
ಬೆಳ್ತಂಗಡಿ : ಖಾಸಗಿ ಬಸ್ ಹಾಗೂ ಯಾತ್ರಾರ್ಥಿಗಳ ತೂಫಾನ್ ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮಿಯಾರು ಎಂಬಲ್ಲಿ ನಡೆದಿದೆ.
ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಮಿಯಾರು ಗ್ರಾಮದ ಕಂಬಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧರ್ಮಸ್ಥಳದಿಂದ ಕಾರ್ಕಳಕ್ಕೆ ಬರುತ್ತಿದ್ದ ವರುಣ್ ಎಂಬ ಖಾಸಗಿ ಬಸ್ಗೆ ಗುಲ್ಬರ್ಗದಿಂದ ಉಡುಪಿಗೆ ಬಂದು ಧರ್ಮಸ್ಥಳಕ್ಕೆ ತೆರಳುತ್ತಿದ್ದ ತುಫಾನ್ ವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ತುಫಾನ್ ವಾಹನದಲ್ಲಿದ್ದ ಒಟ್ಟು 13 ಜನ ಹಾಗೂ 1 ಮಗುವಿನ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಒಬ್ಬರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದೆ. ಉಳಿದ ಗಾಯಾಳುಗಳು ಕೂಡ ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಲಕ ಮಣ್ಣಪ್ಪ, ಚೇತು ಮತ್ತು ರೋಹಿತ್ ಮೃತರು ಎಂಬುದು ತಿಳಿದು ಬಂದಿದೆ.