ಉಜಿರೆಯಲ್ಲಿ ಗೋಡೆ ಕೊರೆದು ಜ್ಯುವೆಲ್ಲರಿ ಶಾಪ್ ಗೆ ನುಗ್ಗಲು ವಿಫಲ ಯತ್ನ ನಡೆಸಿದ ಕಳ್ಳರು

ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿ ಜುಲೈ 9 ರಂದು ಸರಣಿ ಕಳ್ಳತನ ಯತ್ನ ನಡೆದಿದ್ದು ಜುವೆಲ್ಲರ್ಸ್ ಒಂದರ ಗೋಡೆಗೆ ಕನ್ನ ಕೊರೆದು ಕಳವಿಗೆ ಯತ್ನ ನಡೆಸಿದ ಘಟನೆ ನಡೆದಿದೆ.ಜ್ಯುವೆಲ್ಲರಿ ಸಮೀಪದಲ್ಲಿ ಇರುವ ಕೆಲವು ಅಂಗಡಿಗಳಿಗೆ ಅಲ್ಲಿಂದ ಜ್ಯುವೆಲ್ಲರಿಯ ಗೋಡೆಗೆ ಕನ್ನ ಕೊರೆದು ಕಳ್ಳತನಕ್ಕೆ ಯತ್ನ ನಡೆದಿದೆ.

ಕಳ್ಳರು ಆರಂಭದಲ್ಲಿ ಜೌಷಧಾಲಯವೊಂದರ ಶಟರ್‌ನ್ನು ಕಬ್ಬಿಣದ ರಾಡ್‌ನಿಂದ ಮುರಿದು ಒಳ ನುಗ್ಗಿ, ಜೌಷಧಾಲಯದ ಮಣ್ಣಿನ ಗೋಡೆಯನ್ನು ಕೊರೆದು ಸಮೀಪದ ಹಾರ್ಡ್ ವೇರ್ ಗೋದಾಮಿಗೆ ಪ್ರವೇಶಿಸಿದ್ದಾರೆ. ನಂತರ ಶಾರದ ಜುವೆಲ್ಲರ್ಸ್ ಗೆ ನುಗ್ಗಲು ಯತ್ನಿಸಿದ್ದಾರೆ.

ಆದರೆ ಜ್ಯುವೆಲ್ಲರಿ ಮಾಲಕರು ಮೇಲ್ಛಾವಣಿ ಹಾಗೂ ತಮ್ಮ ಗೋಡೆಗೆ ಕಬ್ಬಿಣದ ರಕ್ಷಣಾತ್ಮಕ ವ್ಯವಸ್ಥೆ ಅಳವಡಿಸಿದ್ದರಿಂದ ಕಳ್ಳರಿಗೆ ಗೋಡೆಯನ್ನು ಕೊರೆಯಲು ಸಾಧ್ಯವಾಗಿಲ್ಲ ಎಂದು ಮಾಹಿತಿ ಸಿಕ್ಕಿದೆ. ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

error: Content is protected !!