ಬೆಳ್ತಂಗಡಿ : ಕರ್ನಾಟಕ ಸರಕಾರ, ದ.ಕ. ಕಾರ್ಮಿಕ ಇಲಾಖೆ ಹಾಗೂ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಸಹಯೋಗದಲ್ಲಿ ಕೋವಿಡ್ 19 ಲಾಕ್ ಡೌನ್ ಸಮಸ್ಯೆಯಿಂದಾಗಿ ಸಂಕಷ್ಟಕ್ಕೀಡಾದ ಕುಂಬಾರ ಸಮುದಾಯದ ಅಸಂಘಟಿತ ಕಾರ್ಮಿಕ ಬಂಧುಗಳಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಮಹತ್ವಕಾಂಕ್ಷೆ ಯೋಜನೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮ
ಶಾಸಕ ಹರೀಶ್ ಪೂಂಜ ಅವರ ನೇತ್ರತ್ವದಲ್ಲಿ ಶ್ರಮಿಕ ಶಾಸಕರ ಕಚೇರಿ ಆವರಣದಲ್ಲಿ ನಡೆಯಿತು.
ಅಸಂಘಟಿತ ಕಟ್ಟಡ ಕಾರ್ಮಿಕರ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಸರಕಾರದಿಂದ ಕಟ್ಟಡ ಕಾರ್ಮಿಕರಿಗೆ ಕೊರೊನಾ ಸಂಕಷ್ಟ ಕಾಲದಲ್ಲಿ ಆಹಾರ ಸಾಮಗ್ರಿಗಳನ್ನು ತಾಲೂಕಿನಲ್ಲಿ ಒದಗಿಸಲಾಗಿದೆ. ಇದೀಗ ಕಾರ್ಮಿಕ ಸಚಿವರು ಆಶಯದಂತೆ ಇತರ ವರ್ಗದವರಿಗೂ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಕೋಶಾಧಿಕಾರಿ ವಸಂತ ಹೇಬೆಬೈಲು, ಸಂಘದ ನಾವೂರು ಗ್ರಾಮ ಯುವ ವೇದಿಕೆ ಅಧ್ಯಕ್ಷ ರಾಜ್ ಕುಮಾರ್, ಭಾರತೀಯ ಮಜ್ದೂರು ಸಂಘ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಕಾರ್ಮಿಕ ಇಲಾಖೆ ನಿರೀಕ್ಷಕ ಹರೀಶ್, ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕ ಪದ್ಮಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್, ಕಾರ್ಯದರ್ಶಿ ನಿರ್ಮಲ್ ಕುಮಾರ್ ಮೊದಲಾದವರು ಇದ್ದರು.
ಸುರಕ್ಷಾ ಕಿಟ್ ವಿತರಣೆ
ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಪ್ರತಿರಕ್ಷಣಾ ಸಾಮಾಗ್ರಿಗಳ ಹಾಗೂ ಸುರಕ್ಷಾ ಕಿಟ್ ಸಾಂಕೇತಿಕವಾಗಿ ವಿತರಿಸಲಾಯಿತು.
ತಾಲೂಕಿನ 48 ಗ್ರಾಮ ಪಂಚಾಯಿತಿ ಮತ್ತು ಒಂದು ನಗರ ಪಂಚಾಯತಿಗೆ ಈ ಕಿಟ್ ವಿತರಣೆ ಆಗಲಿದೆ.
50 ಮೇಲ್ಪಟ್ಟ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪ್ರತಿರಕ್ಷಣಾ( ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಆಯುರ್ವೇದ ಔಷಧ) ಕಿಟ್ ಹಾಗೂ 50 ವರ್ಷದಿಂದ ಕೆಳಗಿನ ವಯಸ್ಸಿನವರಿಗೆ ಸುರಕ್ಷಾ ( ಸ್ಯಾನಿಟೈಸರ್, ಮಾಸ್ಕ್ ಮೊದಲಾದ ) ಕಿಟ್ ವಿತರಿಸುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.