ಜ. 31, ಫೆ. 1ರಂದು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಮತ್ತು ಪ್ರತಿಷ್ಠಾ ವರ್ಧಂತಿ

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಧನುಪೂಜೆ ಹಾಗೂ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಜ. 31ಮತ್ತು ಫೆ. 1 ನೇ ತಾರೀಕಿನಂದು ನಡೆಯಲಿರುವ ಜಾತ್ರಾ ಮಹೋತ್ಸವ ಮತ್ತು ಪ್ರತಿಷ್ಠಾ ವರ್ಧಂತಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಡಾ. ಎಲ್ ಎಚ್ ಮಂಜುನಾಥ್ ಬಿಡುಗಡೆಗೊಳಿಸಿದರು.
ಧನುರ್ಪೂಜಾ ಅಂತಿಮ ದಿನದ ಈ ವಿಶೇಷ ಸಂದರ್ಭದಲ್ಲಿ ಕೊಲ್ಲಿಯ ಶ್ರೀಧರ ಪೂಜಾರಿ ಮತ್ತು ಬಳಗದವರು ಸ್ಯಾಕ್ಸೋಫೋನ್ ವಾದನ ನಡೆಸಿಕೊಟ್ಟರು.

ನಿರಂತರವಾಗಿ ಮೂವತ್ತು ದಿನವೂ ಬಹಳಷ್ಟು ಭಕ್ತರು ಅಂತರ್ಜಾಲದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಅಶ್ವಿನಿ ಭಟ್ ವೈದಿಕ ವಿಧಿವಿಧಾನ ನಡೆಸಿಕೊಟ್ಟರು. ಜಾತ್ರಾ ಸಮಿತಿಯ ಅಧ್ಯಕ್ಷರಾಗಿರುವ ಡಾ ಪ್ರದೀಪ್ ಎ. ಇವರು ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆಸಿಕೊಟ್ಟರು. ಶ್ರೀಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಬಿ. ಉಮೇಶ್, ಉಪಾಧ್ಯಕ್ಷ ಗಣೇಶ್ ಕಣಾಲ್, ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಕಾರಿಂಜ, ಕಾರ್ಯದರ್ಶಿಗಳಾದ ಗಣೇಶ್ ಗೌಡ ನೆಲ್ಲಿಪಲ್ಕೆ, ಟ್ರಸ್ಟಿಗಳಾದ ಧರ್ಣಪ್ಪ ಮೂಲ್ಯ ಕಾಯರ್ದಡಿ, ಹರೀಶ್ ಸಾಲ್ಯಾನ್ ಮೊರ್ತಾಜೆ, ತಿಮ್ಮಪ್ಪ ಜಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್ ಮಂಜುನಾಥ್, ಮಂಗಳೂರಿನ ಉದ್ಯಮಿ ಮಾಧವ ಜೋಗಿತ್ತಾಯ, ಉಜಿರೆಯ ದಂತವೈದ್ಯ ಡಾ. ಎಂ. ಎಂ. ದಯಾಕರ್, ಪೂನಾದ ಉದ್ಯಮಿ ಸುಬ್ರಹ್ಮಣ್ಯ ಭಟ್, ಬೆಂಗಳೂರು ಮಮತಾ ಅಸ್ಪತ್ರೆ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಸುಮಂತ ಹೆಗ್ಡೆ, ಆಳ್ವಾಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅನಿಲ್ ಕುಮಾರ್ ರೈ, ಡಾ. ಪ್ರಸನ್ನ ಐತಾಳ್, ಉಜಿರೆ ಶ್ರೀ ಧ‌. ಮ. ಕಾಲೇಜಿನ ಪ್ರಾಧ್ಯಾಪಕ ಕೇಶವ ಪೈ, ಬಿ.ಎಸ್. ಎನ್. ಎಲ್. ನಿವೃತ್ತ ಇಂಜಿನಿಯರ್ ಆಗಿರುವ ಅಣ್ಣಿ ಪೂಜಾರಿ, ಸಿಂಡಿಕೇಟ್ ಬ್ಯಾಂಕ್ ನಿವೃತ ಹಿರಿಯ ಪ್ರಬಂಧಕ ಸೂರ್ಯನಾರಾಯಣ ಭಟ್ ಬೊಳಿಯಂಜಿ, ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಜೊತೆ ಕಾರ್ಯದರ್ಶಿ ಶ್ರೀನಾಥ್, ಉದ್ಯಮಿಗಳಾದ ವಸಂತ ಜೈನ್, ಪ್ರದೀಪ್ ವಿ. ಜಿ., ಗುರುವಾಯನಕೆರೆ ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಜಗನ್ನಾಥ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಹರೀಶ್ ಕಾರಿಂಜ ಇವರು ಸ್ವಾಗತಿಸಿ, ನಿರ್ವಹಿಸಿದರು.

error: Content is protected !!