ಮೆಟ್ರೋದಲ್ಲಿ ರವಾನೆಯಾಯ್ತು ಜೀವಂತ ಹೃದಯ!: 21 ಕೀ.ಮೀ. ಗ್ರೀನ್ ಕಾರಿಡಾರ್ ರೂಪಿಸಿ ಕಾರ್ಯಾಚರಣೆ

ಹೈದರಾಬಾದ್: ಜೀವಂತ ಹೃದಯವನ್ನು ಇದೇ ಮೊದಲ ಬಾರಿಗೆ ಹೈದರಾಬಾದ್ ನಲ್ಲಿ ಮೆಟ್ರೋ ರೈಲಿನ ಮೂಲಕ ರವಾನೆ ಮಾಡಲಾಗಿದೆ.

ಕಮಿನೇನಿ ಆಸ್ಪತ್ರೆಯಿಂದ ಜುಬಿಲಿ ಹಿಲ್ಸ್‌ವರೆಗೂ ತಡೆರಹಿತ ಮೆಟ್ರೋ ರೈಲಿನ ಸೇವೆ ಒದಗಿಸಿ ಅಪೊಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೃದ್ರೋಗಿಯೊಬ್ಬರ ಜೀವ ಉಳಿಸಲಾಗಿದೆ. ಜೀವಂತ ಹೃದಯ ಸಾಗಿಸುವ ಸಲುವಾಗಿ ಹೈದರಾಬಾದ್ ನ ಮೆಟ್ರೋ ರೈಲ್ವೆ ಮಂಗಳವಾರ ನಾಗೋಲೆ ಹಾಗೂ ಜುಬಿಲಿ ಹಿಲ್ಸ್‌ ನಡುವೆ ವಿಶೇಷ ಗ್ರೀನ್ ಕಾರಿಡಾರ್ ರೂಪಿಸಿತ್ತು.

ಹೈದರಾಬಾದ್ ಕಮಿನೇನಿ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಹೃದಯವನ್ನು ಅಪೋಲೊ ಆಸ್ಪತ್ರೆಗೆ ಸಾಗಿಸಲಾಗಿದೆ. ನಾಗೋಲೆ ಮೆಟ್ರೋ ಸ್ಟೇಷನ್ ನಿಂದ ಈ ವಿಶೇಷ ರೈಲು ಆರಂಭಗೊಂಡು ಜುಬಿಲಿ ಹಿಲ್ಸ್‌ವರೆಗೂ ತಲುಪಿದೆ. 21 ಕಿ.ಮೀ.ಗಳ ಮಾರ್ಗ ಇದಾಗಿತ್ತು. ಈ ವಿಶೇಷ ರೈಲಿನಲ್ಲಿ ವೈದ್ಯರ ತಂಡವೂ ಹೃದಯದೊಂದಿಗೆ ಇತ್ತು. “ಜುಬಲೀ ಹಿಲ್ಸ್ ಗೆ ತಲುಪಲು ಮೂವತ್ತು ನಿಮಿಷ ಸಮಯ ಹಿಡಿಯಿತು.

ಜುಬಿಲಿ ಹಿಲ್ಸ್‌ ಮೆಟ್ರೋ ಸ್ಟೇಷನ್ ನಿಂದ ಅಪೋಲೊ ಆಸ್ಪತ್ರೆಗೆ ಆಂಬುಲೆನ್ಸ್ ಸಿದ್ಧವಾಗಿಟ್ಟುಕೊಂಡು, ತಕ್ಷಣ ಹೃದಯವನ್ನು ಆಸ್ಪತ್ರೆಗೆ ರವಾನಿಸಲಾಯಿತು.

ಇದೇ ಮೊದಲ ಬಾರಿಗೆ ಮೆಟ್ರೋ ರೈಲಿನಲ್ಲಿ ಜೀವಂತ ಹೃದಯ ರವಾನೆ ಮಾಡಲಾಗಿದೆ ಎಂದು ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಎನ್ ವಿಎಸ್ ರೆಡ್ಡಿ ತಿಳಿಸಿದ್ದಾರೆ.

error: Content is protected !!