುಗೆಯನ್ನು ಪಡೆದ ಮೋಹನ್ ಕುಮಾರ್ 2019 ನೇ ಇಸವಿಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಕಂಡು ಕೇಳರಿಯದ ರೀತಿಯಲ್ಲಿ ಬಂದಂತಹ ನೆರೆ ಹಲವಾರು ಕುಟುಂಬಗಳನ್ನು ಬೀದಿಪಾಲುಮಾಡಿತ್ತು.ಚಾರ್ಮಾಡಿ ಗ್ರಾಮದ ಕೊಳಂಬೆ ಎಂಬ ಪ್ರದೇಶದಲ್ಲಿ ಹಲವು ಮನೆಗಳು ನೆರೆಗೆ ಕೊಚ್ಚಿಕೊಂಡು ಹೋಗಿ ಕೃಷಿ ಭೂಮಿ ಮರುಭೂಮಿಯಂತಾಗಿತ್ತು ಕೃಷಿ ಭೂಮಿ ಮನೆ ಕಳೆದುಕೊಂಡವರು ನಮ್ಮ ಬದುಕು ಏನು ಎಂದು ದಿಕ್ಕು ತೋಚದೆ ದುಃಖದಲ್ಲಿರುವಾಗ ಮನೆ ಮಗನಂತೆ ಅವರ ನೆರವಿಗೆ ದಾವಿಸಿದ ಉಜಿರೆಯ ಮೋಹನ್ ಕುಮಾರ್ ಅವರು ಬದುಕು ಕಟ್ಟೋಣ ಬನ್ನಿ ಎಂಬ ಕಲ್ಪನೆಯಲ್ಲಿ ತನ್ನದೇ ಆದ ದೊಡ್ಡದಾದ ಯುವಕರ ತಂಡವನ್ನು ಕಟ್ಟಿಕೊಂಡು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶ್ರಮದಾನದ ಮೂಲಕ ಬದುಕಿನ ಕತ್ತಲೆಯಲ್ಲಿದ ಕುಟುಂಬಗಳಿಗೆ ಬೆಳಕಾಗಿ ಮೂಡಿಬಂದವರು. ಅಲ್ಲಿಂದ ಇನ್ನಷ್ಟೂ ಸೇವಾ ಯೋಜನೆಗಳು ಬದುಕು ಕಟ್ಟೋಣ ಬನ್ನಿ ತಂಡದ ಮೂಲಕ ಮಾಡುತ್ತಾ ಸಾಗಿದ ಇವರು ಕೋವಿಡ್ ಸಂದರ್ಭದಲ್ಲಿ ಬದುಕು ಕಟ್ಟೋಣ ತುರ್ತುಸೇವೆ ಎಂಬ ವಾಹನದ ವ್ಯವಸ್ಥೆಗಳನ್ನು ಮಾಡಿ ತಾಲೂಕಿನ ಕೊರೊನಾ ಪೀಡಿತರಿಗೆ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರಿಗೆ ತುರ್ತಾಗಿ ಸಾಗಲು ಉಚಿತವಾಗಿ ವ್ಯವಸ್ಥೆಯನ್ನು ಮಾಡಿದ್ದಲ್ಲದೇ ಆಹಾರ ಕಿಟ್ ಆರೋಗ್ಯ ಕಿಟ್ ಇನ್ನಿತರ ಸೇವೆಗಳನ್ನು ಮಾಡಿ ಇಡೀ ತಾಲೂಕಿನಲ್ಲಿ ನಿರೀಕ್ಷೆಗೆ ಮೀರಿದ ರೀತಿಯಲ್ಲಿ ಸಮಾಜ ಸೇವೆ ಮಾಡಿ ರಾಜ್ಯಕ್ಕೆ ಬದುಕು ಕಟ್ಟೋಣ ಬನ್ನಿ ತಂಡ ಮಾದರಿಯಾಗುವಂತೆ ಮಾಡಿದ್ದಾರೆ. ಪದ್ಮಭೂಷಣ ಅಕ್ಷರ ಸಂತ ಹರೇಕಳ ಹಾಜಬ್ಬನವರ ಶಾಲೆಗೆ ಹತ್ತು ಬೆಂಚ್ , ಡೆಸ್ಕ್ ಹಾಗೂ ಆಟದ ಸಾಮಾಗ್ರಿಗಳನ್ನು ಉಚಿತವಾಗಿ ನೀಡಿ ಮಕ್ಕಳ ಪಾಲಿಗೂ ಹೀರೋ ಆಗಿದ್ದಾರೆ. ಯಾವುದೇ ಅಹಂ ಇಲ್ಲದ ಸರಳ ವ್ಯಕ್ತಿತ್ವದ ಸದಾ ನಗುಮೊಗದ ಮೋಹನ್ ಕುಮಾರ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ “ಕನಸಿನ ಮನೆ” ಇದೇ ಬರುವ ಡಿ 26 ರಂದು ಉಜಿರೆ ಗ್ರಾಮದ ಚಾರ್ಮಾಡಿ ರಸ್ತೆಯ ಲಕ್ಷೀ ಇಂಡಸ್ಟ್ರೀಸ್ ನ ಕಟ್ಟಡದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಇಲ್ಲಿ ಸಿಮೆಂಟ್ ಮತ್ತು ಪೈಬರ್ ನಿಂದ ಮಾಡಲಾದ ಕಿಟಕಿ, ಬಾಗಿಲು, ದಾರಂದಗಳು, ಸ್ಟೀಲ್ ಕಿಟಕಿಗಳು ಬೆಂಜ್ ಡೆಸ್ಕ್ ಹಾಗೂ ಇತರ ಕೆಲವೊಂದು ಗೃಹೋಪಯೋಗಿ ವಸ್ತುಗಳು ಮರಕ್ಕಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದಲ್ಲಿ ಸಿಗಲಿದೆ. ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಇಲ್ಲಿ ತಯಾರಾಗುವ ವಸ್ತುಗಳ ಹಾಗೂ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕ್ಷೇತ್ರದ ವತಿಯಿಂದ ರಾಜ್ಯದ ವಿವಿಧ ಶಾಲೆಗಳಿಗೆ ನೀಡಲ್ಪಡುವ ಬೆಂಜ್ ಡೆಸ್ಕ್ ಹಾಗೂ ಇತರೆ ವಸ್ತುಗಳು ಇಲ್ಲಿಂದಲೇ ಸರಬರಾಜು ಮಾಡಲಾಗುತ್ತಿದೆ. ವಿಶಾಲವಾದ ಮಳಿಗೆಯಲ್ಲಿ ಅತ್ಯಾಕರ್ಷಕ ರೀತಿಯಲ್ಲಿ ಗೃಹನಿರ್ಮಾಣದ ಸಾಮಾಗ್ರಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಸಂಸ್ಥೆಯಲ್ಲಿ ಈಗಾಗಲೇ 160 ಕ್ಕಿಂತಲೂ ಅಧಿಕ ಮಂದಿ ಉದ್ಯೋಗ ಮಾಡುತಿದ್ದು ಮುಂದಿನ ದಿನಗಳಲ್ಲಿ ಸಮಾಜ ಸೇವೆಯೊಂದಿಗೆ ನೂರಾರು ಜನರಿಗೆ ಉದ್ಯೋಗವನ್ನು ನೀಡುವ ಶಕ್ತಿ ಹಾಗೂ ಅವರ ಕನಸಿನ ಕೂಸು “ಬದುಕು ಕಟ್ಟೋಣ ಬನ್ನಿ” ತಂಡದ ಸೇವಾ ಯೋಜನೆ ಇನ್ನಷ್ಟು ವಿಸ್ತರಿಸಲಿ.