ಎ.22 ರಿಂದ 24 ಪಡುಮಲೆಯಲ್ಲಿ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

ಧರ್ಮಸ್ಥಳ: ಪಡುಮಲೆ ಕೋಟಿ-ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಇದರ ವತಿಯಿಂದ ಕೋಟಿ ಚೆನ್ನಯರ ಜನ್ಮಸ್ಥಾನ ಹಾಗೂ ಮೂಲಸ್ಥಾನ ಪಡುಮಲೆಯಲ್ಲಿ ನಾಗಬೆರ್ಮೆರ ಗುಡಿ, ನಾಗ ಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ ಹಾಗೂ ದೇಯಿ ಬೈದೆದಿ ಸಾನಿಧ್ಯ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಸೋಮವಾರ ಧರ್ಮಸ್ಥಳದ ಹೆಗ್ಗಡೆಯವರ ನಿವಾಸದಲ್ಲಿ ಬಿಡುಗಡೆ ಮಾಡಿದರು.

ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಧರ್ಮಾಧಿಕಾರಿ ಡಾ.ಹೆಗ್ಗಡೆಯವರು, ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯ್ಯರ ಜನ್ಮಸ್ಥಾನ ಪಡುಮಲೆಯಲ್ಲಿ ಎಪ್ರಿಲ್ 22 ರಿಂದ 24ರ ವರೆಗೆ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. ಈ ಇಬ್ಬರು ವೀರರಾದ ಕೋಟಿ-ಚೆನ್ನಯ್ಯರು ತುಳುನಾಡಿನ ಎಲ್ಲಾ ಇತಿಹಾಸ, ಜೀವನ ಪದ್ದತಿ, ಸಂಸ್ಕೃತಿಗಳ ಅವಿಭಾಜ್ಯ ಅಂಗ. ಯಾರಾದರೂ ತುಳುವರು ಇದ್ದರೆ ಅವರಿಗೆ ಕೋಟಿಚೆನ್ನಯ್ಯರ ಕಥೆ ಗೊತ್ತಿಲ್ಲ ಅಂದರೆ ಅವರು ಖಂಡಿತ ಈ ನಾಡಿನಲ್ಲಿ ಇರುವವರು ಅಲ್ಲ. ಸಣ್ಣ ವಯಸ್ಸಿನ ಮಕ್ಕಳಿಗೆ, ಯುವ ಜನತೆಗೆ ಕೋಟಿ-ಚೆನ್ನಯ್ಯರ ಪರಿಚಯ ಆಗಬೇಕು. ಅವರ ಸಾಧನೆ, ಸಾಹಸಗಳ ಪರಿಚಯ ಆಗಬೇಕು ಮತ್ತು ಸತ್ಯ, ಧರ್ಮ, ನ್ಯಾಯಕ್ಕಾಗಿ ಹೋರಾಟ ಮಾಡಬೇಕು ಎನ್ನುವಂತಹ ಛಲ ಬರಬೇಕು. ಇವತ್ತಿನ ಯುವಕರು ಅದೇ ಛಲ, ಸ್ಪೂರ್ತಿಯನ್ನು ಬೆಳೆಸಿಕೊಳ್ಳಬೇಕು. ಕೋಟಿಚೆನ್ನಯ್ಯರ ಬದುಕು ಮತ್ತು ಜೀವನವನ್ನು ಸಾಕ್ಷಾತ್ಕರಿಸಿಕೊಳ್ಳುವಂತಹ ಸಂದರ್ಭ. ಈ ಕಾರ್ಯಕ್ರಮ ಯಶಸ್ವಿಯಾಗಲಿ, ಮುಂದಿನ ಪೀಳಿಗೆಗೆ ಕೋಟಿ ಚೆನ್ನಯ್ಯರು ಸ್ಪೂರ್ತಿ ಆಗಲಿ ಎಂದು ಆಶಿಸುತ್ತೇನೆ ಎಂದರು.

ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಶಾಸಕ ಹರೀಶ್ ಪೂಂಜ, ಬ್ರಹ್ಮ ಕಲಶ ಸಮಿತಿ ಅಧ್ಯಕ್ಷ, ಎಂಎಲ್ಸಿ ಹರೀಶ್ ಕುಮಾರ್, ಆಡಳ್ತೆ ಮೊಕ್ತೇಸರ ವಿನೋದ್ ಆಳ್ವ, ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಸಮಿತಿ ಹಾಗೂ ಬ್ರಹ್ಮ ಕಲಶ ಸಮಿತಿಯ ಪದಾಧಿಕಾರಿಗಳಾದ ಹರಿಕೃಷ್ಣ ಬಂಟ್ವಾಳ, ರುಕ್ಮಯ್ಯ ಪೂಜಾರಿ ವಿಟ್ಲ, ರಂಜನ್ ಮಿಜಾರು, ಭಗೀರಥ ಜಿ., ಶ್ರೀಧರ ಪಟ್ಲ, ಯೋಗೀಶ್ ಕುಮಾರ್ , ವಿಜಯ ಕುಮಾರ್ ಸೊರಕೆ, ರತನ್ ನಾಯಿಕ್, ಚರಣ್ ಕೆ., ಮಮತಾ ಶೆಟ್ಟಿ, ಪುರುಷೋತ್ತಮ ಸಾಲಿಯಾನ್, ಶ್ರೀನಿವಾಸ ರಾವ್, ಅನಿಲ್ ಕುಮಾರ್, ಉಮೇಶ್ ನಾವೂರ, ರಾಮದಾಸ್ ಬಂಟ್ವಾಳ, ಸುರೇಶ್ಚಂದ್ರ ಕೋಟ್ಯಾನ್, ವೇದನಾಥ್ ಸುವರ್ಣ, ರವಿ ಪೂಜಾರಿ ಸೂರಿಂಜೆ, ರತ್ನಾಕರ ನಾಯ್ಕ್ , ವೆಂಕಟೇಶ್ ದಾಸ್, ಸುಧಾಕರ ಬೋಳ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮೊದಲಾದವರು ಇದ್ದರು.

error: Content is protected !!