ಕೆ.ಜಿ.ಎಫ್. ಚಾಪ್ಟರ್-2 ಟೀಸರ್ ದಿಢೀರ್ ರಿಲೀಸ್: ಪಾತ್ರ ಪರಿಚಯದೊಂದಿಗೆ ನಿರೀಕ್ಷೆ ಮೂಡಿಸಿದ ರಾಕಿಂಗ್ ಸ್ಟಾರ್ ಸಿನಿಮಾ

ಬೆಂಗಳೂರು: ಜ.8ರಂದು ಯಶ್ ಹುಟ್ಟುಹಬ್ಬದ ಅಂಗವಾಗಿ ಕೆ.ಜಿ.ಎಫ್.2 ಚಿತ್ರತಂಡ ಶುಕ್ರವಾರ ಬೆಳಗ್ಗೆ ಟೀಸರ್ ರಿಲೀಸ್ ಮಾಡಲು ಯೋಜನೆ ರೂಪಿಸಿತ್ತು, ಆದರೆ ಇದೀಗ ದಿಢೀರ್ ಆಗಿ ಗುರುವಾರ ರಾತ್ರಿ 9.29ಕ್ಕೆ ರಿಲೀಸ್ ಮಾಡಿದೆ.


ಶುಕ್ರವಾರ ಬೆಳಗ್ಗೆ 10.18ಕ್ಕೆ ಟೀಸರ್ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಲಾಗಿತ್ತು, ಆದರೆ ಕೆ.ಜಿ.ಎಫ್.ಚಾಪ್ಟರ್ -2 ಟೀಸರ್‌ ಅನ್ನು ‌ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ ಎಂಬ ವಿಚಾರ ಅರಿತ ಚಿತ್ರತಂಡ, ಕೂಡಲೇ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಅಕೌಂಟ್ ಮೂಲಕ ಟೀಸರ್ ಬಿಡುಗಡೆ ಮಾಡಿದೆ. ಇದೀಗ ರಾತ್ರಿಯೆ ಬಿಡುಗಡೆ ಮಾಡಿರುವುದು ಯಶ್ ಅಭಿಮಾನಿಗಳಿಗೆ ಹಾಗೂ ಕೆ.ಜಿ.ಎಫ್. ಚಾಪ್ಟರ್ -2 ಸಿನಿಮಾ ವೀಕ್ಷಣೆಗೆ ಕಾದಿದ್ದ ಪ್ರೇಕ್ಷಕರಿಗೆ ಉತ್ತರ ಸಿಕ್ಕಿದೆ.


ಟೀಸರ್ ನಲ್ಲಿ ಕೆ.ಜಿ.ಎಫ್.ಚಾಪ್ಟರ್ -2 ಸಿನಿಮಾದಲ್ಲಿ ರಮಿಕಾ‌ಸೇನ್ ಪಾತ್ರ, ಅಧೀರನ ಅವತಾರ, ರಾಕಿಯ ಹೊಸ ಲುಕ್ ಗಳ ಝಲಕ್ ಕಾಣ ಸಿಗುತ್ತದೆ. ಹಿನ್ನೆಲೆ‌ ಸಂಗೀತ, ಸಾಲು ಸಾಲು ಪಂಚಿಂಗ್ ಡೈಲಾಗ್ ಗಳು ಇರೋದು ಕನ್ಪರ್ಮ್ ಆಗಿದೆ. ಒಟ್ಟಿನಲ್ಲಿ ಚಿತ್ರಮಂದಿರಗಳಲ್ಲಿ ನಿರೀಕ್ಷಿಸಿ ಎನ್ನುವ ಸಾಲುಗಳೊಂದಿಗೆ ಕೆ.ಜಿ.ಎಫ್. ಚಾಪ್ಟರ್ -2 ಸಿನಿಮಾದಲ್ಲಿ ಮನರಂಜನೆಯ ರಸದೌತಣ ಸಿನಿ‌ಪ್ರೇಮಿಗಳಿಗಾಗಿ ಕಾದಿದೆ‌ ಎನ್ನುವ ಸೂಚನೆಯನ್ನು ಚಿತ್ರತಂಡ ಟೀಸರ್ ಮೂಲಕ ರವಾನಿಸಿದಂತಾಗಿದೆ.

error: Content is protected !!