
ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಾಲ್ಕು ವರ್ಷದ ಪ್ರಜ್ಞಾ ಎಂಬ ಎಂಡೋಸಲ್ಪಾನ್ ಮಗುವಿನ ಅರೋಗ್ಯ ದ ನೆರವಿಗಾಗಿ. ಬೆಳ್ತಂಗಡಿ ಉಜಿರೆ ಗುರುಯಾನಕೆರೆಗಳಲ್ಲಿ ಏಕಕಾಲದಲ್ಲಿ ಪೆನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ಫೆ. 16ರಂದು ನಡೆಯಲಿದೆ ಎಂದು ರಾಜಕೇಸರಿ ಸಂಸ್ಥಾಪಕ ದೀಪಕ್ ಹೇಳಿದರು. ಅವರು ಮಂಗಳವಾರ ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು ಹತ್ತು ರೂಪಾಯಿ ಮೌಲ್ಯದ ಪೆನ್ನು ಮಾರಾಟ ಮಾಡಿ ಅದರಲ್ಲಿ ಬಂದ ಲಾಭಂಶವನ್ನು ಆರೋಗ್ಯದ ನೆರವಿಗಾಗಿ ಕುಟುಂಬಕ್ಕೆ ಹಸ್ತಂತಾರಿಸಲಾಗುವುದು. ಬೆಳ್ತಂಗಡಿ ಬಸ್ನಿಲ್ದಾಣ, ಉಜಿರೆ, ಗುರುವಾಯನಕೆರೆ ಪರಿಸರದಲ್ಲಿ ಸಂಘಟನೆ ಸದಸ್ಯರು ಈ ಕಾರ್ಯಕ್ರಮ ನಡೆಸಲಿದ್ದಾರೆ. ಕಟ್ಟೆಮಾರ್ ಮಂತ್ರದೇವತೆ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆಮಾರ್, ಶಾಸಕ ಹರೀಶ್ ಪೂಂಜ, ಮಂಗಳೂರು ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಂ ಬಿ., ಸಹಿತ ಮತ್ತಿರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣದ ಶರತ್ ಕೆ ಎಸ್ ಬೆಳ್ತಂಗಡಿ, ಘಟಕದ ಸಂಚಾಲಕ ಗಿರೀಶ್ ಉಪಸ್ಥಿತರಿದ್ದರು.