ವಿದ್ಯಾರ್ಥಿಗಳ ಪ್ರಾಣದ ಜೊತೆ ಚಲ್ಲಾಟ:  ಜೋತಾಡುತ್ತಾ ಅಪಾಯಕಾರಿಯಾಗಿ ಪ್ರಯಾಣ: ಪ್ರಾಣಕ್ಕೆ ಸಂಚಕಾರವಾದ್ರೆ ಯಾರು ಹೊಣೆ?: ವೈರಲ್ ಆಯ್ತು ಫೋಟೊ

 

 

 

 

ಬೆಳ್ತಂಗಡಿ: ಫುಟ್ ಬೋರ್ಡ್ ನಲ್ಲಿ ಸ್ವಲ್ಪ ಮಂದಿ ಅನಿವಾರ್ಯ ಸಂದರ್ಭಗಳಲ್ಲಿ ಜೋತಾಡಿಕೊಂಡು‌ ಪ್ರಯಾಣ ಮಾಡಿರುವುದನ್ನು ಗಮನಿಸಿರುತ್ತೇವೆ ಆದ್ರೆ, ಕಾಲಿಗೆ ಯಾವುದೇ ಆಧಾರ ಇಲ್ಲದೆಯೂ ವಿದ್ಯಾರ್ಥಿಗಳು ಅಪಾಯಕಾರಿಯಾಗಿ ಪ್ರಯಾಣ ಮಾಡುತ್ತಿರುವ ಫೋಟೊ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಮೂಡಬಿದ್ರೆಯಿಂದ ಬೆಳ್ತಂಗಡಿಗೆ ಆಗಮಿಸುವ ಖಾಸಗಿ ಬಸ್ ಒಂದರಲ್ಲಿ ಸಂಜೆ ಸುಮಾರು 5 ಗಂಟೆ ಸುಮಾರಿಗೆ ವೇಣೂರಿನ ವಿದ್ಯಾರ್ಥಿಗಳು ಈ ರೀತಿ‌ ಜೋತಾಡಿಕೊಂಡು ನೇತಾಡಿಕೊಂಡು ತೀರಾ ಅಪಾಯಕಾರಿ ರೀತಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ದೊರೆತಿದೆ. ಈ ಫೋಟೋದ ಅಸಲಿಯತ್ತು ಹಾಗೂ ನಿಜವಾಗಿಯೂ ‌ಈ ರೀತಿಯಲ್ಲಿ ‌ಅಪಾಯಕಾರಿ‌ ಪ್ರಯಾಣ ನಡೆಸಿರುವ ಸ್ಥಳ, ಕಾರಣ ಮೊದಲಾದ ‌ಕುರಿತು ಸಮರ್ಪಕ ತನಿಖೆ ನಡೆಯಬೇಕಿದೆ. ದೇಶದ ಭವಿಷ್ಯವಾದ ವಿದ್ಯಾರ್ಥಿಗಳು ಈ ರೀತಿ ಸಾಗಲು ಕಾರಣವೇನು,ಅದೂ ಕೂಡ ಈ ಕೊರೊನಾದ ಭಯದ ಈ ಸಂದರ್ಭದಲ್ಲೂ ಈ ರೀತಿ ಮಾಡುವುದು ಎಷ್ಟು ಸರಿ ಬೇರೆ ಖಾಸಗಿ ಬಸ್ ಗಳು ಓಡಾಟ ಇದ್ದರೂ ಅಷ್ಟು ಅಪಾಯಕಾರಿಯಾಗಿ ಸಾಗಬೇಕಾದ ಅನಿವಾರ್ಯತೆ ಏನಿತ್ತು? ಯಾವ ಕಾಲೇಜಿನ ಅಥವಾ ಶಾಲೆಯ ವಿದ್ಯಾರ್ಥಿಗಳು ಈ ರೀತಿ ಸಾಗಿದ್ದಾರೆ? ಸಾಗುವ ಸಂದರ್ಭದಲ್ಲಿ ಈ ಬಸ್ಸಿನ ನಿರ್ವಾಹಕರಿಗೆ ಹಾಗೂ ಚಾಲಕರಿಗೆ ವಿಚಾರ ತಿಳಿಯಲಿಲ್ಲವೇ? ತಿಳಿದಿದ್ದರೂ ಬೇಜಾವಬ್ದಾರಿ ವಹಿಸಿದ್ದರೇ ಒಂದು ವೇಳೆ ಏನಾದರೂ ಅಪಾಯ ಸಂಭವಿಸಿದರೆ ಇದಕ್ಕೆ ಹೊಣೆ ಯಾರು ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ವಿಚಾರಗಳಿಗೆ ಸಮರ್ಪಕ ಉತ್ತರ ಲಭಿಸಬೇಕಿದೆ.

ಬೆಳಗ್ಗಿನ ಸಮಯವಾದರೆ ಸಮಯಕ್ಕೆ ಸರಿಯಾಗಿ ಶಾಲೆ, ಕಾಲೇಜುಗಳಿಗೆ ತಲುಪುವ ಉದ್ದೇಶದಿಂದ ವಿದ್ಯಾರ್ಥಿಗಳು ಕೊಂಚ ಧೈರ್ಯ ಮಾಡಿ ಫುಟ್ ಬೋರ್ಡ್ ನಲ್ಲಿ‌ ನಿಲ್ಲುತ್ತಾರೆ.ಅದರೂ ಆ ರೀತಿ ಸಂಚರಿಸಲು ಅವಕಾಶವೇ ಇಲ್ಲ ಆದರೆ ಈ ಫೋಟೊದಲ್ಲಿ ತೀರಾ ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಮಯಕ್ಕೆ ಸರಿಯಾಗಿ ಬಸ್ಸುಗಳು ಇದ್ದರೂ ಈ ಬಸ್ಸಲ್ಲೆ ಈ ರೀತಿ ಮಕ್ಕಳನ್ನು ಹೇರಿಕೊಂಡು ಹೋಗುವುದು ಯಾಕೆ ಈ ಬಗ್ಗೆ ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಮುಂದಿನ ದಿನಗಳಲ್ಲಿ ಈ ರೀತಿ ಬಸ್ಸಿನಲ್ಲಿ ಪ್ರಯಾಣಿಸಿ ಅಪಾಯ ಆಗದಂತೆ ಎಚ್ಚರಿಕೆ ವಹಿಸಿಕೊಳ್ಳುವುದು ಹಾಗೂ ಇಂತಹ ಅಪಾಯಕಾರಿಯಾಗಿ ಚಲಿಸುವ ಬಸ್ಸ್ ಗಳಿಗೆ ಎಚ್ಚರಿಕೆ ನೀಡುವುದು ಅಗತ್ಯ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ ಒಂದು ವೇಳೆ ಈ ದಾರಿಯಲ್ಲಿ ಸಮರ್ಪಕ ಬಸ್ ಸೌಲಭ್ಯ ಇಲ್ಲವೇ…?? ಇಲ್ಲವಾದಲ್ಲಿ ಬೇರೆ ಬಸ್ ಒದಗಿಸಿಯಾದರೂ ವಿದ್ಯಾರ್ಥಿಗಳು ಅಪಾಯಕಾರಿಯಾಗಿ ಸಾಗದೆ ಸಮರ್ಪಕವಾಗಿ ಪ್ರಯಾಣ ಬೆಳೆಸಲು ಸಂಬಂದಿಸಿದ ಅಧಿಕಾರಿಗಳು, ಅವಕಾಶ ಕಲ್ಪಿಸಬೇಕಿದೆ.

error: Content is protected !!