ಬೆಳ್ತಂಗಡಿ: ಎಳನೀರು, ಬಂಗಾರಪಲ್ಕೆ ಜಲಪಾತ ಬಳಿ ಯುವಕ ನಾಪತ್ತೆಯಾಗಿದ್ದು, ಬುಧವಾರವೂ ಶೋಧಕಾರ್ಯ ಮುಂದುವರಿದಿದೆ.
ಇಲ್ಲಿಯವರೆಗೆ ಬಂಡೆಯನ್ನು ತೆರವುಗೊಳಿಸುವ ಕಾರ್ಯ ಮಾನವ ಶ್ರಮದಿಂದ ನಡೆದಿದ್ದು, ಗುರುವಾರದಿಂದ ಜೆಸಿಬಿ ಬಳಸಿ ಕಾರ್ಯಾಚರಣೆ ಮುಂದುವರಿಸಲು ಯೋಜನೆ ರೂಪಿಸಲಾಗಿದೆ. ಬುಧವಾರ ಜೆಸಿಬಿ ತೆರಳಲು ರಸ್ತೆ ಮಾಡಿಕೊಳ್ಳಲಾಗಿದೆ. ಜಲಪಾತ ಇರುವ ಸ್ಥಳಕ್ಕೆ ತೆರಳಲು ಅಗಲ ಕಿರಿದಾದ ರಸ್ತೆ ಹಾಗೂ ಸಣ್ಣ ರಸ್ತೆಯಿಂದ ಜಲಪಾತ ಸ್ಥಳಕ್ಕೆ ಇರುವ ಸುಮಾರು 300 ಮೀಟರ್ ತಲುಪಲು ಗುಡ್ಡ ಅಡ್ಡಿಯಾಗುತ್ತಿತ್ತು, ಆದರೆ ಇದೀಗ ಮಾನವ ಶಕ್ತಿ ಬಳಸಿಕೊಂಡು ಸ್ಥಳಾವಕಾಶ ಮಾಡಿಕೊಡಲಾಗಿದೆ. ಜೊತೆಗೆ ಬಂಡೆಯನ್ನೂ ಪುಡಿ ಮಾಡಲಾಗುತ್ತಿದ್ದು, ಜೆಸಿಬಿ ಸರಗವಾಗಿ ಸಾಗಲು ಸಹಕಾರಿಯಾಗಿದೆ.
ದೇಹಪತ್ತೆಗೆ ಸ್ಥಳೀಯರು, ಸಂಘ ಸಂಸ್ಥೆಗಳ ಸದಸ್ಯರು, ಸ್ವಯಂ-ಸೇವಕರು ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಮಾನವ ಶಕ್ತಿಯಿಂದ ಕಾರ್ಯಾಚರಣೆ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಗುರುವಾರದಿಂದ ಜೆಸಿಬಿ ಬಳಸಿ ಶೋಧಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.