ಗೇರುಕಟ್ಟೆ, ರಸ್ತೆ ಬದಿ ಕೋಳಿ ತ್ಯಾಜ್ಯ ಎಸೆತ: ಓರ್ವನನ್ನು‌ ಹಿಡಿದ ಸಾರ್ವಜನಿಕರು

ಗೇರುಕಟ್ಟೆ: ಹಲವು ವರ್ಷಗಳಿಂದ ರಸ್ತೆ ಬದಿ ಕೋಳಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ ಘಟನೆ ಗೇರುಕಟ್ಟೆ ಸಮೀಪ ನಡೆದಿದೆ.

ಕೆಲವು ವರ್ಷಗಳಿಂದ ಹುಣ್ಸೆಕಟ್ಟೆ, ಮಲ್ಲೋಟ್ಟು ಗೇರುಕಟ್ಟೆ ರಸ್ತೆ ಬದಿ ಕೋಳಿ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ‌ಮಾಡಲಾಗುತ್ತಿತ್ತು. ತ್ಯಾಜ್ಯದ ದುರ್ನಾತದಿಂದ ಸಾರ್ವಜನಿಕರು ಸಂಚಾರಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಸಂಬಂಧ ಪಟ್ಟವರಿಗೆ ದೂರು ನೀಡಿದರೂ ಯಾವುದೇ ಉಪಯೋಗ ಅಗಿರಲಿಲ್ಲ. ಇದೀಗ ಸಾರ್ವಜನಿಕರೇ ರಾತ್ರಿ ಕಾದು ಕುಳಿತು, ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯನ್ನು ಹಿಡಿದಿದ್ದಾರೆ‌.

ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿ ಬೆಳ್ತಂಗಡಿ ಸಂತೆಕಟ್ಟೆಯ ಒಳಗಿನ ಕೋಳಿ ಅಂಗಡಿಯಾತ‌ ಎಂದು ತಿಳಿದುಬಂದಿದೆ. ಈತ ರಾತ್ರಿ ಸಮಯ ಸ್ಕೂಟರಿನಲ್ಲಿ‌ ಕೋಳಿ ತ್ಯಾಜ್ಯ ಚೀಲದಲ್ಲಿ ತುಂಬಿಕೊಂಡು‌ ಬಂದು ರಸ್ತೆ ಬದಿ ಎಸೆಯುತ್ತಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ನಗರ ಪಂಚಾಯತ್ ಗೆ ದೂರು ನೀಡಿ, ತ್ಯಾಜ್ಯ ಎಸೆಯುತ್ತಿದ್ದ ಅಂಗಡಿಯ ಪರವಾನಿಗೆ ರದ್ದುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: Content is protected !!