ನೆರಿಯ: ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆ: ಆರೋಪಿ ಪೊಲೀಸರ ವಶಕ್ಕೆ

ಬೆಳ್ತಂಗಡಿ: ಗಂಡಿಬಾಗಿಲು ಸಮೀಪ ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಹೊಡೆದು ಕೊಲೆಗೈದ ಘಟನೆ ಗುರುವಾರ ರಾತ್ರಿ‌‌ ನಡೆದಿದೆ.


ನೆರಿಯಾ ಗ್ರಾಮದ ಗಂಡಿಬಾಗಿಲು ನಿವಾಸಿ ಸೌಮ್ಯ ಫ್ರಾನ್ಸಿಸ್ (40) ಕೊಲೆಯಾಗಿದ್ದು, ಈಕೆಯ ಪತಿ ಜಾನ್ಸನ್ (47) ಕೊಲೆಗೈದ ಆರೋಪಿಯಾಗಿದ್ದಾನೆ.
ಕೇರಳದ ಇರುಟ್ಟಿ ನಿವಾಸಿಗಳಾಗಿದ್ದು ಗಂಡಿಬಾಗಿಲು ಸಮೀಪ ಜಮೀನು ಹೊಂದಿದ್ದರು. ಇಬ್ಬರೂ ರಬ್ಬರ್ ಟ್ಯಾಪಿಂಗ್ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿ ನಿತ್ಯ ಪತಿ, ಪತ್ನಿ ನಡುವೆ ಗಲಾಟೆ ಸಂಭವಿಸುತ್ತಿದ್ದು ಎನ್ನಲಾಗಿದೆ. ಗುರುವಾರ ಗಲಾಟೆ ವಿಕೋಪಕ್ಕೆ ತೆರಳಿ ಪತಿ ಜಾನ್ಸನ್ ಮರದ ತುಂಡಿನಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ರಾತ್ರಿ 11 ಗಂಟೆಗೆ ಘಟನೆ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ಸೌಮ್ಯ ಅವರನ್ನು ತಕ್ಷಣ ಜಾನ್ಸನ್ ಅವರು ಸ್ಥಳೀಯರ ಸಹಾಯದಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಕೊಂಡೊಯ್ಯುತ್ತಿರುವ ಸಂದರ್ಭ ಆರೋಪಿಯ ಪತ್ನಿ ಮೃತಪಟ್ಟಿದ್ದಾರೆ. ಈ ದಂಪತಿಗೆ 10 ವರ್ಷದ ಹೆಣ್ಣು ಮಗುವೊಂದಿದೆ. ಘಟನೆ ಕುರಿತು ಸೌಮ್ಯ ಅವರ ಸಹೋದರ ಸನೋಜ್ ಫ್ರಾನ್ಸಿಸ್ ಧರ್ಮಸ್ಥಳ ಠಾಣೆಗೆ ದೂರು‌ ನೀಡಿದ್ದು, ಪೊಲೀಸರು ಜಾನ್ಸನ್ ನನ್ನು ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಿದೆ.

error: Content is protected !!