ರೈತರ ಹೋರಾಟಕ್ಕೆ ಜಯ ಕೃಷಿ ಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರ.

 

 

ಬೆಂಗಳೂರು:  ರೈತರ ಹೋರಾಟಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮಣಿದಿದ್ದು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ

ಇಂದು ಗುರುನಾನಕ್​ ದಿನಾಚರಣೆ ನಿಮಿತ್ತ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ “ಇಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ, ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಸಂಸತ್ತಿನ ಅಧಿವೇಶನದಲ್ಲಿ ಕೃಷಿ ಕಾನೂನುಗಳನ್ನ ಹಿಂಪಡೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಹೋರಾಟ ಮಾಡುತ್ತಿರುವ ಎಲ್ಲ ರೈತರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿ ಹೊಸ ಜೀವನ ಆರಂಭಿಸಲು ಒತ್ತಾಯಿಸುತ್ತೇನೆ” ಎಂದು ಇದೇ ವೇಳೆ ರೈತರಲ್ಲಿ ಪ್ರಧಾನಿ ಮನವಿ ಮಾಡಿಕೊಂಡರು.ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟ”ನಾನೇನೇ ಮಾಡಿದ್ದರೂ ಅದು ರೈತರಿಗಾಗಿ ಮಾಡಿದ್ದೇನೆ. ನಾನು ಮಾಡುತ್ತಿರುವುದು ನಿಮಗಾಗಿ ಮತ್ತು ದೇಶಕ್ಕಾಗಿ. ನಿಮ್ಮ ಆಶೀರ್ವಾದದಿಂದ ನನ್ನ ಶ್ರಮದಲ್ಲಿ ನಾನು ಏನನ್ನೂ ಬಿಡಲಿಲ್ಲ. ಇನ್ಮುಂದೆಯೂ ಮತ್ತಷ್ಟು ಶ್ರಮದೊಂದಿಗೆ ಕೆಲಸ ಮಾಡುವೆ. ಈ ಮೂಲಕ ನಿಮ್ಮ ಕನಸುಗಳು, ರಾಷ್ಟ್ರದ ಕನಸುಗಳು ನನಸಾಗಬಹುದು ಎಂದು ಪ್ರಧಾನಿ ಮೋದಿ ಇದೇ ವೇಳೆ, ಭರವಸೆ ನೀಡಿದರು.
2020ರ ನವೆಂಬರ್​ನಿಂದ ಮೋದಿ ಸರ್ಕಾರದ ನೂತನ ಕೃಷಿ ಕಾಯ್ದೆಗಳಾದ

1. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರವರ್ತನೆ ಮತ್ತು ಅನುಕೂಲ) ಕಾಯ್ದೆ

2.ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ

3.ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ

ಈ ಮೂರು ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಸಾವಿರಾರು ರೈತರು ದೆಹಲಿಯ ಗಡಿಭಾಗಗಳಲ್ಲಿ ಶಿಬಿರಗಳನ್ನು ಮಾಡಿಕೊಂಡು ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಾ ಧರಣಿ, ಪ್ರತಿಭಟನೆ, ಬಂದ್​ ನಡೆಸುತ್ತಾ ಬಂದಿದ್ದರು ಈ ಹೋರಾಟದಲ್ಲಿ ಸುಮಾರು 300 ರೈತರು ಅಸು ನೀಗಿದ್ದರು.ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟ ಮೋದಿಯ ಈ ಮಹತ್ತರ ನಿರ್ಧಾರವನ್ನು ರೈತ ಸಂಘಟನೆಗಳು ಸ್ವಾಗತಿಸಿದ್ದು, ವಿಜಯವನ್ನು ಸಂಭ್ರಮಿಸುತ್ತಿದ್ದಾರೆ.

error: Content is protected !!