ಪದ್ಮಶ್ರೀ ಪುರಸ್ಕ್ರತ ಹರೇಕಳ ಹಾಜಬ್ಬರಿಗೆ ಅಭಿನಂದನಾ ಸಮಾರಂಭ ನ 23 ರಂದು ಬೆಳ್ತಂಗಡಿ ಜನತೆಯ ಪರವಾಗಿ ಗೌರವಾರ್ಪಣೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಉಜಿರೆಯ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಕಾರ್ಯಕ್ರಮ

 

ಬೆಳ್ತಂಗಡಿ : ಪದ್ಮಶ್ರೀ ಪುರಸ್ಕೃತ  ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದನಾ ಕಾರ್ಯಕ್ರಮ ನವೆಂಬರ್ 23 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ನಡಯಲಿದೆ ಎಂದು ಬೆಳ್ತಂಗಡಿ ಹಾಜಬ್ಬ ಅಭಿನಂದನಾ ಸಮಿತಿ  ಪ್ರಕಟನೆಯಲ್ಲಿ ತಿಳಿಸಿದೆ.

ಕಿತ್ತಳೆ ಹಣ್ಣು ಮಾರಿ ದೈನಂದಿನ ಉಳಿಕೆಯಿಂದ ತನ್ನ ಊರಿನಲ್ಲಿ ಶಾಲೆ ತೆರೆದು ತಾನು ಶಿಕ್ಷಣ ಪಡೆಯದಿದ್ದರೂ ತನ್ನ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಡ ಸಂಕಲ್ಪದೊಂದಿಗೆ ಕಾರ್ಯ ಸಾಧಿಸಿ ರಾಷ್ಟ್ರದಾದ್ಯಂತ ಮನೆ ಮಾತಾದ ಅಕ್ಷರ ಸಂತರಾಗಿ ಇತ್ತೀಚೆಗೆ ರಾಷ್ಟ್ರ ಪತಿಗಳಿಂದ ಗೌರವ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಕೊಂಡ ಹರೆಕ್ಕಳ ಹಾಜಬ್ಬರಿಗೆ ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಹಾಗೂ ರೋಟರಿ ಕ್ಲಬ್ ಉಜಿರೆ ಇದರ ಸಹಭಾಗಿತ್ವದಲ್ಲಿ ಶಾಸಕ ಹರೀಶ್ ಪೂಂಜರವರ ಅಧ್ಯಕ್ಷತೆಯಲ್ಲಿ ನಡೆಯುವ ಅಭಿನಂದನಾ ಸಮಾರಂಭ ತಾಲೂಕಿನ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ  ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದೆ.

error: Content is protected !!