ಬೆಳ್ತಂಗಡಿ: ಶ್ರೀ ಕ್ಷೇತ್ರ ಧಮಸ್ಥಳದ ಉಜಿರೆಯಲ್ಲಿರುವ ವ್ಯಸವಮುಕ್ತ ಮತ್ತು ಸಂಶೋಧನ ಕೇಂದ್ರದಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ಗೆ ಶನಿವಾರ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಸೋಂಕಿತರ ಆರೋಗ್ಯ ಯೋಗಕ್ಷೇಮವನ್ನು ವಿಚಾರಿಸಿ ಧೈರ್ಯ ತುಂಬಿದರು.
ಕೋವಿಡ್ ಕೇರ್ ಸೆಂಟರ್‌ನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿ, ಸೆಂಟರ್‌ನಲ್ಲಿ ಪ್ರಸ್ತುತ ೨೮ ಮಂದಿ ಕೋವಿಡ್ ಸೋಂಕಿತರಿದ್ದು ಪುರುಷ ಹಾಗೂ ಮಹಿಳಾ ಸೋಂಕಿತರ ಜತೆ ಮಾತನಾಡಿ ಯೋಗ್ಯಕ್ಷೇಮ ವಿಚಾರಿಸಿದರು. ಶ್ರೀ ಕ್ಷೇತ್ರ ಧಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡಲಾಗುವ ಊಟೋಪಚಾರದ ವ್ಯವಸ್ಥೆಯನ್ನು ವೀಕ್ಷಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಾಹ್ನ ವೇಳೆ ಸೋಕಿತರಿಗೆ ತಾವೇ ಖುದ್ದು ಊಟ ಬಡಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದರು.
ಈ ಸಂದರ್ಭ ತಾಲೂಕು ವೈದಾಧಿಕಾರಿ ಡಾ. ಕಲಾಮಧು, ಸೆಂಟರ್‌ನ ಮೇಲ್ವಿಚಾರಣೆಯ ವೈದ್ಯೆ ಡಾ. ತಾರಕೇಶ್ವರಿ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಶಿಬಿರಾಧಿಕಾರಿ ನಂದ ಕುಮಾರ್, ದಾದಿಯರಾದ ಸೌಮ್ಯ, ಫಿಲೋಮಿನಾ ಹಾಗೂ ವಿಪತ್ತು ನಿರ್ವಹಣ ಘಟಕದ ಸ್ವಯಂಸೇವಕರು ಇದ್ದರು.