ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಕ್ರಿಸ್‌ಮಸ್ ಆಚರಣೆ.

 

 

 

 

ಬೆಳ್ತಂಗಡಿ : ದಕ್ಷಿಣ ಕನ್ನಡ ರೂರಲ್ ಡೆವಲಪ್ ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಹೆಚ್.ಐ.ವಿ ಸೋಂಕಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಹಾಗೂ ಕ್ರಿಸ್‌ಮಸ್ ಆಚರಣೆಯನ್ನು ಡಿ 23 ಗುರುವಾರ ಸಾಂತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ನವಚೈತನ್ಯ ಸಂಘದ ಅಧ್ಯಕ್ಷೆ ಶ್ರೀಮತಿ ಲಲಿತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ ಧರ್ಮಪ್ರಾಂತ್ಯದ ಸೀರೋ ಮಲಬಾರ್ ಯೂತ್ ಮೂವ್ ಮೆಂಟ್ ಮತ್ತು ಫ್ಯಾಮಿಲಿ ಅಪೋಸ್ಟಲೆಟ್ ಇದರ ನಿರ್ದೇಶಕರಾದ  ಫಾ. ಜೋಸೆಫ್ ಚೀರನ್  ಕ್ರಿಸ್‌ಮಸ್ ಕೇಕ್ ಕಟ್ ಮಾಡಿ ಹಬ್ಬದ ಸಂದೇಶವನ್ನು ನೀಡಿದರು. ಇದರ ಅಧ್ಯಕ್ಷರಾದ ಸುನಿಲ್ ಪೌಲ್ ಪೌಷ್ಟಿಕ ಆಹಾರ ಕಿಟ್ಟನ್ನು ವಿತರಿಸಿದರು. ಕುಮಾರಿ ಸಮೀಕ್ಷಾ ಕ್ರಿಸ್ಮಸ್ ಗೀತೆ ಹಾಡಿ ಶುಭ ಹಾರೈಸಿದರು. ಭಾಗವಹಿಸಿದ ಎಲ್ಲರಿಗೂ ಬೆಳ್ತಂಗಡಿ ಧರ್ಮಪ್ರಾಂತ್ಯದ ಸೀರೋ ಮಲಬಾರ್ ಯೂತ್ ಮೂವ್ ಮೆಂಟ್ ವತಿಯಿಂದ ಕೇಕ್ ಹಂಚಲಾಯಿತು. ಸೈಂಟ್ ಮೇರಿಸ್ ಚರ್ಚ್ ಶಿರ್ಲಾಲು ಇಲ್ಲಿನ ಯೂತ್ ಮೂವ್ ಮೆಂಟ್ ಮಕ್ಕಳು ಕ್ರಿಸ್‌ಮಸ್ ಗೀತೆಯನ್ನು ಹಾಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ವಿದ್ಯಾರ್ಥಿನಿಯರು ಪ್ರೇರಣಾ ತರಬೇತಿ ನೀಡಿದರು. ಮಾರ್ಕ್ ಡಿ ಸೋಜ ಸಾಂತಕ್ಲೋಸ್ ವೇಷಧಾರಿಯಾಗಿ ಎಲ್ಲರನ್ನು ರಂಜಿಸಿದರು. ಒಟ್ಟು 60 ಮಂದಿ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ಫಾ. ಬಿನೋಯಿ ಎ.ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಬ್ಬಂದಿ ಶ್ರೀ ಸುನಿಲ್ ಗೊನ್ಸಾಲ್ವಿಸ್ ಸ್ವಾಗತಿಸಿ ಶ್ರೀಮತಿ ಸಿಸಿಲ್ಯಾ ತಾವ್ರೋ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: Content is protected !!