ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯ ಸೀಲ್ ಡೌನ್ ಆದ ಸುಧೇಮುಗೇರು ಪ್ರದೇಶಕ್ಕೆ ಶನಿವಾರ ಶಾಸಕ ಹರೀಶ್ ಪೂಂಜ ತೆರಳಿ ಅಲ್ಲಿನ ಜನರ ಯೋಗ್ಯ ಕ್ಷೇಮ ವಿಚಾರಿಸಿದರು.
ಈ ಭಾಗದ ಸುಮಾರು 22 ಮನೆಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಇಲ್ಲಿನ ಮನೆಗಳಿಗೆ ತೆರಳಿ ಧೈರ್ಯ ತುಂಬಿದರಲ್ಲದೆ ಯಾವುದೇ ಸಮಸ್ಯೆಗಳಾದರೆ ನಗರಡಾಳಿತದ ಗಮನಕ್ಕೆ ತರುವಂತೆ ಸೂಚಿಸಿದರು. ಶ್ರಮಿಕದ ಮೂಲಕ ವಾರ್ ರೂಂ ತೆರಯಲಾಗಿದ್ದು, ತಕ್ಷಣ ಸ್ಪಂದನೆ ನೀಡುವ ಕೆಲಸವನ್ನು ಮಾಡಲಾಗುವುದು ಎಂದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ್, ಸದಸ್ಯರಾದ ಲೋಕೇಶ್, ಶರತ್ ಕುಮಾರ್ ಶೆಟ್ಟಿ, ಗೌರಿ, ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತಾರಾಮ ಬೆಳಾಲು, ನಗರ ಅಧ್ಯಕ್ಷ ಗಣೇಶ್ ಸಂಜಯನಗರ, ಕಾರ್ಯದರ್ಶಿ ಕೇಶವ ಅಚ್ಚಿನಡ್ಕ, ಬೂತ್ ಸಮಿತಿ ಅಧ್ಯಕ್ಷರಾದ ಸಂಕೇತ್ ಶೆಟ್ಟಿ ಮತ್ತು ವಿಶ್ವನಾಥ್, ಗಣೇಶ್ ಗುಂಪಲಾಜೆ ಮೊದಲಾದವರು ಇದ್ದರು.