ವಿದ್ಯುತ್ ಲೈನ್ ಕಾಮಗಾರಿ ರಸ್ತೆ ಬದಿಯ ಚರಂಡಿಯಲ್ಲಿ ಕಂಬ ಅಳವಡಿಸದಂತೆ ಕ್ರಮ: ಬಂದಾರು ಗ್ರಾಮ ಪಂಚಾಯತ್ ಮಟ್ಟದ. ಜನಸ್ಪಂದನ ಸಭೆ

 

 

 

ಬೆಳ್ತಂಗಡಿ : ಸಾರ್ವಜನಿಕ ಬೇಡಿಕೆಗಳಾಗಿ
ಮೊಗ್ರು ಗ್ರಾಮದ ದೇವರಡ್ಕ-ಕೊಳಬೆ ಪ.ಜಾ. ಕುಟುಂಬಗಳ ಕಾಲೋನಿಗೆ ರಸ್ತೆಗೆ ಕಾಂಕ್ರೀಟೀಕರಣ, ಪೆರ್ಲಬೈಪಾಡಿ -ಪಾರೊಟ್ಟು ವಿದ್ಯುತ್ ಟಿ.ಸಿ. ಸಮಸ್ಯೆ, ಬೈಪಾಡಿ ದಡ್ಡು ಎಂಬಲ್ಲಿ
ವಿದ್ಯುತ್ ತಂತಿ ಜೋತು ಬಿದ್ದಿರುವುದು,
ಓಟೆಚಾರ್-ಬಟ್ಲಡ್ಕ-ಕಂಪ ಪ್ರದೇಶಕ್ಕೆ ಬದಲಿ ಟಿ.ಸಿ. ,
ಬಂದಾರು ಪೇರಾಲ್ದಪಲಿಕೆ ಪರಿಸರದ ಕುಡಿಯುವ ನೀರಿನ ಪಂಪ್ ಗೆ ಪ್ರತ್ಯೇಕ ಟಿ.ಸಿ.,
ಉಜಿರೆ -ಕಲ್ಲೇರಿ ಹೊಸ ವಿದ್ಯುತ್ ಲೈನ್ ಅಳವಡಿಸುವ ಕಾಮಗಾರಿಯಲ್ಲಿ ಮುಖ್ಯ ರಸ್ತೆ ಬದಿಯ ಚರಂಡಿ ಮಧ್ಯೆ ಕಂಬ ಹಾಕುತ್ತಿರುವುದು, ತುಂಬಾ ಹಳೆಯದಾಗಿ ಶಿಥಿಲಗೊಂಡಿರುವ
ಬೈಪಾಡಿ ಅಂಗನವಾಡಿ ಕಟ್ಟಡದ ಬದಲಿಗೆ ನೂತನ ಕಟ್ಟಡ , ವಿಲೇವಾರಿ ವಿಳಂಬವಾಗುತ್ತಿರುವ
ಅಕ್ರಮ -ಸಕ್ರಮ , 94c, ಪ್ಲಾಟಿಂಗ್ ಸಮಸ್ಯೆ, ಜಂಟಿಸರ್ವೇ ಗೊಂದಲ ಸರಿಪಡಿಸಬೇಕು ಮುಂತಾದ ಸಮಸ್ಯೆಗಳನ್ನು ಮತ್ತು
ಪ್ರಮುಖ ಬೇಡಿಕೆಗಳನ್ನು ಆಯಾ ಭಾಗದ ಗ್ರಾಮಸ್ಥರು ಸಭೆಯ ಅಧ್ಯಕ್ಷತೆವಹಿಸಿದ್ದ ಶಾಸಕರು, ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದರು.

 

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಹರೀಶ್ ಪೂಂಜ ಕೂಡಲೇ ಸ್ಪಂದಿಸಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಮೊಗ್ರು ಆಶಾ ಕಾರ್ಯಕರ್ತೆ ಸರೋಜಾ ಎಂಬವರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಕೆಲಸಕ್ಕೆ ರಾಜಿನಾಮೆ ಕೊಡದೆ ಬೇರೆ ಖಾಸಗಿ ಸಂಸ್ಥೆಗೆ ಕೆಲಸಕ್ಕೆ ಸೇರಿದ್ದು ಮನೆ ಭೇಟಿ ಮಾಡದೆ ಕೆಲವು ತಿಂಗಳಾಯಿತು ಎಂದು ಗ್ರಾಮಸ್ಥರು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯ ಕೇಂದ್ರದ ಅಧಿಕಾರಿ
ತಾತ್ಕಾಲಿಕವಾಗಿ ಮತ್ತೊಬ್ಬರು ಆಶಾ ಕಾರ್ಯಕರ್ತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಉತ್ತರಿಸಿದರು.
ಮಂಗಳೂರು-
ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಬಂದಾರು ಗ್ರಾಮದ ಬಟ್ಲಡ್ಕ ಪಾಣೆಕಲ್ಲು – ಮೈರೋಳ್ತಡ್ಕ ಕುರಾಯ – ಪುತ್ತಿಲ ಉಜಿರೆಯ ಧರ್ಮಸ್ಥಳ ಸಂಪರ್ಕಿಸಲು ಅನುಕೂಲವಾಗುವಂತೆ ಸೇತುವೆ ಮತ್ತು ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಪ್ರಸಾದ್ ಕಡ್ತಿಲ ಶಾಸಕರಿಗೆ ಮನವಿ ಸಲ್ಲಿಸಿದರು. ನೀರಕಟ್ಟೆ ಡ್ಯಾಂ ಪ್ರದೇಶದಲ್ಲಿ ವಿದ್ಯುತ್ ತಂತಿ ತಗುಲಿ ಜಾನುವಾರುಗಳು ಸತ್ತಿವೆ ಎಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಮತ್ತೆ ಕಾರ್ಯಾರಂಭಿಸುವ ತಯಾರಿಯಲ್ಲಿರುವ
ನೀರಕಟ್ಟೆ ವಿದ್ಯುತ್ ಸ್ಥಾವರ ಕಂಪೆನಿಯ ಮಾಲಕತ್ವ ಬದಲಾಗಿದ್ದು ಕಂಪೆನಿ ಗ್ರಾಮಸ್ಥರಿಗೆ ಮಾಹಿತಿ ಕೊಟ್ಟಿಲ್ಲ, ಕೂಡಲೇ ಶಾಸಕರ ಮಧ್ಯಸ್ತಿಕೆಯಲ್ಲಿ ಕಂಪೆನಿಯ ಪ್ರಮುಖರ ಉಪ ಸಮಾಲೋಚನಾ ಸಭೆ ಏರ್ಪಡಿಸಿ ಗ್ರಾಮಸ್ಥರ ಗೊಂದಲ ನಿವಾರಿಸಬೇಕು, ಮತ್ತು ನೀರಕಟ್ಟೆ ಅಣೆಕಟ್ಟೆಯ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಗ್ರಾಮಸ್ಥರು ಮುಂದಿಟ್ಟಿದ್ದು ಈ ಬಗ್ಗೆ ಸ್ಪಂದಿಸಿದ ಶಾಸಕರು ಕಂಪೆನಿ ಅಧಿಕಾರಿಗಳನ್ನು ಕರೆದು ಗ್ರಾಮಸ್ಥರ ಉಪಸ್ಥಿತಿಯಲ್ಲಿ
ಶೀಘ್ರವಾಗಿ ಸಮಾಲೋಚನಾ ಸಭೆಯನ್ನು ಏರ್ಪಡಿಸುವ ಭರವಸೆ ನೀಡಿದರು.
ಜನಸ್ಪಂದನ ಸಭೆಯಲ್ಲಿ
ಕ್ರೀಡಾ ಕ್ಷೇತ್ರದಲ್ಲಿ
ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ, ಪರಿಶಿಷ್ಟ ಫಲಾನುಭವಿಗಳಿಗೆ ಶ್ರೇಯೋಭಿವೃದ್ಧಿ ಅನುದಾನದಡಿ ನೀರಿನ ಟ್ಯಾಂಕ್ , ವೈದ್ಯಕೀಯ ವೆಚ್ಚದ ಬಾಬ್ತು ಧನ ಸಹಾಯ ವಿತರಿಸಲಾಯಿತು.
ವೇದಿಕೆಯಲ್ಲಿ
ಗ್ರಾ.ಪಂ.ಅಧ್ಯಕ್ಷ ದಿನೇಶ್ ಖಂಡಿಗ, ಉಪಾಧ್ಯಕ್ಷೆ ಪುಷ್ಪಾವತಿ, ತಹಶೀಲ್ದಾರ್ ಪೃಥ್ವೀ ಸಾನಿಕಂ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ
ಭವಾನಿ ಶಂಕರ್ ,
ಪಂ.ಅಭಿವೃದ್ಧಿ ಅಧಿಕಾರಿ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪದ್ಮುಂಜ ಸಿ.ಎ. ಅಧ್ಯಕ್ಷ ರಕ್ಷಿತ್ ಪಣೆಕ್ಕರ ಉಪಸ್ಥಿತರಿದ್ದರು.
ಪುರುಷೋತ್ತಮ ಸ್ವಾಗತಿಸಿದರು. ನಾಡಗೀತೆಯೊಂದಿಗೆ
ಪ್ರಾರಂಭವಾದ
ಕಾರ್ಯಕ್ರಮವು
ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

error: Content is protected !!