
ಬೆಳ್ತಂಗಡಿ:ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ವೈರಲ್ ಆಶಾಕ್ಕ ಎಂದೇ ಪ್ರಸಿದ್ದಿ ಪಡೆದಿದ್ದ ಆಶಾ ಪಂಡಿತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಅನುಯಾಯಿಗಳನ್ನು ತುಳು ಭಾಷೆಯಲ್ಲಿ ಬೈಗುಳದ ಮೂಲಕವೇ ನಗಿಸಿ, ಸಂಚಲನ ಸೃಷ್ಟಿಸಿದ್ದ ನಾಗುರಿಯ ನಿವಾಸಿ ಆಶಾ ಪಂಡಿತ್ ಅವರು ಪಡೀಲ್ ಬಳಿ ಚಿಕ್ಕ ಅಂಗಡಿಯನ್ನು ನಡೆಸುತಿದ್ದು ಇಂದು ಮುಂಜಾನೆ ನಿಧನ ಹೊಂದಿದ್ದಾರೆ.
ಆಶಾ ಪಂಡಿತ್ ಅವರು ತಮ್ಮ ಅಸಾಮಾನ್ಯ ಕಲೆಯ ಮೂಲಕ ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದರು. ಇನ್ ಸ್ಟಾಗ್ರಾಮ್ ನಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದ್ದ ಇವರು, ಸಾವಿರಾರು ಫಾಲೋವರ್ಸ್ ಗಳನ್ನೂ ಕೂಡಾ ಹೊಂದಿದ್ದರು.