ಸಂಪತ್ತನ್ನು ದೇವರ ಮಾರ್ಗದಲ್ಲಿ ವ್ಯಯಿಸಿದವ ವಿಜಯಿ; ಸಯ್ಯಿದ್ ಕೂರತ್ ತಂಙಳ್ ನಿಡಿಗಲ್‌ ನಲ್ಲಿ ನೂತನ ಮಸ್ಜಿದ್ ಉದ್ಘಾಟನೆ

 

 

 

 

 

ಬೆಳ್ತಂಗಡಿ; ನಿತ್ಯ ದೇವಸ್ಮರಣೆ‌ ಮತ್ತು ಧಾರ್ಮಿಕ ಸತ್ಕರ್ಮಗಳ ಮೂಲಕ ನಮ್ಮ ಅಂತರಾತ್ಮದ ಶುದ್ದೀಕರಣಕ್ಕಾಗಿ ಆರಾಧನಾ ಕೇಂದ್ರವಾದ ಮಸ್ಜಿದ್ ಅನ್ನು ನಾವು ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು. ನಮ್ಮ ಸಂಪತ್ತನ್ನು ದೇವರ ಮಾರ್ಗದಲ್ಲಿ ವ್ಯಯಿಸಲು ಇಂತಹಾ ಮಸ್ಜಿದ್‌ಗಳ ನಿರ್ಮಾಣ ಕಾರಣದಿಂದ ನಮಗೆ ಬರುವ ಅವಕಾಶ ಬಳಸಿಕೊಳ್ಳುವುದರಿಂದ ಜೀವನಾವಸಾನ ಕಾಲದಲ್ಲಿ ವಿಜಯಿಗಳಾಗಲು ಸಾಧ್ಯ ಎಂದು ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಹೇಳಿದರು.

ಕಲ್ಮಂಜ ಗ್ರಾಮದ ನಿಡಿಗಲ್ ನಲ್ಲಿ ‘ಮರ್ಕಝ್’ ಸಂಸ್ಥೆಯ ‘ಆರ್‌ಸಿಎಫ್‌ಐ’ ನಿಧಿ ಹಾಗೂ ಊರವರ ಪೂರಕ ದೇಣಿಗೆಯ ಸಹಕಾರದೊಂದಿಗೆ ನಿರ್ಮಿಸಲಾದ ನೂತನ ಮಸ್ಜಿದ್ ಅನ್ನು ನ.18 ರಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

 

 

ಮಸ್ಜಿದ್ ಗೌರವಾಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಸ್ಜಿದ್‌ಗಳು ಶಾಂತಿ, ಸಮಾಧಾನದ, ಸೌಹಾರ್ದತೆಯ ಕೇಂದ್ರವಾಗಿದೆ. ನಮ್ಮನಮ್ಮೊಳಗಿನ ಸಮಸ್ಯೆಗಳಿಗೆ ಧಾರ್ಮಿಕ ನಾಯಕರ ಮೂಲಕ ಇಲ್ಲಿ ಪರಿಹಾರವಿದೆ. ಇದು ಧರ್ಮ ನ್ಯಾಯಾಲಯ ಇದ್ದಂತೆ. ಇಸ್ಲಾಂ ನ ಚೌಕಟ್ಟಿನಲ್ಲಿ ಜೀವಿಸುವವನಿಗೆ ಇಲ್ಲಿ ನಿತ್ಯ ನ್ಯಾಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಮುಹಮ್ಮದ್ ಮುಜೀಬ್ ವಹಿಸಿದ್ದರು.
ಸಮಾರಂಭದಲ್ಲಿ ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್, ಹಾಫಿಳ್ ಸೂಫಿ ಸಯ್ಯಿದ್ ದುಬಾಯಿ, ಹಾಫಿಳ್ ರವೂಫ್ ಚಿಕ್ಕಮಗಳೂರು, ಕೃಷ್ಣಾಪುರ ಜಮಾಅತ್ ಸಂಯುಕ್ತ ಖಾಝಿ ಹಾಜಿ ಇ.ಕೆ ಇಬ್ರಾಹಿಂ ಮದನಿ ಶುಭ ಹಾರೈಸಿದರು.
ಸಮಾರಂಭ ದಲ್ಲಿ ತಾ. ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್‌ ಇಸ್ಮಾಯಿಲ್ ಅಲ್‌ಹಾದಿ ತಂಙಳ್ ಉಜಿರೆ, ಸಯ್ಯಿದ್ ವಾದಿ ಇರ್ಫಾನ್ ತಂಙಳ್ ಸಬರಬೈಲು, ಮರ್ಕಝ್ ನ‌ ಇಂಜಿನಿಯರ್ ಗಳಾದ ನಾಸಿರ್ ಮತ್ತು ಅಸ್ಲಂ, ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು, ಹಂಝ ಮದನಿ, ತಸ್ಲೀಮ್ ಸಖಾಫಿ, ಗುತ್ತಿಗೆದಾರ ವಝೀರ್ ಬಂಗಾಡಿ, ಹಮೀದ್ ಫೈಝಿ ಕಿಲ್ಲೂರು, ಮಸ್ಜಿದ್ ಧರ್ಮಗುರುಗಳಾದ ಇಲ್ಯಾಸ್ ಮದನಿ ಮತ್ತು ಶಫೀಕ್ ಹಿಮಮಿ, ಹಮೀದ್ ನೆಕ್ಕರೆ, ಮುಹಮ್ಮದ್ ಕುಂಞಿ ಸರಳಿಕಟ್ಟೆ, ಸಯ್ಯಿದ್ ಹಬೀಬ್ ಸಾಹೇಬ್ ಮಂಜೊಟ್ಟಿ ಮೊದಲಾದವರು ಭಾಗಿಯಾಗಿದ್ದರು.

ಆಡಳಿತ ಸಮಿತಿ ಪದಾಧಿಕಾರಿಗಳಾದ ಬಿಎನ್ ಹಮೀದ್, ಎನ್.ಎಂ ರಫೀಕ್, ಯು ಇಸ್ಮಾಯಿಲ್, ಅಶ್ರಫ್ ದರ್ಖಾಸು, ಅಬ್ದುಲ್ ಅಝೀಝ್, ಟಿ.ಹೆಚ್ ಹನೀಫ್ ಮುಸ್ಲಿಯಾರ್, ಪಿ.ಹೆಚ್ ಹಮೀದ್, ಅಬೂಬಕ್ಕರ್, ಎ‌ ಕಾಸಿಂ, ಅಬ್ದುಲ್ ರಹಿಮಾನ್, ಎನ್.ಹೆಚ್ ಹಂಝ ಮತ್ತು ಬಿ.ಇ ಅಬ್ಬಾಸ್ ಇವರು ಉಪಸ್ಥಿತರಿದ್ದರು.

ಅಶ್ರಫ್ ಸಖಾಫಿ ಮಾಡಾವು ಸ್ವಾಗತಿಸಿದರು. ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಪ್ರಯುಕ್ತ ನ.17 ರಂದು ಮಸ್ಜಿದ್ ವೀಕ್ಷಣೆಗಾಗಿ ಸರ್ವ ಧರ್ಮೀಯರನ್ನೂ ಆಹ್ವಾನಿಸಿದ್ದು ಮಾದರಿ ಕಾರ್ಯಕ್ರಮವಾಗಿ ರೂಪುಗೊಂಡಿತು. ಬಳಿಕ ಸಾರ್ವಜನಿಕ ಅನ್ನದಾನ‌ ನಡೆಯಿತು.

error: Content is protected !!