ನಗರದಿಂದ ಕೂಗಳತೆ ದೂರದಲ್ಲೂ ಇಲ್ಲ ನೆಟ್ ವರ್ಕ್!: ಅನ್ ಲೈನ್ ತರಗತಿಗಾಗಿ ಮಕ್ಕಳಿಂದ ಗುಡ್ಡದಲ್ಲಿ ಅಟ್ಟಳಿಗೆ ನಿರ್ಮಾಣ

 

ಬೆಳ್ತಂಗಡಿ: ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ ಅದೆಷ್ಟೋ ಜನರನ್ನು ಈ ಸೋಂಕು ಬಲಿ ತೆಗೆದುಕೊಂಡಿದೆಯಲ್ಲದೆ ಜನಜೀವನವೇ ದುಸ್ಥರವಾಗಿದೆ. ಎಲ್ಲಾ ಕ್ಷೇತ್ರಗಳೂ ಸ್ತಬ್ದವಾಗಿದೆ. ಶಾಲಾ ಕಾಲೇಜ್ ಗಳು ತೆರೆಯದೇ ವಿದ್ಯಾರ್ಥಿಗಳ ಸ್ಥಿತಿ ಶೋಚಾನೀಯವಾಗಿದೆ ಈಗಾಗಲೇ ಅನ್ ಲೈನ್ ಮೂಲಕ ಪಾಠ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.‌ ಖಾಸಗಿ ಶಾಲೆಗಳಲ್ಲಿ ನಡೆಯುವಂತೆ ಸರ್ಕಾರಿ ಶಾಲೆಗಳಲ್ಲೂ ಅನ್ ಲೈನ್ ಕ್ಲಾಸ್ ನಡೆಸುವಂತೆ ಸರ್ಕಾರ ಆದೇಶಿಸಿದೆ ಅದರೆ ಅನ್ ಲೈನ್ ಕ್ಲಾಸ್ ಗಳಿಗೆ ನೆಟ್ ವರ್ಕ್ ಸಮಸ್ಯೆಯಿಂದ ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆೆ. ಇದರಿಂದ ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳ ಭವಿಷ್ಯದ ಚಿಂತೆ ಹೆತ್ತವರಿಗೆ ಕಾಡಲಾರಂಭಿಸಿದೆ.

ಗ್ರಾಮೀಣ ಭಾಗಗಳಲ್ಲಿ ಮಾತನಾಡಲೂ ನೆಟ್ ವರ್ಕ್ ಇಲ್ಲದ ಪ್ರದೇಶಗಳಲ್ಲಿ ಅನ್ ಲೈನ್ ಕ್ಲಾಸ್ ನಡೆಸುವುದಾದರೂ ಹೇಗೆ ಏನ್ನುವ ಚಿಂತೆಯಲ್ಲಿ ಶಿಕ್ಷಕರು ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಈಗಾಗಲೇ ಅತೀ ಹೆಚ್ಚು ಗ್ರಾಮೀಣ ಭಾಗಗಳಲ್ಲಿ ಈ ನೆಟ್ ಸಮಸ್ಯೆಯಿಂದ ಅದೆಷ್ಟೋ ವಿದ್ಯಾರ್ಥಿಗಳು ಅನ್ ಲೈನ್ ಕ್ಲಾಸ್ ಗೆ ಸೇರಿಕೊಳ್ಳಲಾಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಸಮಸ್ಯೆಗಾಗಿ ಕೆಲವೊಂದು ಕಡೆಗಳಲ್ಲಿ ನೆಟ್ ವರ್ಕ್ ಗಾಗಿ ಎತ್ತರದ ಜಾಗಗಳಲ್ಲಿ ಮರದ ಮೇಲೆ ಹೋಗಿ ಹುಡುಕಾಡುವ ಸ್ಥಿತಿ ಇದೆ. ನಗರದ ಕೂಗಳತೆಯ ದೂರದಲ್ಲೂ ನೆಟ್ ವರ್ಕ್ ಸಮಸ್ಯೆಗಾಗಿ ಒದ್ದಾಡುವಂತಾಗಿದೆ.

ಬೆಳ್ತಂಗಡಿ ತಾಲೂಕಿನ ನಗರಕ್ಕೆ ಸಮೀಪವಿರುವ ಲಾಯಿಲ ಗ್ರಾಮದ ಹಲವು ಕಡೆಗಳಲ್ಲಿಯೂ ನೆಟ್ ವರ್ಕ್ ಸಮಸ್ಯೆ ಕಂಡು ಬರುತ್ತಿದೆ. ನೆಟ್ ವರ್ಕ್ ಗಾಗಿ ಗುಡ್ಡ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಕೆಲವು ವಿದ್ಯಾರ್ಥಿಗಳು ಕಂಡು ಕೊಂಡ ದಾರಿ ಅನ್ ಲೈನ್ ಕ್ಲಾಸ್ ಗಾಗಿ ಎತ್ತರ ಜಾಗದಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಂಡದ್ದು ನಗರದಿಂದ ಕೆಲವೇ ದೂರದಲ್ಲಿ ಅನ್ ಲೈನ್ ಕ್ಲಾಸ್ ಗಾಗಿ ಒಂದು ಟರ್ಪಲ್ ಹಾಕಿ ಮನೆ ನಿರ್ಮಿಸಿ ಕೆಲವು ವಿದ್ಯಾರ್ಥಿಗಳು ಪಾಠವನ್ನು ಕೇಳುತಿದ್ದಾರೆ. ಇಂತಹ ಸ್ಥಿತಿ ತಾಲೂಕಿನ ಇತರ ಗ್ರಾಮದಲ್ಲಿಯೂ ನಡೆಯುತಿದ್ದು ವಿದ್ಯಾರ್ಥಿಗಳು ಮನೆಯಿಂದ ದೂರದ ಎತ್ತರ ಪ್ರದೇಶದ ಗುಡ್ಡದಲ್ಲಿ ಹೋಗಿ ಪಾಠ ಕೇಳುವ ಸಂದಿಗ್ದ ಪರಿಸ್ಥಿತಿಯಲ್ಲಿ ಇದ್ದಾರೆ.

ಈಗಾಗಲೇ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಅನ್ ಲೈನ್ ಕ್ಲಾಸ್ ಗಳನ್ನು ನಡೆಸಬೇಕೆಂಬ ಆದೇಶವನ್ನು ಮಾಡಿದೆ ಅದರೆ ಶಾಲೆಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿಂದಾಗಿ ಮಕ್ಕಳಿಗೆ ಪಾಠ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಖಾಸಗಿ ಶಾಲೆಗಳು ನಗರದ ಸಮೀಪ ಇರುವುದರಿಂದ ಅವರಿಗೆ ಹೆಚ್ಚಿನ ಸಮಸ್ಯೆ ಆಗುವುದಿಲ್ಲ ಅದರೆ ಗ್ರಾಮೀಣ ಪ್ರದೇಶದಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ ತುಂಬಾ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ನಮ್ಮನ್ನೇ ಪ್ರಶ್ನೆ ಮಾಡಿ ಖಾಸಗಿ ಶಾಲೆಯ ಕಡೆ ಕೈತೋರಿಸುತ್ತಾರೆ. ಅಧಿಕಾರಿಗಳಿಗೆ ಹಳ್ಳಿ ಶಾಲೆಗಳ ಪರಿಸ್ಥಿತಿ ಅರ್ಥ ಆಗುವುದಿಲ್ಲ ಇದರಿಂದ ನಮಗೂ ಯಾವ ರೀತಿ ಪಾಠ ಮಾಡುವುದೆಂಬ ಚಿಂತೆ ಆಗುತ್ತಿದೆ ಎಂದು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತನ್ನ ಅಸಾಹಯಕತೆಯನ್ನು ತೋಡಿಕೊಂಡಿದ್ದಾರೆ.

ಸರ್ಕಾರ ಅನ್ ಲೈನ್ ಕ್ಲಾಸ್ ಗಳನ್ನು ಮಾಡುವಂತೆ ಶಿಕ್ಷಕರಿಗೆ ಸೂಚಿಸಿದರೂ ಗ್ರಾಮೀಣ ಭಾಗದ ಮಕ್ಕಳು ಈ ಶಿಕ್ಷಣದಿಂದಲೂ ವಂಚಿತರಾಗುತ್ತಾರೆ ನಗರ ವ್ಯಾಪ್ತಿಯ ಮಕ್ಕಳಿಗೆ ನೆಟ್ ವರ್ಕ್ ಸಮಸ್ಯೆ ಇಲ್ಲದೇ ಇರುವುದರಿಂದ ಅವರಿಗೆ ಸಮಸ್ಯೆ ಇಲ್ಲ ಅದರೆ ಗ್ರಾಮೀಣ ಭಾಗಗಳಲ್ಲಿ ತುಂಬಾ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.ಬೆಳ್ತಂಗಡಿ ತಾಲೂಕಿನ ಹಲವೆಡೆ ನೆಟ್ ವರ್ಕ ಸಮಸ್ಯೆ ಹೆಚ್ಚಾಗಿ ಇದ್ದು ಶಿಕ್ಷಕರೂ ಕೂಡ ಒದ್ದಾಡುವಂತಾಗಿದೆ. ಅದ್ದರಿಂದ ಸರ್ಕಾರಗಳು ಗ್ರಾಮೀಣ ಭಾಗದ ಜನರ ಸಮಸ್ಯೆಯ ಬಗ್ಗೆಯೂ ಯೋಚಿಸಿ ಸೂಕ್ತವಾದ ನೆಟ್ ವರ್ಕ್ ಸಿಗುವಂತೆ‌ ಅಲ್ಲಲ್ಲಿ ಟವರ್ ಗಳನ್ನು ನಿರ್ಮಿಸಿ‌ ಗ್ರಾಮೀಣ ಭಾಗದಲ್ಲೂ ನೆಟ್ ವರ್ಕ್ ಸಮಸ್ಯೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಇದನ್ನೆಲ್ಲ ಕೇವಲ ನಗರ ವ್ಯಾಪ್ತಿಗೆ‌ ಮಾತ್ರ ಸೀಮಿತಗೊಳಿಸದೇ ಗ್ರಾಮೀಣ ಭಾಗದ ಜನರ ಸಮಸ್ಯೆಗಳನು ಆಲಿಸಿ ಸಮಸ್ಯೆಗಳನ್ನು ಪರಿಹರಿಸಲು ಚಿಂತನೆ ನಡೆಸಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ನಗರ ಪ್ರದೇಶದಿಂದ ಅನತಿ ದೂರದಲ್ಲಿದ್ದರೂ ನಮಗೆ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದೆ ಮನೆಯಲ್ಲಿ ಸ್ವಲ್ಪವೂ ನೆಟ್ ವರ್ಕ್ ಸಿಗುತ್ತಿಲ್ಲ ಅದಕ್ಕಾಗಿ ಅನ್ ಲೈನ್ ಕ್ಲಾಸ್ ಗೆ ನಮಗೆ ತೊಂದರೆಯಾಗುತಿತ್ತು ಈ ಬಗ್ಗೆ ನಾವೆಲ್ಲರೂ ಸೇರಿಕೊಂಡು ನೆಟ್ ಸಿಗುವ ಎತ್ತರದ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಪಾಠವನ್ನು ಕೇಳುತಿದ್ದೇವೆ .ಮಳೆ ಬಂದರೆ ಈ ಶೆಡ್ ನಲ್ಲಿ ಕುಳಿತುಕೊಳ್ಳುತ್ತೇವೆ. ಇಲ್ಲದಿದ್ದರೆ ಮಾರ್ಗದ ಬದಿಯಲ್ಲಿ ಕುಳಿತು ಪಾಠವನ್ನು ಕೇಳುತ್ತೇವೆ. ನೆಟ್ ವರ್ಕ್ ಸಮಸ್ಯೆಯಿಂದಾಗಿ ನಮಗೆಲ್ಲ ತುಂಬಾ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಮಕ್ಕಳಿಗೆ ಸೂಕ್ತ ಶಿಕ್ಷಣ ಸಿಗಬೇಕೆಂದರೆ, ಸರ್ಕಾರ ಅವರಿಗೆ ನೆಟ್ವರ್ಕ್​ ಸೌಲಭ್ಯ ಕಲ್ಪಿಸಬೇಕಿದೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಟವರ್ ನಿರ್ಮಿಸಿ, ಮಕ್ಕಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.

error: Content is protected !!