ಕೃಷಿ ಭೂಮಿಗೆ ನೀರು ಒದಗಿಸಲು ಕಿಂಡಿ ಅಣೆಕಟ್ಟು: ಶಾಸಕ ಹರೀಶ್ ಪೂಂಜ: ಶಾಂತೇರಿ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ

ಮಡಂತ್ಯಾರು: ಕಿಂಡಿ‌ ಅಣೆಕಟ್ಟು‌ ನಿರ್ಮಿಸುವ ಮೂಲಕ ನೂರಾರು ರೈತರ ಕೃಷಿ ಭೂಮಿಗೆ ನೀರು ಹರಿಸುವ ದೂರ ದೃಷ್ಟಿ ಹೊಂದಲಾಗಿದೆ. ನೀರನ್ನು ‌ಉಳಿಸುವ ನಿಟ್ಟಿನಲ್ಲಿ ಹಾಗೂ ಹರಿಯುವ ನೀರನ್ನು ತಡೆದು ಇಂಗಿಸಲು ಪ್ರಾಶಸ್ತ್ಯ ನೀಡಲಾಗುತ್ತಿದೆ. ಜೀವಜಲವನ್ನು ಉಳಿಸುವುದು ಪ್ರತಿಯೊಬ್ಬ ನಾಗರೀಕನ‌ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಮಾಲಾಡಿ ಗ್ರಾಮದ ಶಾಂತೇರಿ ಬಳಿ 1.50 ಕೋ.ರೂ. ವೆಚ್ಚದ ಕಿಂಡಿ ಅಣೆಕಟ್ಟು ಕಾಮಗಾರಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ತಾ.ಪಂ. ಸದಸ್ಯ ಜೋಯೆಲ್ ಮೆಂಡೋನ್ಸಾ, ಶಾಂತೇರಿ ಗುತ್ತುವಿನ ಮಹಾವೀರ ಬಳ್ಳಾಲ್, ಮಾಲಾಡಿ ಗ್ರಾ.ಪಂ. ಸದಸ್ಯರಾದ ಸುಧಾಕರ್ ಆಳ್ವ, ಜಯಂತಿ ನಾರಾಯಣ ನಾಯ್ಕ್, ಮಡಂತ್ಯಾರು ಗ್ರಾ.ಪಂ. ಸದಸ್ಯರಾದ ಉಮೇಶ್ ಸುವರ್ಣ, ಶೈಲೇಶ್, ಮಾಲಾಡಿ ಶಕ್ತಿ ಕೇಂದ್ರ ಅಧ್ಯಕ್ಷ ರೋಹಿತ್ ಪೂಜಾರಿ, ಬೂತ್ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ, ಮಂಡಲ ಕಾರ್ಯದರ್ಶಿ ಪ್ರಶಾಂತ್, ಗ್ರಾ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ಸ್ಥಳೀಯರಾದ ವಿವೇಕ್ ವಿನ್ಸೆಂಟ್ ಪಾಯಸ್, ಸಂತೋಷ್ ಹೆಗ್ಡೆ, ಪ್ರವೀಣ್ ಶೆಟ್ಟಿ, ಆಗ್ನೆಸ್ ಫ್ರಾಂಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!