ಬೆಳ್ತಂಗಡಿ: ಕಳೆದ ರಾತ್ರಿ ಸುರಿದ ಮಳೆಗೆ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಬಂಡೆಯೊಂದು ರಸ್ತೆಗೆ ಉರುಳಿಬಿದ್ದಿದೆ.
ಕಳೆದ ಎರಡು ದಿನಗಳಿಂದ ಬೆಳ್ತಂಗಡಿ ತಾಲೂಕಿನಾದ್ಯಂತ ಮಳೆ ಸುರಿಯುತಿದ್ದು ನಿನ್ನೆ ರಾತ್ರಿ ಸುರಿದ ಮಳೆಗೆ ಚಾರ್ಮಾಡಿ ಘಾಟ್ ನ ಏಳನೇ ತಿರುವಿನಲ್ಲಿ ಗುಡ್ಡದಿಂದ ಬಂಡೆಕಲ್ಲೊಂದು ಉರುಳಿ ರಸ್ತೆಗೆ ಬಿದ್ದಿದೆ. ಕಲ್ಲು ರಸ್ತೆಗೆ ಉರುಳಿಬಿದ್ದ ಸಂದರ್ಭ ವಾಹನ ಸಂಚಾರ ವಿರಳವಾಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಸುದ್ಧಿ ತಿಳಿದ ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಈಗಾಗಲೇ ಏಕ ಮುಖ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಈ ಘಾಟ್ ಪ್ರದೇಶದಲ್ಲಿ ವಿಪರೀತ ಮಂಜು ಮುಸುಕಿದ ವಾತಾವರಣ ಇರುವುದರಿಂದ ತಕ್ಷಣ ಈ ಬಂಡೆಕಲ್ಲನ್ನು ತೆರವುಗೊಳಿಸದಿದ್ದರೆ ಮಂಜು ಮುಸುಕಿ ಈ ಬಂಡ್ಡೆ ಕಲ್ಲು ವಾಹನ ಸವಾರರಿಗೆ ಕಾಣದೇ ಅಪಘಾತ ಸಂಭವಿಸಬಹುದು ಎಂಬ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಅಧಿಕಾರಿಗಳು ಈ ಕಲ್ಲನ್ನು ತಕ್ಷಣ ತೆರವುಗೊಳಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕಾಗಿದೆ
ಸ್ಪಂದಿಸಿದ ಅಧಿಕಾರಿಗಳು ಬಂಡೆಕಲ್ಲು ತೆರವು
ಕುಸಿದು ಬಿದ್ದ ಬಂಡೆಕಲ್ಲು ತರವುಗೊಳಿಸದೇ ಇದ್ದಲ್ಲಿ ಅಪಾಯ ಸಂಭವಿಸುವ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ತಂಡ ವರದಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಜೆಸಿಬಿ ಮೂಲಕ ಬಿದ್ಧಿದ್ದ ಕಲ್ಲನ್ನು ತೆರವುಗೊಳಿಸುವ ಕೆಲಸವನ್ನು ಮಾಡಿದರು.ಈ ಮೂಲಕ ತಕ್ಷಣ ಸ್ಪಂದಿಸಿದ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.